ಬಳ್ಳಾರಿ, ಸೆ.13: ಅಧ್ಯಾಪಕರು ಬೋಧನಾ ತಂತ್ರಗಳನ್ನು ಅಳವಡಿಸಿಕೊಂಡರೆ ಮಾತ್ರ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದು ಅಂತಾರಾಷ್ಟ್ರೀಯ ಕಲಾವಿದ, ಅಧ್ಯಾಪಕ ಮೆಹಬೂಬ್ ಸಾಬ್ ಕಿಲ್ಲೇದಾರ್ ಅವರು ಅಭಿಪ್ರಾಯ ಪಟ್ಟರು.
ನಗರದ ಶ್ರೀ ಸತ್ಯಂ ಶಿಕ್ಷಣ(ಬಿ.ಇಡಿ) ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡಿದರು. ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರಾದವರಿಗೆ ಬಹುಮುಖ್ಯವಾಗಿ ತಾಳ್ಮೆ ಮತ್ತು ಹೊಂದಾಣಿಕೆ ಅತ್ಯಗತ್ಯ ಎಂದರು.
ಪ್ರಶಿಕ್ಷಣಾರ್ಥಿಗಳಿಗೆ ಬೋಧನೆ ಮಾಡುವ ಸಂದರ್ಭದಲ್ಲಿ ಅವರ ಮಾನಸಿಕ ಒತ್ತಡವನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಉಪನ್ಯಾಸಕ ಜಯದೇವಯ್ಯ ಎಂ ವಿ ಅವರು ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ ವಿ ರಾಮಾಂಜನೇಯ (ಅಶ್ವ ರಾಮು), ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ ಎಂದರು.
ಉಪನ್ಯಾಸಕ ಆಲಂಬಾಷ ಅವರು ಗಣ್ಯ ಅತಿಥಿಗಳನ್ನು ಪತಿಚಯಿಸಿದರು.
ಗಾಯನ: ಕಿಲ್ಲೇದಾರ್ ಅವರ ಅದ್ಭುತ ಕಂಠ ಸಭಿಕರ ಮನಸೋರೆಗೊಂಡಿತು.
ಪ್ರಶಿಕ್ಷಣಾರ್ಥಿಗಳು ವಿಶೇಷ ಉಪನ್ಯಾಸಕರನ್ನು ಸನ್ಮಾನಿಸಿ ಗೌರವಿಸಿದರು.
ಸಿಂಧೂಶ್ರೀ ಸ್ವಾಗತಿಸಿದರು. ರಾಜೇಶ್ವರಿ ಕೆ ದೇವೇಂದ್ರ, ರೋಜಾ ಪ್ರಾರ್ಥಿಸಿದರು. ಪದ್ಮಾವತಿ ಡಿ ಕೆ ನಿರೂಪಿಸಿದರು. ಸುನಿಲ್ ವಂದಿಸಿದರು.
ಬಳಿಕ ಪ್ರಶಿಕ್ಷಣಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
*****