ಅನುದಿನ ಕವನ-೬೨೦, ಕವಿ: ಸಿದ್ದುಜನ್ನೂರ್, ಚಾಮರಾಜ ನಗರ, ಕವನದ ಶೀರ್ಷಿಕೆ: ನೆರಳು…..

ನೆರಳು….

 

ನೆರಳು…ನೆರಳು…
ಈ ನೆಲದ ತಂಪು ನೆರಳು
ನೆರಳು…ನೆರಳು…
ಈ ಜನರ ಮನದ ನೆರಳು
ಕಾಯೋದು ನಿನ್ನ ಪ್ರೀತಿ
ಸಮತೆನೆ ನಿನ್ನ ನೀತಿ
ನಮಗಿಲ್ಲ ಯಾವ ಭೀತಿ
ನೀನೇನೆ ನಮ್ಮ ರೀತಿ…

ಮುಗಿಲು ಭೋರ್ಗರೆವ
ನೀಲಿ ಕಡಲು ಸಂಧಿಸುವ
ಎಲ್ಲರು ಒಂದೆಂದ ಭಾವ
ತಾಯಿ ಹೃದಯ ಅವನ ಜೀವ
ಈ ಮಣ್ಣ ಘಮಲೆ ಸಂಚರಿಸಿದ
ಊರ್ತುಂಬ ಹರಡಿ ಬುದ್ದಗೀತೆ ಹಾಡಿದ…

ಹಸಿರ ನೆಲಹಾಸಿ
ತಂಪನೆರಸಿ ಸ್ವಾಗತಿಸಿ
ಹಣತೆ ನಕ್ಷತ್ರರಾಶಿ ಆವರಿಸಿ
ಕಗ್ಗತ್ತಲೊಂದು ಬೆಳಕ ಸಿಂಗರಿಸಿ
ಜನ ಮನಸಿಗೆ ಮುಂಬೆಳಗಾಯಿತು
ಬುದ್ದನಾಮವರಡಿ ಎಲ್ಲೆಲ್ಲೂ ಹಾಡಾಯಿತು…


-ಸಿದ್ದುಜನ್ನೂರ್, ಚಾಮರಾಜ ನಗರ
*****