ಯಾಕೆ ಜಾತಿ…?
ಗಂಧಕ್ಕಿಲ್ಲದ
ಗರಿಕೆಗಿಲ್ಲದ
ಗಾಳಿಗಿಲ್ಲದ ಜಾತಿ
ನೋಡಿ
ಮಾತುಬರುವ
ಮನುಷ್ಯನಿಗಿದೆ….!
ಪ್ರಾಣಿಗಿಲ್ಲದ
ಪಕ್ಷಿಗಿಲ್ಲದ
ಕಾಡುಮೃಗಗಳಿಗಿಲ್ಲದ ಜಾತಿ
ನೋಡಿ
ಮಾತನಾಡುವ
ಮನುಷ್ಯನಿಗಿದೆ….!
ಕಾಡಿಗಿರದ
ಬಾನಿಗಿರದ
ಧರೆಗೂ ಇರದ ಜಾತಿ
ನೋಡಿ
ಮಾತು ಕಲಿತಿರುವ
ಮನುಷ್ಯನಿಗಿದೆ….!
ಹೂವಿಗಿರದ
ನಾರಿಗಿರದ
ಕಡಲಿಗಿರದ ಜಾತಿ
ನೋಡಿ
ಮಾತು ಬಲ್ಲ
ಮನುಷ್ಯನಿಗಿದೆ…!
ಯಾಕೆ ಮನುಷ್ಯನಿಗೆ ಜಾತಿ..?
ಮನು ಸೃಷ್ಟಿಸಿದ ಈ
ಅಸಮತೆಯ ರೋಗಭೀತಿ
ನಮಗೇಕೆ…?
ನಾವು ಬುದ್ದನತ್ತ ನಡೆಯಲು
ಬದ್ದರಾಗುವುದೆ ಆಗಲಿ ನಮ್ಮ ನೀತಿ ಮತ್ತು ಕ್ರಾಂತಿ….
-ಸಿದ್ದು ಜನ್ನೂರ್, ಚಾಮರಾಜ ನಗರ
*****