ಮನಂ ಅವರ ‘ನಾವೆಲ್ಲರೂ ಭಾರತೀಯರು’ ಶಿಲಾ ಶಾಸನ ನಿರ್ಮಾಣಕ್ಕೆ ಒಂದು‌ವರ್ಷ: ಸಿರುಗುಪ್ಪದಲ್ಲಿ ಸಂಭ್ರಮಾಚರಣೆ

ಸಿರುಗುಪ್ಪ, ಸೆ.19: ಭಾರತೀಯತೆ ಹಾಗೂ ಸಂವಿಧಾನದ ಮಹತ್ವ ಸಾರುವ ಸಾಹಿತಿ ಮನಂ ಅವರ ಜನಪ್ರಿಯ ‘ನಾವೆಲ್ಲಾ ಭಾರತೀಯರು…’ ಘೋಷವಾಕ್ಯದ ಶಿಲಾಶಾಸನ
ನಿರ್ಮಾಣಗೊಂಡು ಸೋಮವಾರಕ್ಕೆ (ಸೆ.19) ಒಂದು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಸಿರುಗುಪ್ಪ ಪಟ್ಟಣದಲ್ಲಿ ಸಂಭ್ರಮ ಆಚರಿಸಲಾಯಿತು.
ಯುವ ಮುಖಂಡ ಎಂ.‌ಎಸ್ ಸಿದ್ದಪ್ಪ ಸೇರಿದಂತೆ ತಾಲೂಕಿನ ಹಲವು‌ ಮುಖಂಡರು ಸರಳ ಸಮಾರಂಭದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಎಂ ಎಸ್ ಸಿದ್ದಪ್ಪ ಅವರು ಭಾರತರತ್ನ ಬಾಬಾಸಾಹೇಬ ಡಾ.‌ಬಿ ಆರ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಹಾಗೂ ಕಾನೂನುಗಳನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಹೇಳಿದರು.
ರಾಜ್ಯದ ಉನ್ನತ ಹಿರಿಯ ಪೊಲೀಸ್ ಅಧಿಕಾರಿ(ಎಡಿಜಿಪಿ) ಯೂ ಆಗಿರುವ ಸಾಹಿತಿ ಎಂ.‌ನಂಜುಂಡ ಸ್ವಾಮಿ‌(ಮನಂ) ಅವರ ನಾವೆಲ್ಲರೂ ಭಾರತೀಯರು ಘೋಷವಾಕ್ಯ ದೇಶಪ್ರೇಮವನ್ನು ಎತ್ತಿ ಹಿಡಿಯುತ್ತದೆ ಎಂದು ತಿಳಿಸಿದರು.
ತಾಲೂಕಿನ ಶಾಸವಾಸಪುರ ಗ್ರಾಮದ ಯುವ ಮುಖಂಡರುಗಳಾದ ಸಿ. ಶರಣಬಸಪ್ಪ, ಹೆಚ್. ಭಾಷಾ ಮತ್ತು ಎ. ರಾಘವೇಂದ್ರ ಅವರು 14 ಟನ್ ಬೃಹತ್ ಗ್ರಾನೈಟ್ ಶಿಲೆಯ ಶಾಸನವನ್ನು ಸಿರುಗುಪ್ಪದಲ್ಲಿ ಮತ್ತೊಂದನ್ನು ಶಾನವಾಸಪುರ ಗ್ರಾಮದಲ್ಲಿ ನಿರ್ಮಿಸಿರುವುದು ತಾಲೂಕಿಗೆ ಹೆಮ್ಮೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಸಂವಿಧಾನ ಆಶಯಗಳನ್ನು ಎತ್ತಿಹಿಡಿಯುವ ಮನಂ ಅವರ ಘೋಷವಾಕ್ಯ ಪ್ರತಿ ಗ್ರಾಮಗಳಿಗೆ ತಲುಪಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಶಿಲಾಶಾಸನ‌ ನಿರ್ಮಾತೃಗಳಾದ ಶಾನವಾಸಪುರದ ಯುವ ಮುಖಂಡರಾದ ಸಿ.ಶರಣಬಸಪ್ಪ, ರಾಘವೇಂದ್ರ ನಾಯಕ್, ಮುಖಂಡರಾದ ಮೇಕೆಲ್ ವೀರೇಶ್, ವಿರೂಪಾಕ್ಷಿ ಎನ್,
ಮಾರೇಶ್ ಮಣ್ಣೂರು, ವಾಸು ಸ್ವಾಮಿ
ಸುಳುವಾಯಿ ಮಲ್ಲಿಗೌಡ ಮತ್ತಿತರರು ಉಪಸ್ಥಿತರಿದ್ದರು.
*****