ಅನುದಿನ ಕವನ-೫೦೪, ಕವಯತ್ರಿ: ಮಧುರ‌ವೀಣಾ, ಬೆಂಗಳೂರು

ಮುಗಿಲಿನ ಚಂದ್ರನೆಷ್ಟು ಪ್ರತಿಫಲಿಸುತ್ತಿದ್ದ ನೋಡಲು ಬಿಡುವು ಸಿಗಲಿಲ್ಲ ನೆನ್ನೆಯ ಬುದ್ಧ ಪೌರ್ಣಿಮೆ ನನ್ನಲ್ಲಿ ಹರಡಿದ ಈ ಬೆಳಕು ಹೊಸದು ನನ್ನೊಳು ಹರಡಿದ ಬೆಳಕಿನ ಪ್ರಭೆಯೆಷ್ಟು ಅಳೆಯಲು ಕೋಲು ಸಿಗಲಿಲ್ಲ ಆನಂದಕೆ ಸಿಕ್ಕಿತು ಹೊಸ ವ್ಯಾಖ್ಯೆ ಪ್ರೀತಿಗೆ ದಕ್ಕಿತು ಹೊಸ ರೀತಿ ಮುಂಜಾವು…

ಅನುದಿನ ಕವನ-೫೦೩, ಕವಿ: ರಘೋತ್ತಮ ಹೊ.ಬ, ಮೈಸೂರು, ಕವನದ ಶೀರ್ಷಿಕೆ: ಬುದ್ಧನು ಇಲ್ಲದಿದ್ದರೆ?

ಬುದ್ಧನು ಇಲ್ಲದಿದ್ದರೆ..? ನನಗೆ ಆಗಾಗ ನೋವಾಗುತ್ತದೆ ಸಂಕಟ, ಆತಂಕ, ದುಗುಡ ಬುದ್ಧ ಎಂದರೆ ಸಮಾಧಾನ ಆಗುತ್ತದೆ ಕುಂದಿದ ಶಕ್ತಿ ಮತ್ತೆ ಬರುತ್ತದೆ ಬುದ್ಧನೂ ಇಲ್ಲದಿದ್ದರೆ…? ನನಗೆ ಆಗಾಗ ಅತೀವ ದುಃಖವಾಗುತ್ತದೆ ಗುಡಿಯ ಆಚೆ ನಿಂತಾಗ ನನ್ನಣ್ಣಂದಿರು ನನ್ನಂತೆ ಆಚೆ ನಿಂತಾಗ ಏಕೆಂಬ…

ಅನುದಿನ ಕವನ-೫೦೨, ಕವಿ: ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಪ್ರತಿಬಿಂಬ

ಪ್ರತಿಬಿಂಬ ಸಾಯಕ ನಿಲ್ಲದ ನಾಯಕ ಸ-ಹಿತದ ಕಹಳೆಯೂದುತ್ತಲೆ ಕಳೆದ ದಿನಗಳಲಿ ಐದು ಶತಕ. ಗಾಂಧಿ ವಾದಿ ಅಪ್ಪ ನ ಬಿಂಬ ಮೈ ಮನಗಳ ತುಂಬಾ ಸರಳ ಸಜ್ಜನಿಕೆ ಸಂಸ್ಕೃತಿಗಳ ನಡವಳಿಕೆಯ ಪ್ರತಿಬಿಂಬ! ಕರ್ನಾಟಕ ಕಹಳೆ ಯ ಊದಿ ನಾಡು-ನುಡಿ ಸೇವೆಗೆ ಅಣಿಯಾಗಿ…

ಅನುದಿನ ಕವನ-೫೦೧, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ:ಸಂಭ್ರಮಾಚರಣೆ

ಕರ್ನಾಟಕ‌ ಕಹಳೆ ಡಾಟ್ ಕಾಮ್ ನ ಜನಪ್ರಿಯ ಅನುದಿನ ಕವನ ಕಾಲಂನಲ್ಲಿ ನಿರಂತರ 500 ಕವಿತೆಗಳು ಪ್ರಕಟಗೊಂಡು ಒಂದು ದಾಖಲೆಯೇ ನಿರ್ಮಾಣವಾಗಿದೆ. ನಾಡಿನ, ಜಿಲ್ಲೆಯ ಹಿರಿಯ, ಉದಯೋನ್ಮುಖ ಕವಿಗಳು, ಕವಯತ್ರಿಯರ ಸಹಕಾರ, ಬೆಂಬಲವಿರುವದರಿಂದ ಅನುದಿನ‌ಕವನ-೫೦೦ ಸಂಭ್ರಮ ಆಚರಿಸಲು ಸಾಧ್ಯವಾಗಿದೆ. ಎಲ್ಲರಿಗೂ ಧನ್ಯವಾದಗಳು.…

