ಅನುದಿನ ಕವನ-೫೬೭, ಕವಿ:ಗಾನಾಸುಮಾ ಪಟ್ಟಸೋಮನಹಳ್ಳಿ, ಮಂಡ್ಯ, ಕವನದ ಶೀರ್ಷಿಕೆ: ನಾ… ಹೂವಾಗಬೇಕಿತ್ತು!

ನಾ….ಹೂವಾಗಬೇಕಿತ್ತು!

ನಾನು
ಹೀಗೆ
ಹೂವಾಗಿ
ಹುಟ್ಟಬೇಕಿತ್ತು
ಮುಂಜಾನೆ
ಅರಳಿ
ಮಧ್ಯಾಹ್ನ
ಘಮಿಸಿ
ನಾರಿಯ
ಮುಡಿಗೋ?
ದೇವರ
ಗುಡಿಗೋ
ಮೀಸಲಾಗಿ,
ಇಲ್ಲವಾದರೆ
ಸಂಜೆ ತನಕ
ಎಲ್ಲರ ನೊಟಕ್ಕೆ
ಸಿಲುಕಿ
ಬದುಕ ಮುಗಿಸಿ
ಧನ್ಯನಾಗಿಬಿಡುತಿದ್ದೆ..!

-ಗಾನಾಸುಮಾ ಪಟ್ಟಸೋಮನಹಳ್ಳಿ, ಮಂಡ್ಯ
*****