ಬಳ್ಳಾರಿ ಅ.7: ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿ ಕಲಬುರಗಿಯ ಸರ್ಕಾರಿ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ವಿಭಾಗದ ಸಹ ಪ್ರಾಧ್ಯಾಪಕ ಡಾ.ಮಂಜುನಾಥ ಹೆಚ್.ಕೆ, ಅವರು ಅನ್ಯ ಕಛೇರಿ ಕರ್ತವ್ಯದ ಮೇರೆಗೆ ಗುರುವಾರ ಅಧಿಕಾರವನ್ನು ವಹಿಸಿಕೊಂಡಿದ್ದಾರೆ.
ಬೆಂಗಳೂರಿನ ಕಾಲೇಜು ಶಿಕ್ಷಣ ಆಯುಕ್ತರ ಕಚೇರಿಯು ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾಗಿದ್ದ ಡಾ.ಶ್ರೀದೇವಿ ಆರ್.ಎಂ, ಅವರು ತಮ್ಮ ಪ್ರಭಾರವನ್ನು ಡಾ.ಮಂಜುನಾಥ ಹೆಚ್.ಕೆ. ಅವರಿಗೆ ವಹಿಸಿಕೊಟ್ಟರು. ಡಾ.ಮಂಜುನಾಥರೆಡ್ಡಿ ಅವರು ಮೂಲತಃ ಬಳ್ಳಾರಿಯವರಾಗಿದ್ದು, ವೀರಶೈವ ಕಾಲೇಜಿನಲ್ಲಿ ಪದವಿ ವ್ಯಾಸಂಗ ಪೂರೈಸಿದ ನಂತರ ಎಂ.ಎಸ್‌ಸಿ ಸ್ನಾತಕೋತ್ತರ ಪದವಿ, ಎಂ.ಫಿಲ್ ಹಾಗೂ ಪಿಎಚ್.ಡಿ ಪದವಿಗಳನ್ನು ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಡೆದುಕೊಂಡಿದ್ದಾರೆ. ೧೯೯೭ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ಎಲೆಕ್ಟ್ರಾನಿಕ್ಸ್ ಉಪನ್ಯಾಸಕ ಹುದ್ದೆಗೆ ಆಯ್ಕೆಯಾದರು. ೧೯೯೭ರಲ್ಲಿ ಗದಗ ಜಿಲ್ಲೆಯ ರೋಣದಲ್ಲಿ, ೧೯೯೮ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ, ೨೦೦೪ ರಿಂದ ನರಗುಂದದಲ್ಲಿ , ೨೦೦೬ ರಿಂದ ಶಿಕಾರಿಪುರದಲ್ಲಿ ೨೦೧೭ ರಿಂದ ಸರ್ಕಾರಿ ಮಹಾವಿದ್ಯಾಲಯ ಕಲಬುರಗಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇದೀಗ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಬಳ್ಳಾರಿ ಸರಳಾದೇವಿ ಕಾಲೇಜಿಗೆ ಪ್ರಾಂಶುಪಾಲ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪಂಚಾಕ್ಷರಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ದಸ್ತಗೀರ್‌ಸಾಬ್ ದಿನ್ನಿ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಶಶಿಕಾಂತ್, ಭೌತಶಾಸ್ತ್ರ ವಿಭಾಗದ ಡಾ.ಕುಂಚ ನರಸಿಂಹಲು, ಅಮರಗಿರಿ, ಕನ್ನಡ ವಿಭಾಗದ .ಕೆ.ಬಸಪ್ಪ ಮತ್ತಿತರರು ಇದ್ದರು.
*****
Post Views: 401