ಹಿಂದುಳಿದ ವರ್ಗಗಳ ಹರಿಕಾರ ಡಿ.ದೇವರಾಜ್ ಅರಸು(ಕವಿತೆ) ಕವಿ: ✍️ಗೋಸಿಂಹಾ (ಎಲ್. ಹಾಲ್ಯಾನಾಯ್ಕ), ಕಮಲಾಪುರ

ಇಂದು (ಆ. ೨೦) ರಾಜಕೀಯ ಮುತ್ಸದ್ಧಿ, ಮಾಜಿ‌ ಮುಖ್ಯಮಂತ್ರಿ ದಿ. ಡಿ. ದೇವರಾಜು ಅರಸು‌ ಅವರ 107ನೇ ವರ್ಷದ ಹುಟ್ಟುಹಬ್ಬ. ದನಿಯಿಲ್ಲದ ಸಮುದಾಯಗಳಿಗೆ ದನಿಯಾಗಿ, ಶೋಷಿತರನ್ನು ಪೊರೆದ ಮೌನ ಕ್ರಾಂತಿಕಾರ, ಸಾಮಾಜಿಕ ನ್ಯಾಯದ ಹರಿಕಾರನಿಗೆ ಈ ಕವನ ಅರ್ಪಣೆ.(ಸಂಪಾದಕರು)👇

ಹಿಂದುಳಿದ ವರ್ಗಗಳ ಹರಿಕಾರ ಡಿ.ದೇವರಾಜ್ ಅರಸು


ಬನ್ನಿರಿ…. ಬನ್ನಿರಿ…..ಹೂವ ತನ್ನಿರಿ
ಜನುಮದಿನದೀ ಶುಭದಿನದಂದು
ಪ್ರೀತಿ – ಗೌರವದಿ ನಮಿಸೋಣಾ
ಸದಾಕಾಲವು ಸ್ಮರಿಸೋಣಾ
ಸಾಮಾಜಿಕ ನ್ಯಾಯದ ಹರಿಕಾರನಿಗೆ
ಶ್ರೇಷ್ಠ ಸಮಾಜ ಸುಧಾರಕನಿಗೆ

ಸಾಮಾಜಿಕ ಅಸಮಾನತೆ
ಹೋಗಲಾಡಿಸಿದಾತನಿಗೆ
ಸಮಾಜವಾದವ ನಿಜಾರ್ಥದಲ್ಲಿ
ಕೃತಿಯಲ್ಲಿಳಿಸಿದಾತನಿಗೆ
ಸಮಸಮಾಜ ನಿರ್ಮಾಣಕೆ
ಭದ್ರ ಬುನಾದಿ ಹಾಕಿದಾತನಿಗೆ

ಲಕ್ಷಾಂತರ ಬಡ ಗೇಣಿದಾರರ
ಭಾಗ್ಯದ ಬಾಗಿಲು ತೆರೆದಾತನಿಗೆ
ಸ್ವತಂತ್ರ,ಸ್ವಾಭಿಮಾನದ ಬದುಕು
ನಡೆಸಲು ಜೀತಮುಕ್ತಗೊಳಿಸಿದಾತನಿಗೆ
ಮೈಸೂರು ರಾಜ್ಯವ ಕರ್ನಾಟಕವೆಂದು
ಮರು ನಾಮಕರಣ ಮಾಡಿದಾತನಿಗೆ

ಎಲ್ಲಾ ವರ್ಗದ ಜನರಿಂದಲೂ ‘ಬುದ್ಧಿ’
‘ಅಪ್ಪಾಜಿ’ ಎಂದೇ ಕರೆಸಿಕೊಂಡಾತನಿಗೆ
ತುಳಿತಕ್ಕೊಳಗಾದವರ ಧ್ವನಿಯಾದ
ಸಮಯ ಪ್ರಜ್ಞೆಯ ಧೀಮಂತ ನಾಯಕನಿಗೆ
ಜನಪರ ಕಾಯ್ದೆಗಳ ಜಾರಿಗೆ ತಂದು
ಜನಮಾನಸದಲ್ಲಿ ಶಾಶ್ವತ ನೆಲೆಸಿದಾತನಿಗೆ

✍️ಗೋಸಿಂಹಾ (ಎಲ್. ಹಾಲ್ಯಾನಾಯ್ಕ), ಕಮಲಾಪುರ
*****