ಬಳ್ಳಾರಿ, ಜು.28: ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಲು ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕರಾಪ್ರಾ ಶಾಲಾ ಶಿಕ್ಷಕರ ಸಂಘಗಳು ಉಚಿತವಾಗಿ ನೆರವು ನೀಡುತ್ತಿವೆ.
ಆದಾಯ ತೆರಿಗೆ ಇಲಾಖೆ ಜು.31 ಅಂತಿಮ ದಿನಾಂಕ ಎಂದು ಘೋಷಿಸಿರುವ ಹಿನ್ನಲೆಯಲ್ಲಿ ಸರಕಾರಿ ನೌಕರರಲ್ಲಿ ಹೆಚ್ಚು ಸಂಖ್ಯೆಯಲ್ಲಿರುವ ಶಿಕ್ಷಕರಿಂದ ಅಗತ್ಯ ದಾಖಲೆಗಳನ್ನು ಪಡೆದು ತಾಲೂಕಿನ ಪೂರ್ವ ಮತ್ತು ಪಶ್ಚಿಮ ವಲಯದ ಸಂಘದ ಕಚೇರಿಗಳಲ್ಲಿ ಪದಾಧಿಕಾರಿಗಳು ಕಳೆದ ವಾರದಿಂದ ಐಟಿಆರ್ ಇ-ಫೈಲಿಂಗ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಪೂರ್ವ ವಲಯದ ಶಿಕ್ಷಕರಿಗೆ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಕಾರ್ಯಾಲಯದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷ ಎನ್. ರಮೇಶ್, ಕಾರ್ಯದರ್ಶಿ ಗಿರೀಶ್ ಅವರ ನೇತೃತ್ವದ ಹತ್ತಕ್ಕೂ ಹೆಚ್ಚು ಜನ ಶಿಕ್ಷಕರು ತಮ್ಮ ಬಿಡುವಿನ ವೇಳೆಯಲ್ಲಿ ಇ-ಫೈಲಿಂಗ್ ಗೆ ನೆರವಾಗುತ್ತಿರುತ್ತಿರುವುದು ಶಿಕ್ಷಕರ ಸಮುದಾಯದಲ್ಲಿ ಹರ್ಷ ಮೂಡಿಸಿದೆ.
ಶಿಕ್ಷಕರಾದ ದಮ್ಮೂರು ವೀರೇಶ್ ಸಂಗಡಿಗರು, ತಿಪ್ಪಾರೆಡ್ಡಿ ಜಿ.ವೈ, ಯಾಳ್ಪಿ ಬಸವರಾಜ್, ಶಿಡಗಿನಮೊಳ ಸಿ ಆರ್ ಪಿ ಕೆಂಚಪ್ಪ, ಮುತ್ತಣ್ಣ, ವೃಷಬೇಂದ್ರಯ್ಯ ಸ್ವಾಮಿ, ಹನುಮಂತಪ್ಪ, ನಂದೀಶ್ ಪುಂಡಿ, ಎಕೆ ಮಲ್ಲಿ, ಹುಬ್ಬಳ್ಳಿ ಮುತ್ತಣ್ಣ, ಜಿ ಎಂ ಬಸವರಾಜ್, ವಿಶ್ವನಾಥ ರೆಡ್ಡಿ, ಹಳೇ ಯರ್ರಗುಡಿ ಮಲ್ಲಿಕಾರ್ಜುನ ಅವರು ತಾಂತ್ರಿಕ ನೆರವಿನ ಮೂಲಕ ಇ ಫೈಲ್ ಪ್ರಕ್ರಿಯೆಯಲ್ಲಿ ತೊಡಗಿಸಿ ಕೊಂಡಿದ್ದಾರೆ.
ಪಶ್ಚಿಮ ವಲಯದ ಶಿಕ್ಷಕರಿಗೆ ಸಂಘದ ಕುರುಗೋಡು ತಾಲೂಕು ಅಧ್ಯಕ್ಷ ತುಕಾರಾಂ ಗೊರವರ್ ಹಾಗೂ ಶೇಕ್ಷಾವಲಿ ಅವರ ತಂಡ ನಗರದ ರೇಡಿಯೋ ಪಾರ್ಕ್ ನಲ್ಲಿರುವ ಶಿಕ್ಷಕರ ಸಂಘದ ಜಿಲ್ಲಾ ಕಚೇರಿ ಹಾಗೂ ಕುರುಗೋಡು ಪಟ್ಟಣದಲ್ಲಿ ನೆರವು ನೀಡುತ್ತಿದೆ.
*****