ಬಳ್ಳಾರಿ, ಅ.5: ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಬುಧವಾರ ಜಿಲ್ಲೆಯ ಕೋಟೆ ಸ್ತಬ್ಧ ಚಿತ್ರ ಹಾಗೂ ಸಂಡೂರು ತಾಲೂಕಿನ ಹಳೇ ದರೋಜಿ ಬುಡ್ಗ ಜಂಗಮರ ಕಲಾಗ್ರಾಮದ ಶ್ರೀ ಅಶ್ವ ರಾಮಣ್ಣ ಹಗಲುವೇಷ ಕಲಾ ತಂಡ ಭಾಗವಹಿಸಿ ಗಮನ ಸೆಳೆದವು.
ರಾಮಾಯಣ ಹಾಗೂ ಮಹಾಭಾರತದ ಪ್ರಸಂಗದ ವೇಷಗಳನ್ನು ಧರಿಸಿ ನೆರೆದ ಪ್ರೇಕ್ಷಕರನ್ನು ಮನರಂಜಿಸಿದರು. ಕಲಾ ತಂಡದ ಮುಖ್ಯಸ್ಥ ಅಶ್ವ ರಾಮಣ್ಣ, ಕಲಾ ಸಂಘದ ಸಂಘಟಕ ಡಾ ಅಶ್ವ ರಾಮು, ಕಲಾವಿದರಾದ ದೊಡ್ಡ ಲಾಲಪ್ಪ, ವಿ ಸೋಮಶೇಖರ್, ಕೆ ಲಿಂಗರಾಜು, ಮಂಜುನಾಥ ಕುರುಗೋಡು, ಕಂಪ್ಲಿ ಮಾರೇಶ, ಮಿರಾಲಿ ರೆಡ್ಡಿ, ಮಂಜು, ಅಶ್ವ ರುದ್ರೇಶ, ವಿಜಯ್, ಧನುಂಜಯ, ದಾದ, ಮೋಹನ್, ಶಿವು, ವಿಜಯ್, ಕಿರಣ್ ಪಾಲ್ಗೊಂಡಿದ್ದರು.
ಈ ಬಾರಿಯ ಆಕರ್ಷಕವೆಂದರೆ ಜಿಲ್ಲೆಯ ಕೋಟೆ, ಮಿಂಚೇರಿ ಗುಡ್ಡ ಹಾಗೂ ನಗರ ದೇವತೆ ಶ್ರೀ ಕನಕದುರ್ಗಮ್ಮ ದೇವಸ್ಥಾನದ ಸ್ತಬ್ಧ ಚಿತ್ರ ಮೆರವಣಿಗೆಯಲ್ಲಿ ಭಾಗವಹಿಸಿ ಗಮನ ಸೆಳೆಯಿತು.
*****