ಕೇಡುಗಾಲಕ್ಕೆ….
ಕೇಡುಗಾಲಕ್ಕೆ ಜನ ಏನೇನು ಪೂಜೆ ಮಾಡ್ತಾರೆ ಅಂತ ಗೊತ್ತಾಗಲ್ಲ.
ಕೇಡುಗಾಲಕ್ಕೆ ಜನ ಏನೇನು ಅಪವಿತ್ರ ಗೊಳಿಸ್ತಾರೆ ಅಂತಾನೂ ಗೊತ್ತಾಗಲ್ಲ.
ಕೇಡುಗಾಲಕ್ಕೆ ಜನ ಯಾರ್ಯಾರನ್ನ ಹೊಗಳ್ತಾರೆ ಅಂತ ಗೊತ್ತಾಗಲ್ಲ.
ಕೇಡುಗಾಲಕ್ಕೆ ಜನ ಯಾರ್ಯಾರನ್ನ ತೆಗಳ್ತಾರೆ ಅಂತಾನೂ ಗೊತ್ತಾಗಲ್ಲ.
ಕೇಡುಗಾಲಕ್ಕೆ ಜನ ಯಾರ್ಯಾರನ್ನ ಆದರ್ಶ ಪುರುಷರು ಎಂದುಕೊಳ್ತಾರೆ
ಅಂತ ಗೊತ್ತಾಗಲ್ಲ.
ಕೇಡುಗಾಲಕ್ಕೆ ಜನ ಯಾರ್ಯಾರನ್ನ ದುರುಳರು ಎಂದುಕೊಳ್ತಾರೆ
ಅಂತಾನೂ ಗೊತ್ತಾಗಲ್ಲ.
ಕೇಡುಗಾಲಕ್ಕೆ ಜನ ಯಾವ ಕಾಲವನ್ನ ಸಕಾಲ ಎಂದುಕೊಳ್ತಾರೆ
ಅಂತ ಗೊತ್ತಾಗಲ್ಲ.
ಕೇಡುಗಾಲಕ್ಕೆ ಜನ ಯಾವ ಕಾಲವನ್ನ ಕೇಡುಗಾಲ ಎಂದುಕೊಳ್ತಾರೆ
ಅಂತಾನೂ ಗೊತ್ತಾಗಲ್ಲ.
-ಮನಂ, ಬೆಂಗಳೂರು
*****