ಅನುದಿನ ಕವನ-೫೭೪, ಕವಿ: ಮನಂ, ಬೆಂಗಳೂರು, ಚಿತ್ರಗಳು: ಶಿವಶಂಕರ‌ ಬಣಗಾರ, ಹೊಸಪೇಟೆ

ನೆನಪುಗಳ ಕಂತೆ ಕಟ್ಟಿಕೊಟ್ಟ
ದಿನಕರ ದಿನದ ತನ್ನ ಕೆಲಸ ಮುಗಿಸಿ
ತನ್ನ ಮನೆಯ ಮಡಿಲ ಸೇರಿದ
ತನ್ನ ಬಳಗ ಚಂದಿರನ ತಂದು
ನನ್ನ ಕಣ್ಣ ಮುಂದೆ ಇರಿಸಿ
ಬೆಳದಿಂಗಳಿನಲ್ಲಿ ಮರೆಯಾದ
ಮರೆಯಾದ ಸೂರಜನ ನೆನೆಯುತ್ತಾ
ಮೋಡವ ಒರಗಿದ ಸುಂದರ ಚಂದಿರನ
ನೋಡುತ್ತಾ ನೋಡುತ್ತಾ ನಿಂತಿರುವಾಗ ನಾನು ನಿನಗಾಗಿ ನನ್ನ ಕಿವಿಯಲ್ಲಿ ತಿಂಗಳನು ಉಸಿರಿದ ಮಾತನು ನಿನಗೆ
ಹೇಳುವೆ “ಚಲುವಿ ಕಂದಿರುಳಲ್ಲಿ
ಪವಡಿಸಿ ನನ್ನ ಕನಸು ಕಾಣುತ್ತಾ
ಸುಖ ನಿದ್ರೆಗೆ ಜಾರಿಬಿಡು”.

– ಮನಂ, ಬೆಂಗಳೂರು
*****