ಬಳ್ಳಾರಿ: ನಗರದ ಪಟೇಲ್ ನಗರ, ದುರ್ಗಾ ಕಾಲೋನಿಯ ಪ್ರಸಿದ್ಧ ಶ್ರೀ ಸಣ್ಣ ದುರ್ಗಮ್ಮ ದೇವಿ ದೇಗುಲದಲ್ಲಿ ಶರನ್ನವರಾತ್ರಿ ಉತ್ಸವಗಳು ಸೆ.26 ರಿಂದ ಅ.5 ರ ವರೆಗೆ ವಿಜೃಂಭಣೆಯಿಂದ ನಡೆಯಲಿದ್ದು, ಭಕ್ತರು ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇವಿ ಕೃಪೆಗೆ ಪಾತ್ರರಾಗಬಹುದು ಎಂದು ದೇಗುಲದ ಟ್ರಸ್ಟ್ ಅಧ್ಯಕ್ಷ ಮೀನಳ್ಳಿ ತಾಯಣ್ಣ ಅವರು ಮನವಿ ಮಾಡಿದರು.
ನಗರದ ಪಟೇಲ್ ನಗರ ಬಡಾವಣೆಯ ಶ್ರೀ ಸಣ್ಣ ದುರ್ಗಮ್ಮ ದೇಗುಲದ ಪ್ರಾಂಗಣದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಢಿಯಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷದಂತೆ ಈ ವರ್ಷವೂ ಶರನ್ನವರಾತ್ರಿ ಹಬ್ಬದ ನಿಮಿತ್ತ ದೇಗುಲದಲ್ಲಿ ವೈಭವದ ಉತ್ಸವಗಳು ನಡೆಯಲಿವೆ, ಸೆ.26 ಪಾಡ್ಯ ದಿನದಂದು ದೇವಿಗೆ ಶ್ರೀ ಬಾಲತ್ರಿಪುರ ಸುಂದರಿ ಅಲಂಕಾರ, ಸಂಜೆ ಸಹಸ್ರ ಮೋದಕ ಶ್ರೀ ಲಕ್ಷ್ಮೀ ಗಣಪತಿ, ಆದಿತ್ಯಾದಿ ನವಗ್ರಹ ಹೋಮ, ಸೆ.27 ರಂದು ಅರ್ಧ ನಾರೀಶ್ವರಿ ಅಲಂಕಾರ, ಸಂಜೆ ಶ್ರೀ ಲಲಿತ ಸಹಸ್ರನಾಮ ಸಹಿತ ಮಹಾಲಕ್ಷ್ಮೀ ಹೋಮ, ಸೆ. 28ರಂದು ಶ್ರೀ ಗಾಯತ್ರಿ ದೇವಿ ಅಲಂಕಾರ, ಸಂಜೆ ಶ್ರೀ ಗಾಯತ್ರಿ ದುರ್ಗಾ ಹೋಮ, ಸೆ.29 ರಂದು ಶ್ರೀ ವೆಂಕಟೇಶ್ವರ ಸ್ವಾಮೀ ಅಲಂಕಾರ, ಸಂಜೆ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವ, ಸೆ.30ರಂದು ಶ್ರೀ ಅನ್ನಪೂರ್ಣೇಶ್ವರಿ ದೇವಿ ಅಲಂಕಾರ ಸಂಜೆ ಮೇದಸೂಕ್ತ ಸಹಿತ ಶ್ರೀ ಮೇದ ದಕ್ಷಣಾಮೂರ್ತಿ ಹೋಮ, ಅ.1ರಂದು ಶ್ರೀ ಮಹಾಲಕ್ಷ್ಮೀ ದೇವಿ ಅಲಂಕಾರ, ಸಂಜೆ ರುದ್ರಸ್ವಹಕಾರ ಸಹಿತ ದುರ್ಗಾ ಹೋಮ, ಅ.2ರಂದು ಶ್ರೀ ಸರಸ್ವತಿ ದೇವಿ ಅಲಂಕಾರ, ಸಂಜೆ ಸುದರ್ಶನ ಮಹಾನಾರಾಯಣ ಹಾಗೂ ಸರಸ್ವತಿ ಹೋಮ, ಅ.3ರಂದು ಶ್ರೀ ದುರ್ಗಾ ದೇವಿ ಅಲಂಕಾರ, ಸಂಜೆ ಚಂಡಿಯಾಗ ಮತ್ತು ಮಹಾ ಪೂರ್ಣಾಹುತಿ, ಅ.4ರಂದು ಶ್ರೀ ಮಹಿಶಾಸುರ ಮರ್ಧಿನಿ ಅಲಂಕಾರ, ಅ.5ರಂದು ದಶಮಿ ಅಮ್ಮನವರ ನಿಜರೂಪ ಅಲಂಕಾರ ಸೇರಿದಂತೆ ನಾನಾ ಪೂಜೆಗಳು ನಡೆಯಲಿವೆ ಎಂದು ವಿವರಿಸಿದರು.
