ಅನುದಿನ‌ ಕವನ-೬೩೨, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ ಕವನದ ಶೀರ್ಷಿಕೆ: ಕುಡಿತ

ಕುಡಿತ

ಕುಡಿತದ ಮತ್ತು
ಸಂಸಾರದ
ನಿದ್ದೆ ಕೆಡಿಸಿತ್ತು !
ಸುಂದರವಾದ ಸಂಸಾರಕ್ಕೆ
ಸಾರಾಯಿ ಅಮಲು ಏಕೆ ?
” ಹೆಂಡ ಸಾರಾಯಿ ಸಹವಾಸ
ಹೆಂಡತಿ ಮಕ್ಕಳು ಉಪವಾಸ ”
ಎನ್ನುವ ಕೂಗು
ಗೋಡೆ ಬರಹ
ಬಿತ್ತಿ ಪತ್ರಗಳಲ್ಲಿ
ಕಾಣುತ್ತಿಲ್ಲವೇ ಸಹೋದರರೆ….?
ಕಾಣಲಾರದಷ್ಟು
ಮದಿರೆಯ ಅಮಲು
ಕಣ್ಣುಗಳನ್ನು ಮುಚ್ಚಿದೆಯೇ ?
ಹೆಂಡತಿ ಮಕ್ಕಳಿಗೆ
ನೀವೇ ಸಾರಥಿ
ಹೀಗಿರುವಾಗ ನೀವು ಕೈ ಚೆಲ್ಲಿದರೆ
ಸಂಸಾರವೇ ಅಧೋಗತಿ |
ಕುಡಿತದ ಸೆಳೆತ‌ ಮರೆತುಬಿಡಿ
ಆಸೆಯೇ ದುಃಖಕ್ಕೆ ಮೂಲ
ಅಮಲಿನೊಳಗಣ ಮೈ ಮರೆತರೆ
ಸಾಯುವವರೆಗೂ ಬಿಡದು ಕುಡಿತದ ಜಾಲ |
ಭವಿಷ್ಯ ಬಹಳವಿದೆ
ಮಕ್ಕಳಿಗೆ ನೀಡಿರಿ ಉಜ್ವಲ ಭವಿಷ್ಯ
ಮಕ್ಕಳ ಮುಂದೆಯೇ
ನೀವಾಗಬೇಡಿ ಕುಡಿತದ ದಾಸ !
ಕುಡಿತವನ್ನು ಹಿಡಿತದಲ್ಲಿಡು
ಅದು ನಿನ್ನ ಗುಲಾಮ
ಕುಡಿತಕ್ಕೆ ದಾಸನಾದರೆ
ನೀನು ಅದರ ಗುಲಾಮ

-ಶೋಭಾ ಮಲ್ಕಿ ಒಡೆಯರ್🖊️
ಹೂವಿನ ಹಡಗಲಿ

*****