ಅನುದಿನ‌ ಕವನ-೫೮೩, ಕವಿ: ಎಂ.ಎಂ‌. ಶಿವಪ್ರಕಾಶ್, ಹೊಸಪೇಟೆ, ಕವನದ ಶೀರ್ಷಿಕೆ: ಕಾವ್ಯಕನ್ಯೆ! ಚಿತ್ರಗಳು: ಶಿವಶಂಕರ ಬಣಗಾರ, ಹೊಸಪೇಟೆ

ಕಾವ್ಯಕನ್ಯೆ!!!

ಸದಾ ಉತ್ಸಾಹ ನಗುಮುಖದ ಇವಳು ಕ್ರಿಯಾಶೀಲವಾಗಿ ಹರಿಯುವ ಜೀವಂತ ನದಿಯಂತೆ . ಉಕ್ಕಿ ಹರಿದ ನದಿಯಂತೆ ಇವಳು ನಗು. ಭಂಗಿ ಮೋಹಕ. ನೋಟ ಮನಮೋಹಕ.

ಜಂಬ ಒನಪು ವೈಯಾರದ ನಡಿಗೆ. ಹುಣ್ಣಿಮೆಯ ಚಂದಿರನಂತಿರುವ ಮುಖಕ್ಕೆ ಕಪ್ಪು ಕನ್ನಡಕ. ಬಿರು ಬಿಸಿಲಿನಲ್ಲಿಯು ತಂಪು ನೀಡುವ ಕಣ್ಣೋಟ.
ಶಾಲಾಬಾಲಕಿಯರ ನಡುವೆ ಇವಳು ಥೇಟ್ ಬೇಲೂರು ಶಿಲಾಬಾಲಕಿ.

ನಡೆದಾಡುವ ಈ ಶಿಲಾಬಾಲಕಿ ಎದುರಾದಾಗ ಇವಳ ಮುಗುಳು ನಗು ಮನದ ಥರ್ಮೋವೀಟರಿಗೂ ನಿಲುಕದು.
ಇವಳನ್ನು ,ಇವಳ ಪೋಟೋಗಳನ್ನು ನೋಡಿದಾಗ ಹಗಲು ರಾತ್ರಿಗಳಲ್ಲಿ ನೆನಪುಗಳ ಮೆರವಣಿಗೆ.
ಈ ಮೆರವಣಿಗೆಯಲ್ಲಿ ನಾಚಿನೀರಾದವಳು ಈ ಕಾವ್ಯಕನ್ಯೆ.

-ಎಂ.ಎಂ.ಶಿವಪ್ರಕಾಶ್. ಹೊಸಪೇಟೆ.👆

PC: Shivashankar Banagar, Hosapete👇


*****