ಅನುದಿನ‌ ಕವನ:೫೦೦, ಹಿರಿಯ ಕವಿ: ಶೂದ್ರ ಶ್ರೀನಿವಾಸ್, ಬೆಂಗಳೂರು, ಕವನದ ಶೀರ್ಷಿಕೆ: ಸಿದ್ಧಲಿಂಗಯ್ಯ

ಕರ್ನಾಟಕ ಕಹಳೆ ಡಾಟ್ ಕಾಮ್’ ನ ಜನಪ್ರಿಯ ‘ಅನುದಿನ ಕವನ’ ಕಾಲಂ ಆರಂಭವಾಗಿ ಇಂದಿಗೆ 500 ದಿನಗಳಾದವು ಎಂದು ತಿಳಿಸಲು ಹರ್ಷವಾಗುತ್ತಿದೆ. ಈ ಐದನೂರು ದಿನಗಳಲ್ಲಿ ನಾಡಿನ ಹಿರಿಯ, ಕಿರಿಯ, ಪ್ರಸಿದ್ಧ, ಉದಯೋನ್ಮುಖ ಕವಿ-ಕವಯತ್ರಿಯರ ಕವಿತೆ, ಹನಿಗವಿತೆಗಳನ್ನು ನಿರಂತರವಾಗಿ ಪ್ರಕಟಿಸಿದ ಖುಷಿ…

ಅನುದಿನ‌ ಕವನ-೪೯೯, ಕವಿ: ಎ.ಎನ್.ರಮೇಶ್ ಗುಬ್ಬಿ, ಕೈಗಾ, ಕವನದ ಶೀರ್ಷಿಕೆ: ಶುಭಾಶಯ ಶ್ರೀಮತಿ..!

“ಇದು ಹೆಂಡತಿಯ ಹುಟ್ಟುಹಬ್ಬದ ಮೇಲಿನ ಕವಿತೆ. ಪತಿಯ ಪ್ರೀತಿ ಹಾರೈಕೆಗಳ ಭಾವಗೀತೆ. ಅಪ್ಪ-ಅಮ್ಮನ ಮನೆಯಲ್ಲಿ ಕಣ್ಮಣಿಯಾಗಿ ಬೆಳೆದ ಹೆಣ್ಣು, ಅಪರಿಚಿತನ ಮಡದಿಯಾಗಿ ಮನೆ-ಮನಗಳ ಬೆಳಗುವ ಜ್ಯೋತಿಯಾಗಿ ಬೆಳಕ ತುಂಬುವಳು. ಗಂಡ-ಮಕ್ಕಳ ಹುಟ್ಟಿದ ದಿನವನ್ನು ಹಬ್ಬವಾಗಿಸುವ ಅವಳ ಜನ್ಮದಿನ ಎಲ್ಲ ಹಬ್ಬಗಳಿಗಿಂತ ಮನೆಯ…

ಅನುದಿನ ಕವನ-೪೯೭, ಕವಿ:ಅಶ್ವತ್ಥನಾರಾಯಣ, ಮೈಸೂರು, ಕವನದ ಶೀರ್ಷಿಕೆ:ಚೆಲುವಿನ ಕನ್ನಿಕೆ

ಚೆಲುವಿನ ಕನ್ನಿಕೆ ಸುಂದರ ನಾರಿಯು ನಾಚುತ ನಿಂತಳು ಬೆಡಗಿನ ಹುಡುಗಿಯು ಯಾರಿವಳು? ಚೆಂದದ ನಗೆಯಲಿ ಮುಖವನು ಮುಚ್ಚುತ ಹೂವಿನ ಬುಟ್ಟಿಯ ಹಿಡಿದಿಹಳು|| ನಲ್ಲನ ಮಾತನು ಮನದಲಿ ನೆನೆಯುತ ಕನಸಿನ ಲೋಕಕೆ ತೆರಳಿಹಳು| ತಲ್ಲಣ ತೊರೆಯುತ ಭಾವನೆಯರಳಿಸಿ ಮೋಹಕ ನಗೆಯನು ಬೀರಿಹಳು|| ಬದುಕಿನ…

