ಹೂವನು ಮುಚ್ಚಿಡಬಹುದು ಕಂಪನು ಬಚ್ಚಿಡಬಹುದೆ? ಮುತ್ತನು ಮುಚ್ಚಿಡಬಹುದು ನಾಚಿಕೆ ಬಚ್ಚಿಡಬಹುದೆ? ದೀಪವ ಮುಚ್ಚಿಡಬಹುದು ಸೂರ್ಯನ ಬಚ್ಚಿಡಬಹುದೆ? ಆನೆಯ ಪಳಗಿಸಬಹುದು ಅಂಕುಶದ ಮೊನೆಯಲ್ಲಿ ಹಕ್ಕಿಯ ಬಂದಿಸಬಹುದು ಪಂಜರದ ನೆರಳಲ್ಲಿ ಮಾನವನಾ ಬಗ್ಗಿಸಬಹುದು ಆಸೆಯ ಇಕ್ಕಳದಲ್ಲಿ ಇರುವೆಗೆ ಖೆಡ್ಡಾ ತೋಡಿದರೆ ಹೆರಿಗೆ ಮನೆಯಾಗಿತ್ತು ಇರುವೆಗೆ…
Category: ಅನುದಿನ ಕವನ
ಅನುದಿನ ಕವನ-೧೩೪೨, ಕವಯಿತ್ರಿ: ಡಾ. ಕೃಷ್ಣವೇಣಿ. ಆರ್. ಗೌಡ, ಹೊಸಪೇಟೆ, ವಿಜಯ ನಗರ ಜಿಲ್ಲೆ, ಕವನದ ಶೀರ್ಷಿಕೆ: ಪ್ರಕೃತಿಯ ಆಟ
ಪ್ರಕೃತಿಯ ಆಟ ಓಡಾಡಿ ಓಡಾಡಿ ಅಂದಿಗೆ ಸೋತು ನಿಂತಾಗ ಅಚ್ಚರಿಯ ಮಳೆ ಸುರಿಯುತ್ತ ಮನದ ಖುಷಿ ತಾಳಲಾಗದೆ ತುಟಿಯ ಕಿರುನಗೆ…. ಒಡಲ ಬೇಗೆ ತಂಪಿಗೆ ಮೋಡದ ಕಿರು ಸ್ಪರ್ಶ ಛಾಯೆ ಕಾಮನಬಿಲ್ಲ ಚಿತ್ರದಿ ನೀಲಿ ಕಿರಣ ಹುಸಿ ನಗೆ ಸೂಚಿಸಿದೆ…. ಹೇಗೆ…
ಅನುದಿನ ಕವನ-೧೩೪೧, ಕವಯಿತ್ರಿ: ಸಮುದ್ಯತಾ ಕಂಜರ್ಪಣೆ, ಬೆಂಗಳೂರು
ತಿಂಗಳ ಕೊನೆ ವಾರದಲ್ಲಿ ಸಿನೆಮಾ – ಗಿನೆಮಾ ಪಾರ್ಟಿ ಪಬ್ಬು ಯಾವುದೂ ಬೇಡ ಮನೆಲೇ ಯಾವುದಾದರೂ ಸಿನೆಮಾ ನೋಡೋಣ ಎನ್ನುವ ಅವಳಿಗೆ.. ಒಂದನೇ ತಾರೀಖಿಗೆ ಅವನ ಇಎಮ್ಐ ಕಟ್ ಆಗುವುದು ಗೊತ್ತಿರುತ್ತದೆ.. ಮತ್ತು ಅವನು ಅದನ್ನು ಹೊಂದಿಸಲು ಅವಳಿಗೆ ಗೊತ್ತಾಗದಂತೆ ಪರದಾಡುವುದು…
ಅನುದಿನ ಕವನ-೧೩೪೦, ಕವಯಿತ್ರಿ: ರೇಣುಕಾ ರಮಾನಂದ, ಅಂಕೋಲ, ಉತ್ತರ ಕನ್ನಡ, ಕವನದ ಶೀರ್ಷಿಕೆ:ಸಾಕಾಗಿದೆ ಅರಬ್ಬೀ ಕಡಲಿಗೆ..
