ರಂಹೊ ಐದು ಹನಿಗವಿತೆಗಳು! ೧ ಕಲ್ಲುಗಳನ್ನೂ ಸ್ಪರ್ಶಿಸುವುದು ಹೂಗಳಿಗೂ ಗೊತ್ತು ಒಣ ಧಿಮಾಕಿನ ಮನುಷ್ಯನದು ಬರೀ ಗತ್ತು!!! ೨ ಬೇಯಬೇಕು… ಬೆಳಕೇ ಆಗಲು..! ನೋಯಬೇಕು.. ಕವಿತೆ ಗೆಲ್ಲಲು..! ೩ ಇದೆ ಎಲ್ಲೋ ಭರವಸೆಯ ತುಣುಕು ಅಳುಕದಿರು ಮನವೇ ಕತ್ತಲೆಗಳ ಕತ್ತು ಹಿಸುಕಿ…
Category: ಅನುದಿನ ಕವನ
ಅನುದಿನ ಕವನ-೪೯೧, ಕವಿ: ಎ.ಎನ್.ರಮೇಶ್. ಗುಬ್ಬಿ, ಕವನದ ಶೀರ್ಷಿಕೆ: ದೀಪ್ತಿ
” ಪ್ರೇಮದ ಮಧುರ ಸಂವೇದನೆಗಳ ಕವಿತೆ. ಒಲವ ಸುಂದರ ಹೊಂಬೆಳಕಿನ ಭಾವಪ್ರಣತೆ ಹೃನ್ಮನಗಳ ಪುಳಕಿಸುವ ಪ್ರೀತಿ, ಪ್ರತಿ ಹೆಜ್ಜೆಗೂ ಸ್ಫೂರ್ತಿಯಷ್ಟೇ ಅಲ್ಲ, ನಡೆವ ಹಾದಿ ಬೆಳಗುವ ಚಿರಂತನ ದೀಪ್ತಿ. ಮುದಗೊಳಿಸುವ ಸಾಲುಗಳ ಅಭಿವ್ಯಕ್ತಿಗೆ ಒಪ್ಪುವ ಮೋಹಕ ಚಿತ್ರ. ಏನಂತೀರಾ..?” – ಪ್ರೀತಿಯಿಂದ…
ಅನುದಿನ ಕವನ-೪೯೦, ಕವಯತ್ರಿ: ಅನಿತಾ ಸಿಕ್ವೇರಾ ಉಡುಪಿ, ಕವನದ ಶೀರ್ಷಿಕೆ: ಅಮ್ಮನಿಗೆ ವಯಸ್ಸಾಗಲಿಲ್ಲ
ಅಮ್ಮನಿಗೆ ವಯಸ್ಸಾಗಲಿಲ್ಲ ಸಾದಾ ಸೀರೆ ಕೂದಲಗಂಟು ನಿರಾಡಂಬರ ಸುಂದರಿ ಅಮ್ಮ. …
ಅನುದಿನ ಕವನ-೪೮೯, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಲೇಖನಿ
ಲೇಖನಿ ಕನ್ನಡ ಸಾಹಿತ್ಯ ಸಾಗರದ ಪರಿ ಬಣ್ಣಿಸಲಸದಳ ಅದರ ಭವ್ಯ ವೈಭವದ ಸಿರಿ ! ಸೂರ್ಯ, ಚಂದ್ರ, ಭೂಮಿ, ಬಾನು ಹೇಗೋ ಆದಿ – ಅಂತ್ಯವಿರದ ಈ ಸಾಹಿತ್ಯವೂ ನಿರಂತರ ಅಮರ ದಿಗ್ಗಜರುಗಳಾದ ರನ್ನ, ಜನ್ನ, ಪೊನ್ನ, ಹರಿಹರ-ರಾಘವಾಂಕ ಕವಿವರ್ಯರು ಸಾಹಿತ್ಯದ…
ಅನುದಿನ ಕವನ-೨೮೮, ಕವಿ: ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಒಮ್ಮೆ ಕ್ಷಮಿಸುಬಿಡು ಅಣ್ಣ
ಒಮ್ಮೆ ಕ್ಷಮಿಸಿಬಿಡು ಅಣ್ಣ ಕ್ಷಮಿಸಿಬಿಡು ಅಣ್ಣ ಜಾತಿ, ಧರ್ಮಗಳ ಮೀರಿದ ನಿನ್ನನ್ನು ಜಾತಿ, ಧರ್ಮಗಳ ಮಧ್ಯೆ ಬಂದಿಯಾಗಿಸಿದ್ದಕ್ಕೆ, ಸ್ಥಾವರಕ್ಕಳಿವುಂಟು ಎಂದ ನಿನ್ನನ್ನೇ ಸ್ಥಾವರವನ್ನಾಗಿಸಿದ್ದಕ್ಕೆ – ಕ್ಷಮಿಸಿಬಿಡು ಅಣ್ಣ ಎಲ್ಲರೊಳೊಂದಾಗಿರಬೇಕೆಂದ ನಿನ್ನನ್ನೇ ದೇವರನ್ನಾಗಿಸಿ ದೂರವಿರಿಸಿದುದಕ್ಕೆ ನಿನ್ನ ಹೆಸರಿನ ಭಜನೆಯಿಂದಲೇ ಹೊನ್ನು ಪಡೆಯುತಿರುವುದಕ್ಕೆ –…
