ಸಿರುಗುಪ್ಪ, ಸೆ.29: ಶಿಶು ಅಭಿವೃದ್ಧಿ ಯೋಜನೆ ಕರೂರು ಬಿ ವಲಯ ಮಟ್ಟದಲ್ಲಿ ಪೋಷಣ ಮಾಸಾ ಚರಣೆಯ ಸಮಾರೋಪ ಸಮಾರಂಭ ತಾಲೂಕಿನ ಶಾನ ವಾಸಪುರ ಗ್ರಾಮದಲ್ಲಿ ತುಂಬಾ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಹಸೀನಾ ಬಿ ಮತ್ತು ಗ್ರಾಮ ಪಂಚಾಯಿತಿಯ ಸದಸ್ಯರು ಪೋಷಣ ವಾಟಿಕಾಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು.
ಕರೂರು ವಲಯದ ಮೇಲ್ವಿಚಾರಕಿ ಮೈನಾವತಿ ಮಾತನಾಡಿ, ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳ ತಾಯಂದಿರು ಪೌಷ್ಟಿಕ ಆಹಾರವನ್ನು ಕಡ್ಡಾಯವಾಗಿ ಸ್ವೀಕರಿಸುವ ಮೂಲಕ ಆರೋಗ್ಯವನ್ನು ಉತ್ತಮಪಡಿಸಿ ಕೊಳ್ಳಬೇಕು ಎಂದು ಹೇಳಿದರು.
ಪಂಚಾಯತಿ ಸದಸ್ಯ ಹೊನ್ನೂರ್ ಪೀರ್ ಭಾಷಾ ಮಾತನಾಡಿ ಅತ್ಯಂತ ಜವಾಬ್ದಾರಿಯಿಂದ ಗರ್ಭಿಣಿಯರಿಗೆ ಬಾಣಂತಿಯರಿಗೆ ಪೌಷ್ಟಿಕ ಆಹಾರ ಪೂರೈಸಿ ತಿಳುವಳಿಕೆ ನೀಡುವುದರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ
ಮುಖ್ಯ ಎಂದು ಶ್ಲಾಘಿಸಿದರು.
ಶಾನವಾಸಪುರ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರಾದ ಎಚ್ ರಾಜೇಶ್ವರಿ, ಎಚ್ ಮಾಲತಿ, ಹಂಪಮ್ಮ ಶ್ರೀಮತಿ ಎ ಶಿವಮ್ಮ, ದ್ಯಾವಮ್ಮ ಸುಲೋಚನ ಕಾರ್ಯಕ್ರಮದ ನೇತೃತ್ವ ವಹಿಸಿ ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದರು.
ಕರೂರು ಬಿ, ವಲಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಬಗೆಬಗೆಯ ಪೌಷ್ಟಿಕ ಆಹಾರವನ್ನು ತಯಾರಿಸಿ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಬಗೆ ಬಗೆಯ ಪೌಷ್ಟಿಕ ಆಹಾರ ಉಣಬಡಿಸಿ ಮೆಚ್ಚುಗೆಗೆ ಪಾತ್ರರಾದರು. ಮುಖಂಡರಾದ ಎಂ ಈರಪ್ಪ, ಪಂಚಾಯತಿ ಸದಸ್ಯರಾದ ನಾರುದ್ರ ಗೌಡ, ಮುಖಂಡರಾದ ಎತ್ತಿನಟ್ಟಿ ನಾಗರಾಜ, ಪಂಚಾಯತಿ ಸದಸ್ಯರಾದ ಅಯ್ಯಪ್ಪ, ಹೊನ್ನೂರ್ ಪೀರ( ಭಾಷಾ), ಹುಸೇನಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
*****