ಬಂಧ
ನಿನ್ನ ಕಿರು ನಗೆ ಸಾಗರದಷ್ಟು ಪ್ರೀತಿ ತುಂಬುವುದು ಅದೆಷ್ಟು ಚೆಂದ||
ನಿನ್ನ ಕಣ್ಣೋಟ ಕರಗಲಾರದಷ್ಟು ಕನಸು ಕೊಡುವುದು ಅದೆಷ್ಟು ಚೆಂದ||
ಕಷ್ಟಗಳನ್ನು ದೂರ ಸರಿಸಿ ಸಂತಸ ಹರಡುವ ನಗು ಮುಖದಲ್ಲಿ|
ನಿನ್ನ ಮುಂಗುರುಳು ಹೊರಳಾಡಿದಷ್ಟು ಕಣ್ಣಿಗೆ ಹಬ್ಬ ನೀಡುವುದು ಅದೆಷ್ಟು ಚೆಂದ||
ದಣಿವರಿಯದೆ ದುಡಿಯುತ ಜೀವ ತೇಯ್ದ ಮನವು ಹಾಡುವುದು|
ನಿನ್ನ ದನಿ ಕೇಳಿದಷ್ಟು ದಿಲ್ ಖುಷಿಯಾಗುವುದು ಅದೆಷ್ಟು ಚೆಂದ||
ಮಾತಿಗೆ ಮಾತು ಸೇರಿ ಸೋತು ಹೋಗಿ ಮಾರಿ ತಿರುವಿದಾಗ|
ನಿನ್ನ ಮುಖದಲ್ಲಿ ಸಿಟ್ಟು ಕಂಡಷ್ಟು ಒಳಗೊಳಗೆ ನಗೆ ತರುವುದು ಅದೆಷ್ಟು ಚೆಂದ||
‘ಗಟ್ಟಿಸುತ’ನ ಮುಷ್ಠಿ ಹೃದಯದಲ್ಲಿ ಜೀವದ ಗುಟ್ಟನೆಲ್ಲ ಕಟ್ಟಿರುವೆ|
ನಿನ್ನ ಬಿಟ್ಟು ಬದುಕಲಾರದಷ್ಟು ಬಂಧನ ಬೆಸೆದಿರುವುದು ಅದೆಷ್ಟು ಚೆಂದ||
-ಎಂ.ಡಿ.ಬಾವಾಖಾನ ಸುತಗಟ್ಟಿ, ಮಲ್ಲಮ್ಮನ ಬೆಳವಡಿ
*****