ಬಳ್ಳಾರಿ, ಅ.1: ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತುನಗರದ ವೀರಶೈವ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಚೆಸ್ ಪಂದ್ಯಾವಳಿ ಶುಕ್ರವಾರ ನಡೆಯಿತು.
ಮುಖ್ಯ ಅತಿಥಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸುಗೇಂದ್ರ ಅವರು ಮಾತನಾಡಿ ಚೆಸ್ ಆಟದಿಂದ ಮಕ್ಕಳ ಬುದ್ಧಿಮಟ್ಟ ಹೆಚ್ಚಾಗುತ್ತದೆ ಮಕ್ಕಳು ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸಿ ಕಾಲೇಜಿಗೆ ಮತ್ತು ನಾಡಿಗೆ ಕೀರ್ತಿ ತರಬೇಕು ಎಂದು ಹೇಳಿದರು.
ಚೆಸ್ ಭಾರತದ ಪುರಾತನ ಕ್ರೀಡೆಯಾಗಿದ್ದು ಐತಿಹಾಸಿಕ ಹಿನ್ನೆಲೆಯನ್ನು ಒಳಗೊಂಡಿದೆ. ಇದು ಬುದ್ಧಿಶಕ್ತಿಗೆ ಸಂಬಂಧಿಸಿದ ಆಟವಾಗಿದ್ದು ಮಕ್ಕಳಲ್ಲಿ ಸೃಜನಶೀಲತೆಯನ್ನು ಮತ್ತು ಚಿಂತನಾಶಕ್ತಿಯನ್ನು ಬೆಳೆಸುವಲ್ಲಿ ನೆರವಾಗುತ್ತದೆ ಎಂದು ತಿಳಿಸಿದರು.
ವೀರಶೈವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ
ದರೂರು ಶಾಂತನಗೌಡ್ರು ಮಾತನಾಡಿ, ಕ್ರೀಡಾ ಮನೋಭಾವ ಮಕ್ಕಳ ಮನೋವಿಕಾಸಕ್ಕೆ ಕಾರಣವಾಗುತ್ತದೆ ಎಂದರು.
ಚೆಸ್ ಕ್ರೀಡಾಕೂಟವನ್ನು ನಮ್ಮ ಕಾಲೇಜಿನಲ್ಲಿ ನಡೆಸಲು ಅವಕಾಶ ನೀಡಿದ ಉಪ ನಿರ್ದೇಶಕ ಸುಗೇಂದ್ರ ಅವರಿಗೆ ಧನ್ಯವಾದ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಪಿ.ಎಸ್. ಗೌತಮ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮಾರಂಭದಲ್ಲಿ ಅಂತರಾಷ್ಟ್ರೀಯ ಚೆಸ್ ತೀರ್ಪುಗಾರ
ಬಸವರಾಜ್, ಎಸ್. ಜಿ. ಕಾಲೇಜು
ನಿವೃತ್ತ ದೈಹಿಕ ಶಿಕ್ಷಕ ಕೆ. ಎನ್. ಬಸವಲಿಂಗಪ್ಪ, ವಸಿಷ್ಠ ಕಾಲೇಜ್ ನ ಶರಣಪ್ಪ, ಚೆಸ್ ತರಬೇತಿದಾರ ಶಿವಕುಮಾರ್
ಉಪಸ್ಥಿತರಿದ್ದರು. ವೀರಶೈವ ಕಾಲೇಜಿನ ಕನ್ನಡ ಉಪನ್ಯಾಸಕಿ ಹೇಮಾ ಮಂಜುನಾಥ್ ನಿರೂಪಿಸಿದರು.
*****