ವಣೇನೂರು: ನಾಲ್ವರು ಶಿಕ್ಷಕರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ: ಶಾಲಾಭಿವೃದ್ಧಿಗೆ 28ಸಾವಿರ ರೂ. ದೇಣಿಗೆ

ಬಳ್ಳಾರಿ, ಸೆ.17: ತಾಲೂಕಿನ ವಣೇನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹತ್ತು-ಹದಿನೈದು ವರ್ಷಗಳಿಂದ ಕರ್ತವ್ಯನಿರ್ವಹಿಸುತ್ತಿದ್ದ ನಾಲ್ವರು ಸಹ ಶಿಕ್ಷಕರಾದ ಶ್ರೀನಿವಾಸ್ ಪ್ರಸಾದ್, ಪ್ರವೀಣ್ ಕುಮಾರ್, ಶ್ರೀಮತಿ ಗೀತಾ, ಶ್ರೀಮತಿ ಸೌಮ್ಯ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಹೃದಯಸ್ಪರ್ಶಿಯಾಗಿ ಬೀಳ್ಕೊಡಲಾಯಿತು. ವರ್ಗಾವಣೆಗೊಂಡ ನಾಲ್ವರು ಶಿಕ್ಷಕರು…

ಹಲಕುಂದಿ ಸಕಿಪ್ರಾ ಶಾಲೆಯಲ್ಲಿ(ವಿಬಿಎಸ್ ಮಠ) ಅರ್ಥಪೂರ್ಣ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

ಬಳ್ಳಾರಿ, ಸೆ.15: ತಾಲೂಕಿನ ಹಲಕುಂದಿ ಗ್ರಾಮದ ಸರಕಾರಿ‌ ಕಿರಿಯ ಪ್ರಾಥಮಿಕ ಶಾಲೆ(ವಿಬಿಎಸ್ ಮಠ)ಯಲ್ಲಿ ಶುಕ್ರವಾರ ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ’ವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಭಾರತದ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಓದಿದರು.…

ಬೆಂವಿವಿ ವತಿಯಿಂದ “ಸಂವಿಧಾನ ಪೀಠಿಕೆ ಓದುವ” ಕಾರ್ಯಕ್ರಮ ಆಯೋಜನೆ -ಕುಲಸಚಿವ ಶೇಕ್ ಲತೀಫ್

ಬೆಂಗಳೂರು, ಸೆ. 15: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಕರ್ನಾಟಕ ಸರ್ಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ “ಸಂವಿಧಾನ ಪೀಠಿಕೆ ಓದು” ಕಾರ್ಯಕ್ರಮವನ್ನು ಮೊದಲಬಾರಿಗೆ  ಸಾರ್ವತ್ರೀಕರಿಸಿರುವುದರಿಂದ ಬೆಂಗಳೂರು ವಿಶ್ವವಿದ್ಯಾಲಯವು ಜ್ಞಾನಭಾರತಿ ಆವರಣದ ಆಡಳಿತ ಕಛೇರಿ ಮುಂಭಾಗದಲ್ಲಿ  ಶುಕ್ರವಾರ ಬೆಳಗ್ಗೆ 11.30ಕ್ಕೆ…

ಕೊಪ್ಪಳದ ಕನ್ನೇರುಮಡು ಗ್ರಾಮಸ್ಥರ‌‌ ಶಿಕ್ಷಣ ಪ್ರೇಮ ಇತರರಿಗೆ ಮಾದರಿ -ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ

ಕೊಪ್ಪಳ ಸೆ. 13: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ವಿವೇಕ ಯೋಜನೆಯಡಿಯಲ್ಲಿ 30 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಕನಕಗಿರಿ ತಾಲೂಕಿನ ಕನ್ನೇರುಮಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ…

ವಿದ್ಯಾರ್ಥಿಗಳ ಆಸಕ್ತಿಯೇ ಸಾಧನೆಗೆ ಹಾದಿ -ಅಂತಾರಾಷ್ಟ್ರೀಯ ಅಭಿಪ್ರೇರಕ ಆರ್ ಎ ಚೇತನ್ ರಾಮ್

ಬಳ್ಳಾರಿ, ಸೆ.11: ಒಂದು ದೀಪದಿಂದ ನೂರು ದೀಪ ಬೆಳಗಬಹುದು  ಎಂದು ಅಂತಾರಾಷ್ಟ್ರೀಯ ಅಭಿಪ್ರೇರಕ ಆರ್ ಎ ಚೇತನ್ ರಾಮ್ ಅವರು ಹೇಳಿದರು. ನಗರದ  ಬಸವ ಭವನದಲ್ಲಿ ವೀ.ವಿ ಸಂಘದ ಸ್ವತಂತ್ರ ಪ.ಪೂ ಕಾಲೇಜಿನವರು ಆಯೋಜಿಸಿದ್ದ ‘ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ವಿಶೇಷ…

‘ಕೊನೆಯ ಸಹಿ’ ಮಾಡುವುದು ಅಷ್ಟು ಸುಲಭವಲ್ಲ ! (ಟ್ರಾನ್ಸ್‌ಫರ್ ಆಯ್ತಾ ನಿಮ್ದು? ಒಂದ್ಸಲ ಓದಿ ಬಿಡಿ) -ಸೋಮು ಕುದರಿಹಾಳ ಚಂದಾಪುರ, ಗಂಗಾವತಿ

