ಗಾಂಧಿ ಜಯಂತಿ‌ ವಿಶೇಷ-೦೧, ಸಾಹಿತ್ಯ ಹಾಗೂ ಗಾಯನ: ಕುಮಾರ ಸ್ವಾಮಿ ಹಿರೇಮಠ ಅನ್ವರಿ, ಸಿಐಎಸ್ಎಫ್, ಪಾಂಡಿಚೆರಿ, ಶೀರ್ಷಿಕೆ: ಶತಮಾನದ ವ್ಯಕ್ತಿ

ಗಾಂಧಿ ಜಯಂತಿ ವಿಶೇಷ-೦೧

ಶತಮಾನದ ವ್ಯಕ್ತಿ

ಧರೆಯಲ್ಲಿಯೇ ಜನಿಸಿರುವ ಧರೆ ಪಾವನಗೊಳಿಸಿರುವ ಧರೆಯಲ್ಲಿಯೇ ಜನರಿಂದಲೇ ದೇವರಾಗಿ ಮೆರೆದಿರುವ

ಭಾರತದ ಶಕ್ತಿಯು ಇವನು
ಶತಮಾನದ ವ್ಯಕ್ತಿಯು ಇವನು
ದೇಶಕಾಗಿ ತನ್ನ ಪ್ರಾಣವ ಮುಡಿಪಾಗಿ ಇಟ್ಟ
ದೇಶಭಕ್ತನನ್ನು ಕಂಡಿರಾ
ಗಾಂಧೀಜಿಯವರ ಮಹಿಮೆಯನು ನೀವೂ ಬಲ್ಲಿರಾ-ಪ

(ರಘುಪತಿ ರಾಘವ ರಾಜಾರಾಮ್
ಪತಿತ ಪಾವನ ಸೀತಾರಾಮ್)

ಬಿಳಿಯನೊಬ್ಬ ದೂರಿದನೊಮ್ಮೆ
ಕರಿಯನೆಂದು ಕೂಗಿದರೊಮ್ಮೆ
ವರ್ಣಭೇದದಿಂದ ಶುರುವಾಯಿತು ಗಾಂಧಿ ಚಳುವಳಿ
ಜೈಲು ವಾಸವನ್ನೇ ಕಳೆದರು
ಸತ್ಯ ಅಹಿಂಸೆಯಿಂದ ಶಾಂತಿಮಾರ್ಗವನ್ನೇ ಹಿಡಿದರು -1

(ರಘುಪತಿ ರಾಘವ ರಾಜರಾಮ್
ಪತಿತ ಪಾವನ ಸೀತಾರಾಮ್ )

ದಂಡಿಯಾತ್ರೆ ಮಾಡಿದನೊಮ್ಮೆ
ಚಳುವಳಿಯ ನಡೆಸಿದನೊಮ್ಮೆ
ಭಾರತವ ಬಿಟ್ಟು ತೊಲಗೆಂದು
ಇಂಗ್ಲೀಷರಲ್ಲಿ ಒತ್ತಾಯವನ್ನೇ ಮಾಡಿದ
ನಮ್ಮ ದೇಶಕ್ಕಿಂದು ಸ್ವಾತಂತ್ರವನ್ನೇ ಕೊಡಿಸಿದ -2

(ರಘುಪತಿ ರಾಘವ ರಾಜರಾಮ್
ಪತಿತ ಪಾವನ ಸೀತಾರಾಮ್ )

ಜಾತಿಭೇಧ ಮಾಡಲಿಲ್ಲ ಬಡವ ಸಿರಿಯಾ ನೋಡಲಿಲ್ಲ
ಭಾರತಂಬೆ ಹೆಮ್ಮೆಯ ಮಗನಾಗಿ
ಇಡೀ ದೇಶವನ್ನು ದಾಸಮುಕ್ತರನ್ನಾಗಿ ಮಾಡಿದ
ಇಡೀ ವಿಶ್ವಕ್ಕೆಲ್ಲ ಭಾರತದ ಹಿರಿಮೆ ತೋರಿದ
ನಮ್ಮ ದೇಶಕ್ಕಿಂದು ಭಾರತದ ರತ್ನ ಎನಿಸಿದ -3

(ರಘುಪತಿ ರಾಘವ ರಾಜರಾಮ್
ಪತಿತ ಪಾವನ ಸೀತಾರಾಮ್ )


ಸಾಹಿತ್ಯ ಹಾಗೂ ಗಾಯನ:
ಕುಮಾರ ಸ್ವಾಮಿ ಹಿರೇಮಠ ಅನ್ವರಿ, ಸಿಐಎಸ್ಎಫ್, ಪಾಂಡಿಚೆರಿ
*****