ಬಳ್ಳಾರಿ, ಸೆ.15:ಮಕ್ಕಳಲ್ಲಿ ಅಡಗಿರುವ ಪ್ರತಿಭೆಯ ಅಭಿವ್ಯಕ್ತಿ ಗೆ ಚಿತ್ಕಲಾ ವಿದ್ಯಾರ್ಥಿ ಪತ್ರಿಕೆ ಉತ್ತಮ ವೇದಿಕೆಯಾಗಿದೆ ಎಂದು ಡಿಡಿಪಿಐ ಅಂದಾನಪ್ಪ ಎಂ.ವಡಿಗೇರಿ ಅವರು ಪ್ರಶಂಸಿಸಿದರು.
ಇಲ್ಲಿನ ಸತ್ಯನಾರಾಯಣಪೇಟೆಯ ಶಾರದ ವಿದ್ಯಾಪೀಠ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಶಾಲೆಯ ಮುಖವಾಣಿ ಚಿತ್ಕಲಾ ಪ್ರಾಯೋಗಿಕ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಗರದ ಹೃದಯ ಭಾಗದಲ್ಲಿ ಇಂತಹ ಮಾದರಿ ಶಾಲೆ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು.
ಮಕ್ಕಳ ಆಂತರ್ಯದಲ್ಲಿ ಅಮೂರ್ತ ರೂಪದಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅಭಿವ್ಯಕ್ತ ಪಡಿಸಲು ಚಿತ್ಕಲಾ ತ್ರೈ ಮಾಸಿಕ ಪ್ರಾಯೋಗಿಕ ಪತ್ರಿಕೆ ಪ್ರಕಟವಾಗುತ್ತಿರುವುದು ಮಾದರಿ ಕಾರ್ಯ ಎಂದರು.
ಮಹಾನಗರ ಪಾಲಿಕೆ ಸದಸ್ಯ ಅಶೋಕಕುಮಾರ್.ಕೆ.ಎಸ್ ಮಾತನಾಡಿ, ಮಾದರಿ ಶಾಲೆಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಹೆಮ್ಮಯ ವಿಷಯವಾಗಿದೆ. ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಸದಾ ಒತ್ತಾಸೆಯಾಗಿರುತ್ತೇನೆ ಎಂದು ಹೇಳಿದರು.
ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷೆ ಡಾ.ನಾಗರತ್ನ ಜೋಷಿ ಅವರು ಮಾತನಾಡಿ, ಚಿತ್ಕಲಾ ಪ್ರಥಮ ಸಂಚಿಕೆಗೆ ಲೇಖನಗಳನ್ನು ಆಯ್ಕೆಮಾಡಿ ಮುದ್ರಣದ ಹಂತದವರೆಗೆ ಕೊಂಡೊಯ್ದ, ಶಿಕ್ಷಕಿ ಕುಮಾರಿ ಭಾರತಿಯವರ ಕಾರ್ಯ, ಅವರ ಅಪರಿಮಿತ ದುಡಿಮೆ, ಮುದ್ರಣದ ವಿನ್ಯಾಸದ ಕೆಲಸಕ್ಕೆ ಸಹಕರಿಸಿದ ಅವರ ಪ್ರೌಢತ್ವವನ್ನು ಶ್ಲಾಘಿಸಿದರು.
ಪತ್ರಿಕೆಯ ಪ್ರಕಟಣೆಯಲ್ಲಿ ಹಿರಿಯ ಶಿಕ್ಷಕ ಗೋಪಾಲ.ಜೆ.ಎಂ ಅವರ ಸಹಭಾಗಿತ್ವವನ್ನು ಕೊಂಡಾಡಿದರು.
ಸನ್ಮಾನ: ಪ್ರಥಮ ಸಂಚಿಕೆಯನ್ನು ಯಶಸ್ವಿಯಾಗಿ ಹೊರತಂದ ಸಹಶಿಕ್ಷಕಿ ಕು. ಭಾರತಿ ಮತ್ತು ಗೋಪಾಲ.ಜೆ.ಎಂ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಾಲೆಯ ಮುಖ್ಯಗುರು ಕವಿತಾ ವಾದಿರಾಜ, ಆಡಳಿತ ಮಂಡಳಿಯ ಸದಸ್ಯರಾದ ಡಾ.ರಾಧಾಕೃಷ್ಣ, ಡಾ.ಶ್ರೀಲತಾ, ಜನಾರ್ದನರಾವ್, ಹರಿಕುಮಾರ್, ಡಾ.ಸುಯಜ್ಞ ಜೋಷಿ ಮತ್ತು ಎಂ. ಅಹಿರಾಜ ಉಪಸ್ಥಿತರಿದ್ದರು.
ಶಾಲಾ ಶಿಕ್ಷಕಿಯರಾದ ಗೀತಾಲಕ್ಷ್ಮಿ, ಕಲ್ಪನ, ರಾಜೇಶ್ವರಿ, ಜ್ಯೋತಿ ಸೌದಿ, ಮುಕ್ತ ನಿರ್ವಹಿಸಿದರು.
————