ಗುರುವೆಂದರೆ……
ಗುರುವೆಂದರೆ ಗುರಿಯ ಅರಿವು
ಅರಿವಿನೊಳಗಿದೆ ಇಹದ ಇರುವು!
ಅರಿವಿನೊಳಗಿದೆ ಪರಮಾನಂದ
ಅದು ದೊರೆಯುವುದು ಗುರುವಿನಿಂದ!
ದ್ವೇಷ-ದೋಷವಿಲ್ಲದ ಚೈತನ್ಯ
ನಿನ್ನ ಪಡೆದವನೆ ಧನ್ಯ!
ಸತ್ಯ ತತ್ವ ನಂಬಿ
ಭರವಸೆ ತುಂಬಿ!
ಬಾಳೆಯಂತೆ ಬಾಗಿ
ತೆಂಗಿನಂತೆ ತೂಗಿ!
ಬೆಳಗುವ ನಿತ್ಯ ಬೆಳಕು
ನಿತ್ಯ ತೊಳಯುವೆ ಕೊಳಕು!
ಅಡಗಿಸುವೆ ಅಸೂಯೆ
ತೊಲಗಿಸುವೆ ಮಾಯೆ!
ನೀನೇ ತ್ರಿಮೂರ್ತಿ
ಬೆಳಗಿಸುವೆ ಕೀರ್ತಿ!
ದೀಪದಿಂದ ದೀಪ ಹೊತ್ತಿಸಿ
ಆ ಬೆಳಕಿನೊಳಗೆ ಮಥಿಸಿ!
ಮಹಾನಂದದ ಗುರುವೆ
ಜಗದ ಚಲುವು ನೀವೆ!
ಆರಾಧಿಸೋಣ ಗುರುವ
ಬೆಳಗಿಸೋಣ ಒಲವ!.
-
-ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್
ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ.
ಶಿವಮೊಗ್ಗ
*****