ವಿಜಯನಗರ: ಸರಕಾರಿ ಪ್ರಥಮ‌ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾಗಿ ಗುಜ್ಜಲ‌ ಹುಲುಗಪ್ಪ ಆಯ್ಕೆ

ಹೊಸಪೇಟೆ(ವಿಜಯನಗರ), ಜು.16: ಸರಕಾರಿ ಪ್ರಥಮ‌ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ವಿಜಯನಗರ ಜಿಲ್ಲಾಧ್ಯಕ್ಷರಾಗಿ ನಗರದ ಎಸ್.ಎಸ್.ಎ.ಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗುಜ್ಜಲ‌ ಹುಲುಗಪ್ಪ ಆಯ್ಕೆಯಾಗಿದ್ದಾರೆ.
ಶುಕ್ರವಾರ ನಗರದಲ್ಲಿ‌ ಜರುಗಿದ ಜಿಲ್ಲಾ ಮಟ್ಟದ ಸಭೆಯಲ್ಲಿ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಗೌರವ ಅಧ್ಯಕ್ಷರಾಗಿ ಮರಿಯಮ್ಮನಹಳ್ಳಿಯ ಎರಿಸ್ವಾಮಿ,
ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಹೊಸಪೇಟೆಯ‌ ಅಕ್ಕಿ ಮಲ್ಲಿಕಾರ್ಜುನ್, ಖಜಾಂಚಿಯಾಗಿ ಡಾ.‌ಷಣ್ಮುಖಪ್ಪ‌ ಬೋದೂರು, ಉಪಾಧ್ಯಕ್ಷರಾಗಿ ಕೂಡ್ಲಿಗಿಯ ಭೀಮಲಿಂಗಪ್ಪ, ಹಗರಿಬೊಮ್ಮನಹಳ್ಳಿಯ ಚಿಂತ್ರಪಳ್ಳಿ ಶಿವಮೂರ್ತಿ, ಹಡಗಲಿಯ ಸುಬ್ಬಯ್ಯ, ಹರಪನಹಳ್ಳಿಯ ಕೊಟ್ರೇಶ್ ಅವರನ್ನು ಸಭೆಯಲ್ಲಿ ಅವಿರೋಧವಾಗಿ ಆಯ್ಕೆಮಾಡಲಾಯಿತು.
*****