ಸಂಗೀತ ‌ನಿರ್ದೇಶಕ, ಸಹೃದಯ ‌ಚಾರುಚಂದ್ರ ಅವರಿಗೆ‌ ಅಕ್ಷರ ನಮನ -ಶಿವಶಂಕರ ಬಣಗಾರ

ಹೊಸಪೇಟೆಯ ಖ್ಯಾತ ವಾಯ್ಲಿನ್‌ ವಾದಕ ಚಾರುಚಂದ್ರ ( ವಿಜಯ ಚಂದ್ರ) ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ. ಮರಿಯಮ್ಮನಹಳ್ಳಿಯಲ್ಲಿ ನಾನು ಪಿಯುಸಿ ಓದುವಾಗ (೧೯೮೮-೮೯) ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಯಾರನ್ನಾದರೂ ವಿಶೇಷ ವ್ಯಕ್ತಿಗಳನ್ನು ಕರೆಯಿಸಬೇಕೆಂದುಕೊಂಡಾಗ ಆಂಗ್ಲ ಉಪನ್ಯಾಸಕರಾಗಿದ್ದ ಕಾಕಂಡ್ಕಿ ಗೋಪಾಲ್‌ ರಾವ್‌ ಅವರು ಆಗ ಅವರೇ…

ಖಡಕ್ ಪತ್ರಕರ್ತ ಮದನ ಮೋಹನ್, ನುಡಿ‌ನಮನ: ಶಿವಾಜಿನಗಣೇಶನ್, ಹಿರಿಯ ಪತ್ರಕರ್ತರು, ಬೆಂಗಳೂರು

ಖಡಕ್ ಪತ್ರಕರ್ತ ಮದನ ಮೋಹನ್ ಉತ್ತರ ಕರ್ನಾಟಕದ ಖ್ಯಾತ ಮತ್ತು ಖಡಕ್ ವ್ಯಕ್ತಿತ್ವದ ಹಿರಿಯ ಪತ್ರಕರ್ತ ಮತ್ತಿಹಳ್ಳಿ ಮದನ ಮೋಹನ್ ಕಳೆದ ವಾರ ವಯೋಸಹಜ ಅನಾರೋಗ್ಯದಿಂದ ನಿಧನರಾದದ್ದು ಹಳೆಯ ಸುದ್ದಿ. 1982ರಿಂದ 85ರವರೆಗೆ ನಾನು ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿ ಪ್ರಜಾವಾಣಿ ಮತ್ತು…

ಜ.28ರಂದು ಬಳ್ಳಾರಿಯಲ್ಲಿ ಬಿ.ಎಂ.ಕಾಂತಿಮಣಿ ಅವರಿಗೆ ನುಡಿನಮನ

ಬಳ್ಳಾರಿ, ಜ. 26: ಇದೇ ಜ. 10 ರಂದು ಬೆಂಗಳೂರಿನಲ್ಲಿ ನಿಧನರಾದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಚೀಫ್ ಮ್ಯಾನೇಜರ್ ಬಿ. ಎಂ. ಕಾಂತಿಮಣಿ ಅವರಿಗೆ ಸಹೋದ್ಯೋಗಿಗಳು, ಬಂಧು‌ಮಿತ್ರರ ಸಹಯೋಗದಲ್ಲಿ ಕುಟುಂಬ ಸದಸ್ಯರು ಜ.28ರಂದು ಭಾನುವಾರ ನಗರದಲ್ಲಿ ನುಡಿನಮನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.…

ಅಚ್ಚಳಿಯದ ಕಲೆಯನ್ನು ಬಿಟ್ಟುಹೋದ ಮೇರು ಕಲಾವಿದೆ ಲೀಲಮ್ಮ…! ನುಡಿ ನಮನ: ಡಿ ಎಸ್.ಚೌಗಲೆ, ಹಿರಿಯ ಸಾಹಿತಿ-ರಂಗಕರ್ಮಿ, ಬೆಳಗಾವಿ, ಚಿತ್ರಕೃಪೆ: ಬಣ್ಣ ಆರ್ಟ್ಸ್, ಬೆಂಗಳೂರು

