ಪ್ರಕ್ರಿಯೆ….
ಕಳೆದುಕೊಳ್ಳುತ್ತಿರುವೆ ದಿನವೂ
ಸ್ವಲ್ಪ ಸ್ವಲ್ಪವೇ ನನ್ನಿರುವನ್ನು….
ಬೇಕೆಂದೇ ಒಂದಷ್ಟು ಕಳೆದುಕೊಂಡರೆ
ಮತ್ತೆ ಒಂದಿಷ್ಟು ಪ್ರಕೃತಿ ನಿಯಮದಂತೆ…
ಒಂದೊಂದೇ ಪುಟ್ಟ ತುಣುಕು ಹಾಗೇ
ಬಂದು ಜೋಡಿಸಿಕೊಳ್ಳುತ್ತಿದೆ ಹೊಸದಾಗಿ…
ಕಳೆದ ನೆನ್ನೆಗಳ ನೆನಪಿನೊಂದು ತುಣುಕು
ನಾಳೆಯ ಕನಸುಗಳದೊಂದು ಇಣುಕು…
ಈ ಕಳೆದುಕೊಳ್ಳುತ್ತಾ, ಪಡೆದುಕೊಳ್ಳುವ
ಅನೂಹ್ಯ ಪ್ರಕ್ರಿಯೆಯೇ ಬದುಕೇನೋ….
ಇದೆಲ್ಲದರ ಮಧ್ಯೆ ತಟಸ್ಥಳಾಗಿ ಕುಳಿತಾಗ
ಅರಿವಾಗುತ್ತಿದೆ ದಾರಿ ಬಹಳ ದೂರವಿದೆ ಇನ್ನೂ…..
-ರೂಪ ಗುರುರಾಜ್, ಬೆಂಗಳೂರು
*****