ಬಿಕ್ಷುಕರು ನಾವು.
ಪರಿಸರದ ಸಿರಿಯ ಅಂಗಳದಿ
ದುರಾಸೆಯ ಗಂಗಾಳ ಹಿಡಿದ
ಬಿಕ್ಷುಕರು ನಾವು
ಕಾಮಧೇನುವದುವೆಂದು ಬಗೆದು
ಹಾಲು ಮುಗಿದರು ರಕ್ತ ಹಿಂಡುವ
ಖೂಳ ರಕ್ಕಸರು ನಾವು
ಕಲ್ಪವೃಕ್ಷದ ಹೂ ಹಣ್ಣು ಕಾಯಿ ಎಲೆ ಕಿತ್ತು
ಬರಿದಾದರು ಬಿಡದೆ ಬೇರ ಕೀಳುವ
ಮಹಾ ಭಕ್ಷಕರು ನಾವು.
ನದ ನದಿಗಳ ಬರಿದು ಮಾಡಿ
ಮನೆ ಮನಗಳ ಮಲಿನ ಮಾಡಿ
ಅಯಷ್ಯ ಬೇಡುವ ರೋಗಿಷ್ಟರು ನಾವು
ತುಂಬದಾ ಹಸಿವಿನಾ ಬುಟ್ಟಿಗೆ
ಜಾತಿ ಜಾಲದ ತೋರಣವ ಕಟ್ಟಿ
ಹೊತ್ತು ಮೆರಸುವ ನಮಗೆ
ಸಿಕ್ಕೀತೆ ಶಾಂತಿ ನೆಮ್ಮದಿಯ ಕಟ್ಟೆ
– ಹೊಳಗುಂದಿ ಎ.ಎಂ.ಪಿ ವೀರೇಶಸ್ವಾಮಿ, ಬಳ್ಳಾರಿ