ನನ್ನ ಕಾವ್ಯಕನ್ನಿಕೆ ಸಕಲರೊಳು ಎದ್ದು ನಿಲ್ಲುವವಳು
ನನ್ನ ಕಾವ್ಯಕನ್ನಿಕೆ ಸಕಲರೊಳು ಎದ್ದು ನಿಲ್ಲುವವಳು
ವಿವಿಧ ವಿಶಯಗಳ ವಿಶ್ವವಿದ್ಯಾಲಯಗಳಲ್ಲಿ ಕಲಿತವಳಲ್ಲ
ಜನಮನವ ತಿಳಿದು ವಿಶ್ವಾಸದಿ ವಿಶ್ವವನ್ನೆ ಅರಿತವಳು
ನನ್ನ ಮನದ ಆಳ ಅಗಲಗಳ ಇಂಚಿಂಚೂ ಅಳೆದವಳು
ನನ್ನ ಕಾವ್ಯಕನ್ನಿಕೆ ಸಕಲರೊಳು ಎದ್ದು ನಿಲ್ಲುವವಳು
ಬುರುಡೆ ಸಾಹಿತ್ಯ ಓದಿರುವೆನೆಂದು ಕೊರೆಯುವವಳಲ್ಲ
ಬರಗೆಟ್ಟು ನಿಂತಿದ್ದ ಮನಂ ಮನದೊಳು
ಒಲವ ವ್ಯವಸಾಯ ಮಾಡುವವಳು
ನನ್ನ ಕಾವ್ಯಕನ್ನಿಕೆ ಸಕಲರೊಳು ಎದ್ದು ನಿಲ್ಲುವವಳು
ಕಾರುಬಾರುಗಳ ಮಾತಾಡುತ್ತಾ ಕಾಲಕಳೆಯುತ್ತಾ ನಿಲ್ಲುವಳಲ್ಲ
ಕಾರಲ್ಲಿ ಬಾರಲ್ಲಿ ನನ್ನನ್ನು ತಾನೇ ಮುನ್ನಡೆಸುವವಳು
ಭಾರಿ ಭಾರಿ ಮಾತಾಡದೆ ಬಾರಿ ಬಾರಿ ನಲಿವಲಿ ಕೂಡುವವಳು
ನನ್ನ ಕಾವ್ಯಕನ್ನಿಕೆ ಸಕಲರೊಳು ಎದ್ದು ನಿಲ್ಲುವವಳು
ಚಿನ್ನದ ಪದಕ ಪಡೆದೆ ಕಾಲೇಜಲ್ಲಿ ವಿವಿಲಿ ಅನ್ನುತ್ತಾ ಗರ್ವಿಯಾದವಳಲ್ಲ
ಚಿನ್ನದ ಹೃದಯದವಳು ಚಿನ್ನು ಚಿನ್ನು ಎನ್ನುತ್ತಾ ಚಿನ್ನಾಟ ಆಡುವವಳು
ಚನ್ನಾದ ಚಲುವಿನ ಮುಗುಳು ನಗೆಯನ್ನೆ ಮೊಗದಿ ಹೊದ್ದವಳು
ನನ್ನ ಕಾವ್ಯಕನ್ನಿಕೆ ಸಕಲರೊಳು ಎದ್ದು ನಿಲ್ಲುವವಳು
ತಾನು ಅಲ್ಲಿ ಇಲ್ಲಿ ಪಡೆದ ಪ್ರಶಸ್ತಿ ಪತ್ರಗಳ ರಾಶಿಗಳ
ತೋರುತ್ತಾ ಕೊಬ್ಬಲ್ಲಿ ಉಬ್ಬುವವಳಲ್ಲ ತನ್ನ ತನುಮನಗಳೊಳು
ಚಲುವಿನ ರಾಶಿಯ ತುಳುಕಿಸುತ್ತಾ ಮನಂ ಮನವ ಸೆಳೆಯುವವಳು
– ಮನಂ, ಬೆಂಗಳೂರು
*****