ಎಐಸಿಸಿ ಅಧ್ಯಕ್ಷರ ಚುನಾವಣೆ: ಬಳ್ಳಾರಿಯಲ್ಲಿ ರಾಹುಲ್‌ ಗಾಂಧಿ ಮತದಾನ

ಬಳ್ಳಾರಿ, ಅ.17: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ(ಎಐಸಿಸಿ) ಅಧ್ಯಕ್ಷೀಯ ಚುನಾವಣೆ ಪ್ರಜಾಪ್ರಭುತ್ವದ ಆಶಯಗಳಿಗೆ ಅನುಸಾರವಾಗಿ ಸೋಮವಾರ ದೇಶದಾದ್ಯಂತ ಮತದಾನ ನಡೆಯಿತು.
ಭಾರತ್ ಜೋಡೋ ಯಾತ್ರೆ ಬಿಡುವಿನ ದಿನವಾದ ಇಂದು ಎಐಸಿಸಿ ನಿಕಟಪೂರ್ವ ಅಧ್ಯಕ್ಷ ರಾಹುಲ್ ಗಾಂಧಿ ಅವರು
ಅವರು ನಗರದ ಭಾರತ್ ಜೋಡೋ ಯಾತ್ರೆಯ ಕ್ಯಾಂಪ್ ನ ಮತದಾನ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.


ಸಂಸದ ಡಿ ಕೆ ಸುರೇಶ್ ಅವರು ಕೂಡ ಮತ ಚಲಾಯಿಸಿದರು. ಸುಮಾರು ನಲವತ್ತು ಮತದಾರರು ಮತ ಚಲಾಯಿಸಿದರು ಎಂದು ಮೂಲಗಳು ತಿಳಿಸಿವೆ.
*****

09:04