ದೇಗುಲದ ಪ್ರಧಾನ ಅರ್ಚಕ ಸಂತೋಷ್ ಸ್ವಾಮಿ ಅವರು ಮಾತನಾಡಿ, ಶರನ್ನವರಾತ್ರಿ ಉತ್ಸವವನ್ನು ದೇಗುಲದಲ್ಲಿ ಪ್ರತಿ ವರ್ಷ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಅದರಂತೆ ಈ ವರ್ಷವೂ ಉತ್ಸವವನ್ನು ಆಚರಿಸಲಾಗುವುದು. ಹಬ್ಬದ ನಿಮಿತ್ತ ಸೆ.26ರಿಂದ ಅ. 5ರ ವರೆಗೆ ವಿಶೇಷ ಪೂಜೆಗಳು ನಡೆಯಲಿವೆ, ಪ್ರತಿದಿನ ರಾತ್ರಿ 8.45ಕ್ಕೆ ದೇವಿಗೆ ವಿಶೇಷ ಪಂಚಾಮೃತಾಭಿಷೇಕ ನಡೆಯಲಿದೆ. ಅ.2ರಂದು ಬೆ.7ಕ್ಕೆ ಮಕ್ಕಳಿಗಾಗಿ ವಿಶೇಷ ಸರಸ್ವತಿ ದೇವಿ ಪೂಜೆ, ಸೇರಿದಂತೆ ನಿತ್ಯ ಸಂಜೆ 5 ರಿಂದ 6ರ ವರೆಗೆ ಎಲೆಪೂಜೆ, ಶ್ರೀ ಚಕ್ರಸಹಿತ ಕುಂಕುಮಾರ್ಚನೆ, ರಾತ್ರಿ ಪಲ್ಲಕ್ಕಿ ಸೇವೆ, ಮಹಾಮಂಗಳಾರತಿ, ವೇದಮಂತ್ರಗಳ ಪಠಣೆ ನಡೆಯಲಿದೆ. ಅ.3 ರಂದು ಚಂಡಿಯಾಗ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿವೆ. ವಿಶೇಷವಾಗಿ ಧ್ವಜಸ್ಥಂಭ ಹಾಗೂ ರಥ ನಿರ್ಮಾಣ ಕಾರ್ಯ ನಡೆದಿದ್ದು, ಬರುವ ವರ್ಷ ಪೂರ್ಣಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಹನುಮಂತಪ್ಪ, ಸತ್ಯನಾರಾಯಣ, ಪ್ರಕಾಶ್, ಕಿಟ್ಟಿ, ರಾಧಮ್ಮ, ರಮೇಶ್, ಪ್ಲಾಟ್ ರಮೇಶ್, ವಿಜಯಕುಮಾರ್, ಸುನೀಲ್, ಎರ್ರಿಸ್ವಾಮೀ, ಮಧು, ವೆಂಕಟೇಶ, ರಾಮು, ವೆಂಕಟರೆಡ್ಡಿ, ಬಾಬು ಇತರರಿದ್ದರು.
*****