ಮೈಸೂರು, ಆ.5: ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ಅವರ ಹುಟ್ಟುಹಬ್ಬದ ಅಂಗವಾಗಿ ನಗರದ ಬಾಳೆಎಲೆ ಪ್ರೊಡಕ್ಷನ್ ಅವರು ನಿರ್ಮಿಸಿದ ಸಾಕ್ಷ್ಯಚಿತ್ರ ಇಂದು(ಆ.5) ಚಂದನ ವಾಹಿನಿಯಲ್ಲಿ ರಾತ್ರಿ 7-30 ಗಂಟೆಗೆ ಪ್ರಸಾರವಾಗಲಿದೆ.
ತುಮಕೂರು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಆಗಿರುವ ಡಾ. ಜಿ ಪರಮೇಶ್ವರ ಅವರ ಜೀವನ, ಹೋರಾಟ, ಸಾಧನೆ ಕುರಿತು ವಿಶ್ರಾಂತ ಪ್ರಾಧ್ಯಾಪಕ, ನಿರ್ಮಾಪಕ ಡಾ.ಮಾದೇವ ಭರಣಿ ಅವರು ಸಾಕ್ಷ್ಯಚಿತ್ರ ವನ್ನು ನಿರ್ದೇಶಿಸಿದ್ದಾರೆ.
*****