ಎಪ್ಪತ್ತರ ದಶಕ. ರಾಜ್ ಕುಮಾರ್ ಮತ್ತು ಲೀಲಾವತಿ ಜೋಡಿಯ ಹಲವು ಚಿತ್ರಗಳು, ಅಂದಿನ ಅವರ ಅಭಿನಯದ ಜನಪ್ರಿಯ ಹಾಡುಗಳನ್ನು ರೇಡಿಯೋಗಳಲ್ಲಿ ಕೇಳಿ ಆನಂದಿಸುವ ಕಾಲ. ಆಗ ರೇಡಿಯೋ,ಕಂಪನಿ ನಾಟಕಗಳು,ಸಂಗ್ಯಾ ಬಾಳ್ಯಾ,ಶ್ರೀಕೃಷ್ಣ ಪಾರಿಜಾತ ಸಣ್ಣಾಟಗಳೇ ನಮ್ಮಂಥ ಹಳ್ಳಿಗರ ರಂಜನೆ,ಬೋಧನೆಯ ಭಾಗವಾದವುಗಳು.     …

ಕಲಬುರಗಿ ಪತ್ರಕರ್ತ ಕಲ್ಲೂರಿನ ಕ್ಯಾದಿಗೇರಿ ನಾಗಿರೆಡ್ಡಿಯ ( ಕೆ.ಎನ್. ರೆಡ್ಡಿ) ಅಕಾಲಿಕ ಸಾವಿಗೆ ಸಾಹಿತಿ ಸಿದ್ದು ಯಾಪಲಪರವಿ ಕಂಬನಿ

ಧಾರವಾಡ ಕರ್ನಾಟಕ ಕಾಲೇಜಿನ ಗೆಳೆಯ, ಹಿರಿಯ ಇಂಗ್ಲಿಷ್ ಪತ್ರಕರ್ತ ಕೆ.ಎನ್. ರೆಡ್ಡಿ ಬದುಕು ದಾರುಣ ಅಂತ್ಯ ಕಂಡಿದೆ. ಸದಾಕಾಲ ಅಂತರ್ಮುಖಿಯಾಗಿರುತ್ತಿದ್ದ ರೆಡ್ಡಿಯ ಮಾತು ಕಡಿಮೆ, ಕೆಲಸ ಹೆಚ್ಚು. ಅಗತ್ಯಕ್ಕಿಂತ ಹೆಚ್ಚು ಸೂಕ್ಷ್ಮ. ವಿಧಾನಸೌಧ ಸುತ್ತು ಹಾಕುವಾಗ ಅನೇಕ ಘಟಾನುಘಟಿಗಳ ಸಂಪರ್ಕವನ್ನು ತಲೆಗೆ…

ಪ್ರಾಂಶುಪಾಲ, ರಂಗಕಲಾವಿದ ದಿ.ಎಂ ಮೋಹನ ರೆಡ್ಡಿಯವರಿಗೆ ನುಡಿನಮನ

ಬಳ್ಳಾರಿ, ಜು.೧೦: ನಗರದ ಸರ್ಕಾರಿ ಪ.ಪೂ ಕಾಲೇಜಿನ ಪ್ರಾಂಶುಪಾಲರು ರಂಗಭೂಮಿ ಕಲಾವಿದರು ಸಂಘಟಕರು ಹಾಗು ಬಳ್ಳಾರಿ ಜಿಲ್ಲಾ ಪಿಯು ಕಾಲೇಜ್ ಪ್ರಾಂಶುಪಾಲರ ಸಂಘ ಅಧ್ಯಕ್ಷರಾಗಿದ್ದ ಎಂ ಮೋಹನರೆಡ್ಡಿಯವರು ಕಳೆದ ತಿಂಗಳು ತೀವ್ರ ಹೃದಯಾಘಾತಕ್ಕೆ ಒಳಗಾಗಿ ನಿಧನರಾದ ಪ್ರಯುಕ್ತ ಶೀಯತರಿಗೆ ಶ್ರದ್ಧಾಂಜಲಿ ಹಾಗು…

ಹೀಗೊಬ್ಬ ವೈದ್ಯರಿದ್ದರು….! ಅಕ್ಷರ ನಮನ: ಚಂದ್ರಕಾಂತ ವಡ್ಡು, ಹಿರಿಯ ಪತ್ರಕರ್ತರು, ಬೆಂಗಳೂರು

ಬಳ್ಳಾರಿ ನಗರದ ಹಿರಿಯ ನೇತ್ರ ತಜ್ಞ, ಡಾ. ಕೊಂಡ್ಲಹಳ್ಳಿ ನಾಗರಾಜ ಅವರು ಇಂದು ವಿಧಿವಶವಾಗಿದ್ದಾರೆ. ಸಮಾಜಮುಖಿಯಾಗಿದ್ದ ಹಿರಿಯ ವೈದ್ಯರ ಒಡನಾಡಿ ಹಿರಿಯ ಪತ್ರಕರ್ತ, ಸಾಹಿತಿ ಚಂದ್ರಕಾಂತ ವಡ್ಡು ಅವರು ಅಕ್ಷರ ನಮನ ಸಲ್ಲಿಸಿದ್ದಾರೆ.  ಕರ್ನಾಟಕ ಕಹಳೆ ಡಾಟ್ ಕಾಮ್ ಕೂಡಾ ಭಾವಪೂರ್ಣ…