ಅನುದಿನ ಕವನ-೪೯೬, ಕವಯತ್ರಿ:ಲಾವಣ್ಯಪ್ರಭ, ಮೈಸೂರು

ಸುಡುಬಿಸಿಲ ಧಗೆ ವಿರಹ ಮುಕ್ತಾಯಗೊಳ್ಳುವ ಮುನ್ಸೂಚನೆಯಂತೆ ಹೀಗೆ ಹನಿಹನಿ ಹಜ್ಜೆಯಿಟ್ಟು ಹತ್ತಿರವಾದಂತೆಲ್ಲಾ ನೀ ಸನಿಹ…. ಕತ್ತಲ ಸೆರಗನ್ನು ಒದ್ದೆಮುದ್ದೆಯಾಗಿಸಿದ ಉತ್ಸವಕ್ಕೆ ಉಸಿರು ಚೆಲ್ಲಾಪಿಲ್ಲಿ ಬಲುಜೋರು ಬೀಸುಗಾಳಿ ತೂಗುಯ್ಯಾಲೆ ಎಲೆ ಹೂವು ಗಿಡ ಬಳ್ಳಿ ಕಿವಿಗಡಚಿಕ್ಕುವ ಗುಡುಗೋ ಸಿಡಿಲೋ? ಏರುಪೇರಾದ ಎದೆಬಡಿತದ ಹುಯಿಲೋ…?…

ಅನುದಿನ‌ ಕವನ-೪೯೫, ಕವಯತ್ರಿ: ಶೋಭಾ ಮಲ್ಕಿ ಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಗುಪ್ತಗಾಮಿನಿ

ಗುಪ್ತಗಾಮಿನಿ ಅವಳು ತ್ಯಾಗಮಯಿ ಸಹನಾಮಯಿ ತ್ಯಾಗದ ಪ್ರತೀಕವೇ ತಾಯಿ ! ಮಕ್ಕಳ ಬೇಕು ಬೇಡಗಳನ್ನು ತೀರಿಸುವುದರಲ್ಲಿಯೇ ಅವಳ ಆಯುಷ್ಯ – ಭವಿಷ್ಯ ಆಕೆಯೊಂದು ತಪಸ್ವಿ ಸತ್ಸಂಗಗಳೆಲ್ಲವನ್ನೂ ತೊರೆದು ತನ್ನ ಜೀವನವನ್ನೇ ಧಾರೆಯೆರೆಯುವ ‌ ಅವಳೊಂದು ದೇವತೆ ಪೂಜ್ಯ ಪುನೀತೆ ! ತನ್ನೊಡಲ…

ಅನುದಿನ ಕವನ-೪೯೪, ಕವಿ: ಕುಮಾರ ಚಲವಾದಿ, ಹಾಸನ. ಕವನದ ಶೀರ್ಷಿಕೆ: ಕೋಟಿ ದೇವರಿಗೂ ಮಿಗಿಲು

ಕೋಟಿ ದೇವರಿಗೂ ಮಿಗಿಲು   ಬರೆಯಬೇಕಿದೆ ಕವನ ಅವ್ವನ ಬಗೆಗೆ ಶಬ್ಧಗಳಿಲ್ಲ ನಿಘಂಟುವಿದ್ದರೆ ಕಳಿಸಿ ನನಗೆ ನೆಲ ಮುಗಿಲನೆಲ್ಲ ಮೀರಿ ನಿಂತವಳು ಭೂಮಿ ಭಾರವ ತಾ ಹೊತ್ತು ನಕ್ಕವಳು ಎದೆಯಾಮೃತ ಸವಿಗೆ ಯಾವ ಹೆಸರಿಡಲಿ ತಲೆಯ ನೇವರಿಕೆಗೆ ಏನೆಂದು ಕತೆಯಲಿ ಮಡಿಲ…