ಅನುದಿನ ಕವನ-೫೬೩, ಕವಿ: ಅನಾಮಿಕ ಕನ್ನಡಕ್ಕೆ:ಮಂಜುಳಾ ಕಿರುಗಾವಲು, ಮಂಡ್ಯ

ನನ್ನ ಮನೆಯ ಪ್ರತಿ ಮೂಲೆಯಲ್ಲೂ
ನಿನ್ನ ನೆನಪಿನ ರಾಶಿಗಳು ಹರಡಿರುವೆ

ಯಾರಾದರೂ ಮನೆಗೆ ಬಂದಾಗ ಕೇಳುತ್ತಾರೆ
ಇವೆಲ್ಲಾ ಯಾರ ವಸ್ತುಗಳು ಎಂದು…!

ನಾನು ನಗುತ್ತಲೇ ಹೇಳುತ್ತೇನೆ
ಇವೆಲ್ಲಾ ನನ್ನ ನೆನಪುಗಳು…

ಮತ್ತೇ ಈ ನೆನಪುಗಳ ಮೇಲ್ಯಾಕೆ ಇಷ್ಟು
ಧೂಳು ಅಂಟಿದೆ ಎನ್ನುತ್ತಾರೆ ಅವರು

ನಾನು ಹೇಳುತ್ತೇನೆ….
ಅದು ಧೂಳಲ್ಲ ‘ಸಮಯ’
ಹೀಗೆ ಇರಲಿ ಬಿಡಿ..
ಎಂದಾದರೂ ಒರೆಸುತ್ತೇನೆ
ಆಗ ನೆನಪುಗಳು ತಾಜಾಗೊಳ್ಳುತ್ತವೆ

– ಅನಾಮಿಕ
ಕನ್ನಡಕ್ಕೆ : ಮಂಜುಳ ಕಿರುಗಾವಲು, ಮಂಡ್ಯ
*****