ಬಳ್ಳಾರಿ, ಜು.25: ಕೊವೀಡ್ ಹಿನ್ನಲೆಯಲ್ಲಿ ರದ್ದಾಗಿದ್ದ ಗುಂತಕಲ್-ಬಳ್ಳಾರಿ- ಚಿಕ್ಕಜಾಜೂರು ರೈಲು ಸಂಚಾರವನ್ನು ಸೋಮವಾರ ಪುನಾರಾರಂಭಿಸಿತು.
ಬೆ. 9ಗಂಟೆಗೆ ಬಳ್ಳಾರಿಗೆ ಆಗಮಿಸಿದ ರೈಲನ್ನು ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಅಧ್ಯಕ್ಷ ಕೆ.ಎಂ .ಮಹೇಶ್ವರಸ್ವಾಮಿ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಹರ್ಷೋದ್ಗಾರಗಳಿಂದ ಸ್ವಾಗತಿಸಿದರು
ಈ ಹಿಂದೆ ಪ್ಯಾಸೆಂಜರ್ ರೈಲು ಆಗಿ ಸಂಚರಿಸುತ್ತಿದ್ದ ಈ ರೈಲು ಇಂದಿನಿಂದ ಎಕ್ಸ್ ಪ್ರೆಸ್ ರೈಲ್ ಆಗಿ ಸಂಚರಿಸುತ್ತದೆ.
ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ರೈಲಿಗೆ ಪೂಜೆ ಸಲ್ಲಿಸುವುದರ ಮೂಲಕ ರೈಲನ್ನು ಸ್ವಾಗತಿಸಿ ಬೀಳ್ಕೊಡಲಾಯಿತು
ರೈಲು ನಿಲ್ದಾಣದ ಅಧೀಕ್ಷಕ ಶೇಷಾದ್ರಿ ಹಾಗೂ ಕ್ರಿಯಾ ಸಮಿತಿಯ ಪದಾಧಿಕಾರಿಗಳು ರೈಲಿಗೆ ಹಸಿರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ತುಂಗಭದ್ರ ರೈತಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ನಿಷ್ಠಿ ರುದ್ರಪ್ಪ, ಜನಕಲ್ಯಾಣ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಕೆ. ಯರಿಗೌಡ, ಹಿರಿಯ ನಾಗರಿಕರಾದ ಆನೆ ಗಂಗಣ್ಣ, ಎನ್ ಸಿ ವೀರಭದ್ರಪ್ಪ, ಸಮಿತಿಯ ಪದಾಧಿಕಾರಿಗಳಾದ ಕಮಲಾ ಬಸವರಾಜ್, ನಗರಸಭೆಯ ಮಾಜಿ ಸದಸ್ಯರಾದ ಜಿ.ರಾಮಚಂದ್ರಯ್ಯ, ಪರ್ವೀನ್ ಬಾನು, , ಎಚ್ ಕೆ ಗೌರಿ ಶಂಕರ್, ಹಂಪೇರು ಹಾಲೇಶ ಗೌಡ,
ಕೆಎಂ ಕೊಟ್ರೇಶ, ಗಂಗಾವತಿ ವೀರೇಶ್, ಸೂರ್ಯಪ್ರಕಾಶ್, ಮಾಜಿ ಮಂಡಲ ಪ್ರಧಾನ
ಷಣ್ಮುಖಯ್ಯು, ಎಣ್ಣೆ ಏರಿಸ್ವಾಮಿ, ಜಾಲಿಹಾಳ್ ಶ್ರೀಧರ್ ಗೌಡ, ಕೇದಾರ ಸ್ವಾಮಿ , ಕಿತ್ತೂರಿನ ಡಾ. ಮಹಂತೇಶ್ ಕಲ್ಮಠ, ಈಶ್ವರಯ್ಯ ಹಿರೇಮಠ್ ಇತರರು ಉಪಸ್ಥಿತರಿದ್ದರು.
*****