ವಿಜಯಪುರ, ಅ.3: ಕಲಾವಿದರು ದೇಶದ ಸಂಪತ್ತು,
ಕಲೆ, ಸಾಹಿತ್ಯ ಸಂಗೀತ ನಾಡಿನ ಸಾಸಂಸ್ಕೃತಿಕ ಅಸ್ಮಿತೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ನಗರದ ಪ್ರವಾಸೋಧ್ಯಮ ಇಲಾಖೆಯ ಸರಕಾರಿ ಆರ್ಟಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದಲ್ಲಿ ಬಳ್ಳಾರಿಯ ಕಲಾವಿದ ಮಂಜುನಾಥ ಗೊವಿಂದವಾಡ ಅವರ ಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಪಂಚಕ್ಕೆ ದೇಶದ ಕೊಡುಗೆಗಳಲ್ಲಿ ಕಲೆ ಸಾಹಿತ್ಯ ಸಂಸ್ಕೃತಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ಹಲವಾರು ದೇಶದ ಸಾಂಸ್ಕೃತಿಕ ಚಿಂತಕರು ಭಾರತೀಯ, ರಾಜ್ಯದ ಪರಂಪರೆಯನ್ನು ಅಧ್ಯಯನ ಮಾಡಲು ಬರುತ್ತಾರೆ ಕಾರಣ ಇಲ್ಲಿಯ ಕಲಾವಿದರ ಪ್ರತಿಭೆ ಎಂದು ಅಭಿಪ್ರಾಯ ಪಟ್ಟರು.
ಕಲಾವಿದರಿಗೆ ಸರಕಾರ ಸ್ಪಂಧಿಸುತ್ತಿರುವುದು ಸಂತೋಷದ ಸಂಗತಿ. ಇಂಥ ಕಲಾ ಪ್ರದರ್ಶನಗಳು ನಿರಂತರವಾಗಿ ನಡೆಯುತ್ತಿರಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಕರ್ನಾಟಕ ಲಲಿತಕಲಾ ಅಕಡೆಮಿಯ ಸದಸ್ಯ ರಮೇಶ ಚವ್ಹಾಣ ಮಾತನಾಡಿ, ಇತ್ತೀಚೆಗೆ ವಿಜಯಪುರ ನಗರದಲ್ಲಿ ಕಲಾ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ನಾಡಿನ ನಾನಾ ಭಾಗದ ಕಲಾವಿದರಿಂದ ಪ್ರದರ್ಶನ ನಡೆಯುತ್ತಿರುವುದು ಜಿಲ್ಲೆಯ ಕಲಾಸಕ್ತರಿಗೆ. ತುಂಬ ಸಂತೋಷವನ್ನುಂಟು ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮತ್ತೋರ್ವ ಮುಖ್ಯ ಅತಿಥಿ ಪ್ರವಾಸೋಧ್ಯಮ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಇಲಾಖೆಯ ಆರ್ಟ ಗ್ಯಾಲರಿಯಿಂದ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ನಿರಂತರವಾಗಿ ಇಲ್ಲಿ ಕಲಾವಿದರು ಪ್ರದರ್ಶನ, ಶಿಬಿರ ಎರ್ಪಡಿಸುತ್ತಿರುವುದರಿಂದ ನಮಗೂ ಕಲಾಕೃತಿ ನೋಡಿ ಆಸ್ವಾದಿಸುವಂತಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಲಾವಿದ ಪಿ.ಎಸ್.ಕಡೇಮನಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಯೋಜನೆ ಪಡೆದು ವಿಜಯಪುರದಲ್ಲಿ ಪ್ರದರ್ಶನ ಏರ್ಪಡಿಸಿದ್ದು ಸಂತೊಷದ ಸಂಗತಿ. ಇದರಿಂದ ಬೇರೆ ಬೇರೆ ಜಿಲ್ಲೆಯ ಮತ್ತು ರಾಜ್ಯದ ಕಲಾವಿದರು ನಮ್ಮ ಜಿಲ್ಲೆಯ ಕಲಾವಿದರೊಂದಿಗೆ ಅನುಸಂಧಾನವಾಗುತ್ತದೆ. ಕಲಾ ಪ್ರದರ್ಶನ ಆಯೋಜಿಸಿರುವ ಮಂಜುನಾಥ ಗೋವಿಂದವಾಡ ಅವರು ಅಭಿನಂಧನಾರ್ಹರು ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಹಿರಿಯ ಕಲಾವಿದರಾದ ಬಿ.ಎಸ್. ಪಾಟೀಲ್, ಲಿಂಗರಾಜ ಕಾಚಾಪುರ, ರುದ್ರಗೌಡ ಇಂಡಿ, ಶಿವಾನಂದ ಅಥಣಿ, ಮದನ ವಗ್ಯಾನವರ, ಯಾಮಿನಿ ಶಹಾ, ಜಿಲ್ಲಾ ಪ್ರವಾಸಿ ಅಧಿಕಾರಿ ತುಕಾರಾಮ ಪವಾರ, ಅನಿಲ, ಜಗದೇವ ಗುಣಕಿ, ಆನಂದ ಸಹಿತ ಕಲಾಸಕ್ತರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು. ಹಿರಿಯ ಕಲಾವಿದ ವಿದ್ಯಾಧರ ಸಾಲಿ ಕಾರ್ಯಕ್ರಮ ನಿರ್ವಹಿಸಿದರು.
*****