👉ಐದು ಹನಿಗವಿತೆಗಳು👇
1.ಸ್ಪೂರ್ತಿ👇
ನನ್ನವರ
ಸಹಕಾರ
ಇರಲು ಪೂರ್ತಿ ;
ಕವನ ಬರೆಯಲು
ಬಂದಿತು
ನನಗೆ ಸ್ಪೂರ್ತಿ.
2.ದರ್ಪ👇
ದರ್ಪ ತೋರುವ
ಗಂಡನೊಂದಿಗೆ
ಬಾಳುವುದೆಂದರೆ
ಬಿರುಗಾಳಿಗೆ
ಸಿಕ್ಕ
ತರಗೆಲೆಯಂತೆ.
3.ಒಳಮನ👇
ಬಂಗಾರವೇತಕೆ
ಬಂಗಾರದಂತಹ
ಗಂಡನೇ ಇರುವಾಗ
ಎಂದು
ನಾಲಿಗೆ ಉಲಿದರೂ
ಬಂಗಾರವನ್ನೇ
ಬಯಸುವುದು
ಒಳಮನ.
4.ಪ್ರೀತಿ👇
ನನ್ನ ಮೇಲೆ
ಪ್ರೀತೀನೆ ಇಲ್ಲಾಂತ
ಯಾಕೆ
ಕೋಪಿಸಿಕೊಳ್ತೀಯಾ ?
ನಲ್ಲಾ ;
ನನ್ನಲ್ಲಿ
ಹುದುಗಿರುವ
ನೂರಾಸೆಗಳನ್ನು
ಹೇಗೆ ತೆರೆದಿಡಲಿ ಎಲ್ಲಾ.
5.ಹೆಣ್ಣು👇
ಹೆಣ್ಣು ಯಾವಾಗಲೂ
ತಿಳಿಗೊಳದಂತೆ
ಇರಬೇಕು ಎಂದು
ನೀನು ಹೇಳುವುದು ನಿಜ
ಆದರೆ,
ಕೊಳದಲ್ಲಿ
ಕಲ್ಲೆಸೆದು
ರಾಡಿ ಮಾಡಿದೆಯಲ್ಲಾ.
-ಶೋಭಾ ಮಲ್ಕಿ ಒಡೆಯರ್🖊️
ಹೂವಿನ ಹಡಗಲಿ
*****