ಅನುದಿನ‌ ಕವನ-೫೭೩, ಕವಿ: ಮಹಮ್ಮದ್ ರಫೀಕ್, ಕೊಟ್ಟೂರು, ಕವನದ ಶೀರ್ಷಿಕೆ: ಚಪ್ಪಲಿಗಳು

ಚಪ್ಪಲಿಗಳು


ಚಪ್ಪಲಿಗಳು ತಾವೇ ಚಲಿಸಲಾರವು
ಮನೆ ಹೊರಗೇ
ಒಂದು ಮತ್ತೊಂದರ ಸಾಂತ್ವಾನಗೈಯುತ
ಹೊರಗೇ
ಒಡೆಯನ ನಿರೀಕ್ಷೇಯಲೇ
ಅವನ ದಾರಿ ಕಾಯುತಿಹವು

ಬೆನ್ನ ಮೇಲೆ ಒಡೆಯನ
ಕಾಲುಗಳು
ಕಣ್ಣು ಕಿವಿಗಳ ಮುಚ್ಚಿಕೊಂಡಿಹವು
ತನ್ನವರು ಕಾಣದಂತೆ , ಕೇಳದಂತೆ
ಹೊರಗೇ
ಒಡೆಯನ ನಿರೀಕ್ಷೇಯಲೇ
ಅವನ ದಾರಿ ಕಾಯುತಿಹವು

ಕಲ್ಲು ಮುಳ್ಳುಗಳಿಗೆ
ತನ್ನ ಎದೆಯೊಡ್ಡಿ
ಕೊಚ್ಚೆಯಲೂ  ನಡೆಯುವ ಅವನ
ಕಾಲುಗಳ ಅಪ್ಪಿಕೊಂಡಿಹವು
ಕೊನೆಗೆ ಹೊರಗೇ
ಒಡೆಯನ ನಿರೀಕ್ಷೇಯಲೇ
ಅವನ ದಾರಿ ಕಾಯುತಿಹವು

ಎದೆ ಸವೆದು ಬೆನ್ನು ಬಾಗಿದರೂ
ಬೆನ್ನು ಬಿಡದ ಅವನು
ತುಳಿಯುತಿಹನು ತುಳಿಯುತಲೆ ಇಹನು
ಕೊನೆಗೆ ಹೊರಗೇ
ಒಡೆಯನ ನಿರೀಕ್ಷೇಯಲೇ
ಅವನ ದಾರಿ ಕಾಯುತಿಹವು

-ಮಹಮ್ಮದ್ ರಫೀಕ್ ಕೊಟ್ಟೂರು
*****