ಅನುದಿನ‌ಕವನ-೬೧೮, ಕವಿ: ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ, ಕಾವ್ಯ ಪ್ರಕಾರ: ಹಾಯ್ಕುಗಳು

ಹಾಯ್ಕುಗಳು

೧.ಜಗದಗಲ
ಮುಗಿಲಗಲ; ತಾಯಿ
ಪ್ರೀತಿ ಅನಂತ

೨.ಅಂಗನವಾಡಿ
ತುಂಬೆಲ್ಲ; ಮಿಣುಗುವ
ನಕ್ಷತ್ರಪುಂಜ

೩.ಎದೆ ತೆರೆದು
ಮಾತಾಡು ಎಂದೆ; ಮುಖ
ಮುಚ್ಚಿ ನಕ್ಕಳು

೪.ಸಾವಿನ ಮನೆ
ಸನಿಹ; ಸಾವಿರಾಸೆ
ಜನಜಂಗುಳಿ

೫.ವಿರಹದೇರು
ಸಮಯಕೆ; ವಿವೇಕ
ಮಂಕಾಗಿ ಹೋಯ್ತು

೬.ನೀರೆ ಇಲ್ಲದ
ಬದುಕು ಊಹಿಸಿದೆ
ಮೀನಿನಂತಾದೆ!

೭.ಮುತ್ತಿನ ಮಳೆ
ಸಿಂಚನಕೆ; ಆರದ
ವಿರಹ ಧಗೆ

೮.ಒಳಗೊಳಗೇ
ನಗುವ ಜನ; ವಿಷ
ಜಂತು ಸಮಾನ

೯.ಮದುವೆ ಮಾಡಿ
ನೋಡಿ; ಉರಿವ ಸೂರ್ಯ
ತಣ್ಣಗಾದಾನು!

೧೦.ಹೂವಿನೆಸಳ
ಮೇಲಿನ ಮಂಜು ಹನಿ
ನಿಸರ್ಗ ಕಾವ್ಯ

-ಸಿದ್ದಲಿಂಗಪ್ಪ ಬೀಳಗಿ, ಹುನಗುಂದ
*****