‘ಕೊನೆಯ ಸಹಿ’ ಮಾಡುವುದು ಅಷ್ಟು ಸುಲಭವಲ್ಲ ! (ಟ್ರಾನ್ಸ್‌ಫರ್ ಆಯ್ತಾ ನಿಮ್ದು? ಒಂದ್ಸಲ ಓದಿ ಬಿಡಿ) ಸರ್ಕಾರಿ ನೌಕರಿ ಮಾಡುವವರ ಬದುಕಿನಲ್ಲಿ ವರ್ಗಾವಣೆ ಎಂಬುದು ಸಿಹಿ ಕಹಿಗಳ ಸಮ್ಮಿಲನ. ನೌಕರಿ ಸಿಗುವಾಗ ಯಾವುದೇ ಜಿಲ್ಲೆ ರಾಜ್ಯ ಗಡಿಗಳ ಮಿತಿ ನೋಡದೇ ಕೆಲಸ…

ಸಣ್ಣ ಸಣ್ಣ ಪ್ರಶಂಸೆಗಳು ಉನ್ನತ ಮಟ್ಟಕ್ಕೆ ಹೋಗಲು ಪ್ರೇರೇಪಿಸುತ್ತವೆ : ಎಸ್ಪಿ ಶ್ರೀ ಹರಿಬಾಬು

ಹೊಸಪೇಟೆ, ಸೆ.10: ವಿದ್ಯಾರ್ಥಿಗಳ ಜೀವನದಲ್ಲಿ ಸಣ್ಣ ಸಣ್ಣ ಪ್ರಶಂಸೆಗಳು ಅವರನ್ನು ಉನ್ನತ ಮಟ್ಟಕ್ಕೆ ಹೋಗಲು ಪ್ರೇರೇಪಿಸುತ್ತವೆ ಎಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್.ಹೇಳಿದರು.   ನಗರದ  ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾ ಕುರುಬರ ಸಂಘ, ಜಿಲ್ಲಾ ಹಾಗು ತಾಲೂಕು ಕನಕ…

ಶಿಕ್ಷಕರೆಂದರೆ ಸೂತ್ರದ ಗೊಂಬೆಗಳು……. -ಸಿದ್ಧರಾಮ ಕೂಡ್ಲಿಗಿ

ಸೆ.5 ಪ್ರತಿವರ್ಷದಂತೆಯೇ, ಪ್ರತಿ ವರ್ಷಾಚರಣೆಯಂತೆಯೇ ” ಶಿಕ್ಷಕರ ದಿನಾಚರಣೆ “. ಗುರುಬ್ರಹ್ಮ, ಗುರುವಿಷ್ಣು……….. ಎಂದು ಒಂದುದಿನ ಮಾತ್ರ ಹಾಡಿ ಹೊಗಳುವ ದಿನ. ನಗು ಬರುತ್ತಿದೆ ನನಗೆ. ಒಂದು ಅದ್ದೂರಿ ಸಮಾರಂಭ, ಅತಿಥಿ ಅಭ್ಯಾಗತರು, ಒಂದಷ್ಟು ಸನ್ಮಾನಗಳು, ಒಂದೊಳ್ಳೆಯ ಊಟ ಅಲ್ಲಿಗೆ ಶಿಕ್ಷಕರ…

ಶಿಕ್ಷಕರಲ್ಲೂ ಶ್ರೇಣೀಕೃತ ವ್ಯವಸ್ಥೆಯಿದೆ ಎಂದರೆ ನಂಬುವಿರಾ!?

ಪ್ರಾಥಮಿಕ ಶಾಲೆ ಶಿಕ್ಷಕಕರು ಪ್ರೌಢ ಶಾಲಾ ಶಿಕ್ಷಕಕರು ಪದವಿ ಪೂರ್ವ ಕಾಲೇಜಿನ ಶಿಕ್ಷಕರು ಪದವಿ ಕಾಲೇಜಿನ ಶಿಕ್ಷಕರು ವಿಶ್ವ ವಿದ್ಯಾಲಯದ ಶಿಕ್ಷಕರು ಇವರಲ್ಲಿ ಬಹುತೇಕ ಜನ ಶಿಕ್ಷಕರು ತಮಗಿಂತ ಕೆಳಗಿನ ಹಂತದ ಶಿಕ್ಷಕರನ್ನು ಗೌರವಿಸುವುದಿಲ್ಲ, ತಮಗಿಂತಲೂ ಬುದ್ಧಿವಂತಿಕೆಯಲ್ಲಿ ಕಡಿಮೆ ಎಂದೇ ಭಾವಿಸುತ್ತಾರೆ.…

ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ: ಬಳ್ಳಾರಿಯಲ್ಲಿ ತಾಂತ್ರಿಕ ಕಾಲೇಜು ಸ್ಥಾಪನೆಗೆ 5 ಎಕರೆ ಜಾಗ ಮೀಸಲು -ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ 

ಬಳ್ಳಾರಿ,ಸೆ.2: ಜಿಲ್ಲೆಯಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಉತ್ತೇಜನ ನೀಡಲು ನಗರದಲ್ಲಿ ಸರ್ಕಾರಿ ತಾಂತ್ರಿಕ ಕಾಲೇಜು ಸ್ಥಾಪನೆಗೆ 5 ಎಕರೆ ಜಾಗ ಮೀಸಲಿರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಯುವಜನ ಸಬಲೀಕರಣ, ಕ್ರೀಡೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ…