🇮🇳 ಅಮೃತೋತ್ಸವ 🇮🇳
ದೇಶದಾದ್ಯಂತ ಅಮೃತ ಮಹೋತ್ಸವವ
ಸಂಭ್ರಮಿಸುವ ಈ ಹೊತ್ತು
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ
ಪ್ರತಿಯೊಬ್ಬ ಮಹನೀಯರೂ ಮಾಣಿಕ್ಯ, ಮುತ್ತು !
ಎಪ್ಪತೈದನೆಯ ಸ್ವಾತಂತ್ರ್ಯೋತ್ಸವ ಈ ದಿನ
ಸಡಗರ ಸಂಭ್ರಮದ ಉತ್ಸವ
ಅದುವೇ ಅಮೃತ ಮಹೋತ್ಸವ ಸುದಿನ
ನಮ್ಮ – ನಿಮ್ಮೆಲ್ಲರ ನಿತ್ಯೋತ್ಸವ !
ಬ್ರಿಟಿಷರ ಕಪಿ ಮುಷ್ಟಿಯಿಂದ ಕಸಿದು
ಸಾವಿಗೂ ಹೆದರದೆ ಎದೆಯೊಡ್ಡಿ ನೆತ್ತರು ಬಸಿದು
ಹಗಲು – ಇರುಳುಗಳ ಗಮನವೀಯದೇ ಹೋರಾಡಿ
ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮರು !
ಸತ್ಯಾಗ್ರಹ ಚಳುವಳಿ, ಹರತಾಳಗಳನ್ನು
ಅಹೋರಾತ್ರಿ ನಡೆಸಿ, ತಮ್ಮ ಇರುವನ್ನೂ ಲೆಕ್ಕಿಸದ
ಮಹಾತ್ಮ ಗಾಂಧಿ, ಪಂಡಿತ್ ಜವಾಹರಲಾಲ್ ನೆಹರು, ಲಾಲ್ ಬಹಾದ್ದೂರ್ ಶಾಸ್ತ್ರಿ, ಸುಭಾಷ್ ಚಂದ್ರ ಭೋಸ್,
ತಾತ್ಯಾಟೋಪಿ ಇನ್ನೂ ಅನೇಕಾನೇಕರು
ತಮ್ಮ ಪ್ರಾಣವನ್ನೇ ಪಣಕ್ಕಿಟ್ಟವರು !
ಅಂದು ತಂದು ಕೊಟ್ಟ ಸ್ವಾತಂತ್ರ್ಯವನ್ನು
ಇಂದು ಸ್ವತಂತ್ರವಾಗಿ ಅತಂತ್ರವಿಲ್ಲದೇ ಬದುಕುವ ನಾವುಗಳು ರಣರಂಗದಲ್ಲಿ ಹೋರಾಡಿ ಮಡಿದವರನ್ನು ಸದಾ ಸ್ಮರಿಸೋಣ ಚರಿತ್ರೆಯ ಇತಿಹಾಸ ಪುಟಗಳಲ್ಲಿ ಸೇರಿದ ನಿಜ ನಾಯಕರನ್ನು ಅನುಸರಿಸೋಣ !
-ಶೋಭಾ ಮಲ್ಕಿ ಒಡೆಯರ್ 🖊️
ಹೂವಿನ ಹಡಗಲಿ
*****