ಜಾತಕದ ಫಲ
ಜಾತಕದ ಸೂಚಿಯು
ಚಕ್ರದಡಿ ಸಿಲುಕಿ,ಮುಂದಾದ
ಮಳೆಯಲಿ,
ಬಡತನ ಮತನಾಡುತ್ತಾ ಚಲಿಸಿದೆ….
ಹವಮಾನದ ಬೇಸರಕೆ
ಚಿಂತೆಯ ಕಣ್ಣಿಗೆ,
ಬಂಧುತ್ವದ ಒಡಲ ಮುತ್ತುಗಳು
ಒಂದೊಂದಾಗಿ ಗೋಚರಿಸಿವೆ
ಮಣ್ಣ ಗೆದ್ದಿಲಿಗೆ….
ಬವಣೆಯ ಹಂದಿರ
ಸಪ್ಪಳವಿಲ್ಲದೆ ಗರಿಯ ತಾಕಿವೆ….
ಸುಳಿವಿಲ್ಲದ ದಾರಿಗೆ
ನಾಲೆ ಇರದ ದೋಣಿ ನಡು ನೀರಲಿ ಯೋಚಿಸುತಿದೆ…
ಇದಕೆ ಯಾವ ರಾಟೆಯ ಹಾಕೋಣ?
ಕಾಂಚಾಣದ ಘನತೆಯು
ಸೂರಿಲ್ಲದ ಬುಟ್ಟಿಯ ಗೋಣಿ
ತಟ್ಟಲಿ ಮುಚ್ಚಿಟ್ಟ ಸಣ್ಣ ಮುಡುಪಾಗಿದೆ……
ಕಪ್ಪು ರಂದ್ರದ ಚಿಪ್ಪಿನೊಳು
ಒಳ ಹೊಕ್ಕಿವೆ
ಸೆಣಸಾಡುವ ಇರುವೆಗಳು,
ಇದಕೆ ಸೂಕ್ಷ್ಮತೆಯ ಅರಿವು
ಕಾಯುತಿದೆ….
ಮಾನ ಸಮ್ಮಾನದ ಗುಡಿಸಲು
ಕಷ್ಟ ಸುಖದ ಅಶ್ರಮವಾಗಿ
ಕಿರು ಸಿಹಿ ಅಂಚಿದೆ….
ಅವಮಾನದ ರೋಧನೆಗೆ
ನ್ಯಾಯದ ಗಂಜಿ ತಟ್ಟೆಯಲಿ
ತನ್ನ ಮುಖವ ನೋಡಿ
ಮಂಕಾಗಿದೆ…..
ಇದಕೆ ಯಾವ ಜಾತಕ
ಉತ್ತರ ಕೊಡುತ್ತಿದೆ…?
ಬರೀ ಚೌಕದ ಗಣದ ಗೆರೆ….
-ಡಾ. ಕೃಷ್ಣವೇಣಿ ಆರ್ ಗೌಡ, ಜಿಂದಾಲ್-ತೋರಣಗಲ್ಲು(ಬಳ್ಳಾರಿ ಜಿಲ್ಲೆ)
*****