ಸಂಡೂರಿನ ವಿಠಲಾಪುರ ಕ್ಲಸ್ಟರ್ ವಲಯ ಮಟ್ಟದ ಕ್ರೀಡಾಕೂಟ: ಚಿಕ್ಕಂತಪುರ ಬಾಲಕಿಯರು ತಾಲೂಕು ಮಟ್ಟಕ್ಕೆ ಆಯ್ಕೆ

ಸಂಡೂರು, ಆ.10: ವಿಠಲಾಪುರ ಕ್ಲಸ್ಟರ್ ವಲಯ ಮಟ್ಟದ ಕ್ರೀಡಾಕೂಟವು ತಾಲೂಕಿನ ಕೋಡಲು ಗ್ರಾಮದಲ್ಲಿ ನಡೆಯಿತು.
ಚಿಕ್ಕಂತಪುರ ಗ್ರಾಮದ ಬಾಲಕಿಯರು ಕಬ್ಬಡಿ ಆಟದಲ್ಲಿ ಸತತವಾಗಿ 5ನೇ ಬಾರಿಗೆ ವಲಯ ಮಟ್ಟದಲ್ಲಿ ವಿಜಯಶಾಲಿಯಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇದೇ ಮೊದಲ ಬಾರಿಗೆ ಬಾಲಕರು ಕಬ್ಬಡ್ಡಿ ಸಹ ವಲಯ ಮಟ್ಟದಲ್ಲಿ ಗೆದ್ದು, ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರು ಕೆ.ಜಂಭಯ್ಯಾ, ಸಹ ಶಿಕ್ಷಕರಾದ ಎಸ್.ವಿ. ರಂಗಸ್ವಾಮಿ, ಇ.ಜಿ. ಪ್ರಿಯದರ್ಶಿನಿ ಮತ್ತು ಅತಿಥಿ ಶಿಕ್ಷಕರು ಇದ್ದರು.
ಕಬ್ಬಡಿ ತಂಡ ಗೆಲ್ಲಲು ತರಬೇತಿದಾರರಾದ ಎನ್. ಶೇಖಪ್ಪ, ಎನ್.ನಿಂಗರಾಜ ಎನ್.ಲಕ್ಷೀಪತಿ ಎನ್.ಶಂಕರ ಶ್ರಮಿಸಿದರು. ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಉಪಾಧ್ಯಕ್ಷರು,, ಗ್ರಾಮ ಪಂಚಾಯತಿ ಸದಸ್ಯರು, ಊರಿನ ಮುಖಂಡರು ಶಾಲಾ‌ ಮಕ್ಕಳಿಗೆ ಉತ್ತೇಜಿಸಿದರು.
*****