ಅಭಿವೃದ್ಧಿಯ ಹರಿಕಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಲೇಖಕರು: ಪ್ರೊ. ಎಂ. ನಾರಾಯಣಸ್ವಾಮಿ ತ್ಯಾವನಹಳ್ಳಿ, ಬೆಂಗಳೂರು

ಅಭಿವೃದ್ಧಿಯ ಹರಿಕಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರಿನ ಆಳರಸರ ಪೈಕಿ ಹೆಚ್ಚು ಜನಪರ ಆಡಳಿತ ನಡೆಸಿದವರು ನಾಲ್ವಡಿಯವರು. ನಾಡಿನ ಶ್ರೇಯೋಭಿವೃದ್ಧಿಗಾಗಿ ಜೀವನವನ್ನು ಮುಡಿಪಿಟ್ಟವರು. ಅವರ ಅವಧಿಯಲ್ಲಿ ಅಸಂಖ್ಯಾತ ಅಭಿವೃದ್ಧಿಯ ಕೆಲಸಗಳಾದವು. ದೀನದಲಿತರ, ಹಿಂದುಳಿದವರ ಏಳಿಗೆಗಾಗಿ ಕ್ರಾಂತಿಕಾರಿ ಹೆಜ್ಜೆಗಳನ್ನಿಟ್ಟರು. ರಾಜರ್ಷಿಯವರ ಆಡಳಿತದ…

ನಾಡೋಜ ಬೆಳಗಲ್ಲು ವೀರಣ್ಣ ಅವರ ಕಲಾ ಸೇವೆ ಅನನ್ಯ – ಮಹಾರಾಷ್ಟ್ರ ಮಾಜಿ ಶಿಕ್ಷಣ ಸಚಿವ ಪ್ರೊ. ವಸಂತ ಪುರ್ಕೆ

ಬಳ್ಳಾರಿ, ಏ.9: ಸಾಹಿತ್ಯ, ಸಾಂಸ್ಕೃತಿಕ, ಕಲೆ, ಕ್ರೀಡಾ ಕ್ಷೇತ್ರವನ್ನು ಪ್ರತಿನಿಧಿಸುವರು ದೇಶದ ಆಸ್ತಿ ಎಂದು ಮಹಾರಾಷ್ಟ್ರದ ಮಾಜಿ ಉಪ ಸಭಾಪತಿ ಹಾಗೂ ಮಾಜಿ ಶಿಕ್ಷಣ ಸಚಿವ ಪ್ರೊ. ವಸಂತ ಪುರ್ಕೆ ಅವರು ತಿಳಿಸಿದರು. ರೂಪನ ಗುಡಿಯ ಶ್ರೀ ಮಾರುತಿ ತೊಗಲು ಗೊಂಬೆ…

ಕುಗ್ರಾಮ ಹೆಗ್ಗವಾಡಿಯಿಂದ ದೆಹಲಿಯ ಸಂಸತ್ ಭವನವರೆಗೆ ನಡೆದಿದ್ದ ಧ್ರುವತಾರೆ! ನುಡಿ‌ನಮನ: ಗೌಡಹಳ್ಳಿ ಮಹೇಶ್, ಪತ್ರಕರ್ತರು, ಚಾಮರಾಜ ನಗರ

ಆರ್.ಧ್ರುವನಾರಾಯಣ್ ಅವರು ರಾಜ್ಯ ರಾಜಕಾರಣದಲ್ಲಿ ಧ್ರುವತಾರೆಯಾಗಿ ಮಿನುಗುತ್ತಿದ್ದವರು. ಅವರ ಅಕಾಲಿಕ ನಿಧನ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳನ್ನು ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ. ಅವರ ನಿಧನಕ್ಕೆ ಸಂತಾಪವನ್ನು ಸೂಚಿಸುತ್ತ, ಧ್ರುವನಾರಾಯಣ್ ಅವರು ರಾಜಕೀಯವಾಗಿ ನಡೆದು ಬಂದ ಹಾದಿಯನ್ನೊಮ್ಮೆ ಅವಲೋಕಿಸೋಣ. ಚಾಮರಾಜನಗರ ತಾಲ್ಲೂಕಿನ…