ಅನುದಿನ ಕವನ-೪೮೭, ಕವಯತ್ರಿ: ವಾಣಿ ಲೋಕಯ್ಯ, ಮಂಗಳೂರು, ಕಾವ್ಯ ಪ್ರಕಾರ:ಗಜಲ್
ಗಝಲ್ ಮನದ ತೀರದಿ ನೂರು ಭಾವವು ತೇಲಿ ಬರುತಿದೆ ನೋಡು ಬನದ ಚಿಗುರಲಿ ವಸಂತ ಕೋಗಿಲೆ ಮಧುರವಾಗಿ ಉಲಿದಿದೆ ನೋಡು ಚಿವುಟಿದಷ್ಟು ಚಿಗುರಿ ಬೆಳೆವ ಗರಿಕೆಗೆಳಿಗೆ ಯಾರ ಹಂಗಿದೆ ಹೇಳು ಬೆಂದಷ್ಟು ಚಿನ್ನ ಕುಲುಮೆಯಲಿ ಶುದ್ಧವಾಗಿ ಹೊಳೆದಿದೆ ನೋಡು ತಾನುರಿದು ಲೋಕ…
ಅನುದಿನ ಕವನ- ೪೮೬, ಕವಿ: -ಡಾ.ಶಿವಕುಮಾರ ಮಾಲಿಪಾಟೀಲ ಗಂಗಾವತಿ
ದ್ವೇಷದಿಂದ ಭೂಮಿ ಮೇಲೆ ಗೆದ್ದೋರು ಯಾರಿಲ್ಲ ಆದರೂ ಒಬ್ಬರನೊಬ್ಬರು ಪ್ರೀತಿಸೋದು ಕಲಿತಿಲ್ಲ ಯುದ್ದದಿಂದ ಗೆದ್ದ ಕೋಟೆ ಒಂದು ಉಳಿದಿಲ್ಲ ಆದರೂ ಒಗ್ಗಟ್ಟಾಗಿ ಬಾಳೋದು ಕಲಿತಿಲ್ಲ ಎಲ್ಲ ಉಟ್ಟು ಇಲ್ಲೆ ಬಿಟ್ಟು ಹೋಗುವುದು ಅರಿತಿಲ್ಲ ಎಲ್ಲ ಮಾಯೆಯ ಬೆನ್ನು ಬಿದ್ದು ಹೊರಗೆ ಬರುತಿಲ್ಲ…
ಅನುದಿನ ಕವನ-೪೮೫, ಕವಯತ್ರಿ- ರಂಹೊ, ತುಮಕೂರು
ತಲೆಮಾರುಗಳ ತಮದ ಸಂಘರ್ಷಗಳಲ್ಲಿ ಬೆಳಕೂ ಬೆಂಕಿಯಾಗಿದೆ ಗುರುವೇ… ನಿಶ್ಯಬ್ದವೆಂಬುದೂ ಸದ್ದೇ ಆಗಿ ಮಾತುಗಳೆಲ್ಲ ಮುಳ್ಳಾಗಿವೆ ಸಣ್ಣ ಸಣ್ಣ ತಾವಿನಲ್ಲೂ ಗೋಡೆ ಬೆಳೆದು ಬರವನ್ನೇ ಬೆಳೆಯುತ್ತಿವೆ! ಕಾರುಣ್ಯ ನುಡಿದವರ ಕೊಲೆಗಳಾಗುವ ನೆಲದಲ್ಲಿ ನೀನು ಹಚ್ಚಿ ಹೋದ ಹಣತೆ ಉಸಿರ ಬೇಡುತ್ತಿದೆ! ಕ್ರೌರ್ಯ ಕಾರುಣ್ಯವಾಗಿ…
ಅನುದಿನ ಕವನ-೪೮೪, ಕವಿ:ಶ್ರೀಕಾಂತ ಮಳೆಗಲ್, ಬಳ್ಳಾರಿ, ಕವನದ ಶೀರ್ಷಿಕೆ: ಸಖಿಗೀತಾ
ಸಖಿಗೀತಾ ಮೊದ ಮೊದಲು ನೀ ನನ್ನ ಸಖಿ ಯಷ್ಟೇ ಖಚಿತ; ಬರುತ್ತಾ ಆದೆ ಬಲು ಹತ್ತಿರ …
ಅನುದಿನ ಕವನ-೪೮೩, ಕವಿ: ಹೃದಯಶಿವ, ಬೆಂಗಳೂರು
ನಿನ್ನನ್ನು ಅಗಲುವ ಹೊತ್ತು ಒಂದೆಡೆ ಬಿರಿದ ಭೂಮಿಯ ಬಾಯಿಗೆ ಸೂರ್ಯನ ಕಣ್ಣೀರು ಬೀಳುತ್ತಿದ್ದರೆ ಮತ್ತೊಂದೆಡೆ ಧೋ ಎಂದು ಸುರಿವ ಬಿರುಮಳೆಯ ಎದೆಯಲ್ಲಿ ಧಗಧಗ ಬೆಂಕಿ ಕೈಗೆ ಕೈ ತಾಕಿಸಿ ನೀ ಅಂದೊಮ್ಮೆ ಕಡಲ ಕಿನಾರೆಯಲ್ಲಿ ಒಂದೇ ಒಂದು ಮಾತಾಡದೆ ಕಣ್ಣಿಗೆ ಕಣ್ಣು…