ಸಮಾಜಮುಖಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಎನ್ ಎಸ್ ಎಸ್ ಸಹಕಾರಿ -ಮಧುರಚೆನ್ನಶಾಸ್ತ್ರಿ

ಹೊಸಪೇಟೆ, ಆ.13: ಸಮಾಜಮುಖಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಎನ್.ಎಸ್.ಎಸ್ ಸಹಕಾರಿ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮಧುರಚೆನ್ನಶಾಸ್ತ್ರಿ ಹೇಳಿದರು.


ನಗರದ ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಚಿತ್ತವಾಡಗಿಯ ವಿನೋಬಾ ಭಾವೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಶಿಬಿರವು ಯುವಕರ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಲಿ ಎಂದು ಹಾರೈಸಿದರು.
ಶಿಬಿರದ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಕಾಲೇಜಿನ‌ ನಿಕಟ ಪೂರ್ವ ಪ್ರಾಚಾರ್ಯ ಡಾ.ಬಿ.ಜಿ.ಕನಕೇಶಮೂರ್ತಿ ಅವರು ಮಾತನಾಡಿ
ಶಿಬಿರದ ಮೂಲಕ ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದರು.


ರಾಷ್ಟ್ರೀಯತೆ, ಸೇವಾ ಮನೋಭಾವ, ಯೋಜನಾ ಬದ್ಧ ನಡೆ ಮೂಲಕ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ ಹಾಗೂ ಮಹತ್ವವನ್ನು ಕುರಿತು ಮಾತನಾಡಿದರು. ಅವರು ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ರತ್ನಮ್ಮ, ಎಸ್.ಡಿ.ಎಮ್.ಸಿ ಅಧ್ಯಕ್ಷೆ ಸರೋಜ ಹಿರೇಮಠ,ಉಪಾಧ್ಯಕ್ಷ ಸಂತೋಷ,ಸದಸ್ಯ ಬಾಬು ಮಾತನಾಡಿದರು.
ಇತಿಹಾಸ ವಿಭಾಗದ ಮುಖ್ಯಸ್ಥ ಮಲ್ಲಿಕಾರ್ಜುನಯ್ಯ ಡಿ.ಎಂ ಅವರು ಅಧ್ತಕ್ಷತೆ ವಹಿಸಿದ್ದರು.


ರಘುಪ್ರಸಾದ ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ವಿಶ್ವ ವಿದ್ಯಾಲಯ ಘಟಕದ ಕಾರ್ಯಕ್ರಮಾಧಿಕಾರಿಗಳಾದ ರಾ.ಸೇ.ಯೋಜನೆಯ ಸ್ವ ಆರ್ಥಿಕ ಘಟಕದ ಸುರೇಶ ಬೂದನೂರು ಸ್ವಾಗತಿಸಿದರು. ಕನ್ನಡ ವಿಭಾಗದ ಡಾ.ಬಸವರಾಜ ಡಿ ವಂದಿಸಿದರು. ಇತಿಹಾಸ ವಿಭಾಗದ ಅಕ್ಕಿ ಮಲ್ಲಿಕಾರ್ಜುನ ಕಾರ್ಯಕ್ರಮ ನಿರೂಪಿಸಿದರು.
ಶಿಬಿರಾರ್ಥಿಗಳಾದ ಮೇಘ ಮತ್ತು ಸಂಗಡಿಗರು ಪ್ರಾರ್ಥಿಸಿದರು.ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಮಂಜುನಾಥ ಆರೆಂಟನೂರು ಹಾಗೂ ಉಪನ್ಯಾಸಕರಾದ ಗದ್ದಿಗೇಶ, ಮುರಳೀಧರ, ತಿಪ್ಪೇಸ್ವಾಮಿ, ಹುಲುಗಪ್ಪ, ಗಾದೆಪ್ಪ ಮತ್ತಿತರರು ಉಪಸ್ಥಿತರಿದ್ದರು.
*****