ಅನುದಿನ‌ ಕವನ-೬೪೭, ಕವಿ:ವಿಠೋಬಾ ಹೊನಕಾಂಡೆ, ಬೀದರ್, ಕವನದ ಶೀರ್ಷಿಕೆ:ಗುರು ‘ಕುಲ’

ಗುರು’ಕುಲ’

ಏ ಗುರುಕುಲವೇ
ನೀ ಯಾರಿಗೆ ನೀಡಿದೆ ಶಿಕ್ಷಣ ??
ಕುಲ ನೋಡಿ ನೀ ನೀಡುವ ಶಿಕ್ಷಣಕ್ಕಿಂತ
ಕುಲ ಭೇಧವಿಲ್ಲದೇ ಸಂವಿಧಾನ ಬದ್ಧವಾಗಿ ನೀಡುವ ಶಿಕ್ಷಣವೇ ಮೇಲು

ವಿದ್ಯೆ ಕಲಿಯಲು ಬಂದವನ ಹೆಬ್ಬೆರಳು ಕೇಳಿ
ಕುಲಜರೆಂದು ಸ್ವಯಂ ಘೋಸಿಸಿಕೊಂಡವರಿಗೆ ಮಾತ್ರ ಶಿಕ್ಷಣ ನೀಡಿ
ಮೇಲು ಕೀಳು ಪದ್ಧತಿಯ ಗಟ್ಟಿಗೊಳಿಸಿ
ಎದ್ದು ನಿಂತ
ಗುರುಕುಲವೇ ……
ನಿನ್ನ ಕುಲ ಯಾವುದು?

ಕುಲವಿಲ್ಲದ
ಮೇಲು ಕೀಳು ಇಲ್ಲದ
ಸಂವಿಧಾನ ಬದ್ಧ ಶಿಕ್ಷಣವೇ ನನ್ನ ಹಕ್ಕು…
ಜೈ ಭೀಮ ನಮಗೆ ನೀಡಿದ ಶಿಕ್ಷಣದ ಹಕ್ಕು…
ಸಮಾನ ಶಿಕ್ಷಣ ನೀಡಲು ಹೇಳಿದ
ಸಂವಿಧಾನದವೇ ನಮ್ಮ ಜೀವ.

– ವಿಠೋಬಾ ಹೊನಕಾಂಡೆ, ಬೀದರ್
*****