ಸಾಕಾಗಿದೆ ಅರಬ್ಬೀ ಕಡಲಿಗೆ.. ಇಳಿ ಸಂಜೆ ಇಳಿದು ಬೆಸ್ತರ ಕೇರಿಗೆ ಸರಿದರೆ ಮೀನು ತುಂಬುವ ಸದ್ದು ಗರಿಮುರಿ ಬಿಸಿಲಿಗೆ ಒಣಗಿ ಚರಚರ ಆಪ್ತ ಪರಿಮಳ ದಂಡೆಬಿಟ್ಟು ಸೂರ್ಯನ ಬಳಿಗೆ ಎದ್ದೆನೋ ಬಿದ್ದೆನೋ ಎಂದೋಡುವ ಸಮುದ್ರ ಬಂದು ಬಂದು ಕಿರುಚಿ ಹೊಂಯಿಗೆಯಲಿ ಧುಮ್ಮಿಕ್ಕಿ…
ಅನುದಿನ ಕವನ-೧೩೩೯, ಕವಿ: ಶಂಕರ ಎನ್ ಕೆಂಚನೂರು, ಕುಂದಾಪುರ
ಅವಳು ಪ್ರತೀ ಭೇಟಿಗೂ ಒಂದು ಗಾಯದ ಜತೆ ಬರುತ್ತಿದ್ದಳು ತೋರಿಸಿ ಅಳುತ್ತಿದ್ದಳು ಸಮಾಧಾನ ಮಾಡಲು ಬರದ ನಾನು ನನ್ನದೇ ಗಾಯಗಳನ್ನು ತೋರಿಸುತ್ತಿದ್ದೆ ಅವಳು ನನ್ನ ಗಾಯಗಳನ್ನು ನೋಡಿ ಅದರ ಮುಂದೆ ತನ್ನ ಗಾಯ ಏನೂ ಅಲ್ಲವೆಂದು ಸಮಾಧಾನ ಮಾಡಿಕೊಳ್ಳುತ್ತಿದ್ದಳು ಮತ್ತೆ ನನ್ನ…
ಅನುದಿನ ಕವನ-೧೩೩೮, ಹಿರಿಯ ಕವಿ: ಪ್ರೊ. ಅಶೋಕ ಶೆಟ್ಟರ್, ಧಾರವಾಡ, ಕವನದ ಶೀರ್ಷಿಕೆ: ಕಣ್ಣೀರಿನ ಶ್ರಾವಣ
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ಪ್ರೊ. ಎಂ ಎಂ ಕಲ್ಬುರ್ಗಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಅಶೋಕ ಶೆಟ್ಟರ್ ಅವರು ವಾಚಿಸಿದ್ದ ಕವಿತೆ ಕಣ್ಣೀರಿನ ಶ್ರಾವಣ! ಕಣ್ಣೀರಿನ ಶ್ರಾವಣ ಧಾರವಾಡದಲ್ಲಿ ಈ ಶ್ರಾವಣ ಮಳೆಯ ತೇರನೆಳೆಯಲಿಲ್ಲ ರೊಜ್ಜು ರಾಡಿ…
ಅನುದಿನ ಕವನ-೧೩೩೭ ಕವಿ: ಡಾ.ದಸ್ತಗೀರಸಾಬ್ ದಿನ್ನಿ, ಬಳ್ಳಾರಿ, ಕಾವ್ಯ ಪ್ರಕಾರ: ಗಜಲ್
ಗಜಲ್ ತುಟಿಯಿಂದ ಜಾರಿದ ಮಾತೊಂದು ಬೆಂಕಿ ಹಚ್ಚಿತು ಕಣ್ಣಿನ ಬಿನ್ನಾಣದ ನೋಟವೊಂದು ಬೆಂಕಿ ಹಚ್ಚಿತು. ಗೋಸುಂಬಿಗಳ ಬಡಿವಾರದ ಮಸಲತ್ತು ತಾಂಬೂಲವ ನಾಚಿಸಿತು ಉಕ್ಕಿದ ಫಳ್ಳನೆಯ ನಗುವೊಂದು ಬೆಂಕಿ ಹಚ್ಚಿತು. ನೀರನು ಸೋಸಿ ರಕ್ತವನು ಹಾಗೇ ಕುಡಿವ ಕಾಲವಿದು ಪ್ರೀತಿ ಉಣಿಸಿದ ಕೈಯೊಂದು…
ಅನುದಿನ ಕವನ-೧೩೩೬, ಕವಿ: ಚಾಮರಾಜ ಸವಡಿ, ಕೊಪ್ಪಳ, ಕವನದ ಶೀರ್ಷಿಕೆ:ನಾನೂ … ಆಗಿದ್ದೆ
ನಾನೂ … ಆಗಿದ್ದೆ ಬದುಕಿನ ಜಂಜಡಗಳಲ್ಲಿ ಮುಳುಗಿಹೋಗುವ ಮುನ್ನ ನಾನೂ ಕವಿಯಾಗಿದ್ದೆ ಅಕ್ಷರಗಳನ್ನು ಅನ್ನ ಕಿತ್ತುಕೊಳ್ಳುವ ಮುನ್ನ ನಾನೂ ಕತೆಗಾರನಾಗಿದ್ದೆ ತಿಂಗಳ ಖರ್ಚಿನ ಒತ್ತಡ ನೆಮ್ಮದಿ ಕಸಿಯುವ ಮುನ್ನ ನಾನೂ ಕನಸುಗಾರನಾಗಿದ್ದೆ ಏನೋ ಆಗಲು ಹೋಗಿ ಇನ್ನೇನೂ ಆಗಿಹೋಗಿ ಬದುಕಿನ ತಿರುವಿನಲ್ಲಿ…
ಅನುದಿನ ಕವನ-೧೩೩೫, ಕವಯಿತ್ರಿ: ಜಯಲಕ್ಷ್ಮಿ ಪಾಟೀಲ್, ಬೆಂಗಳೂರು, ಕವನದ ಶೀರ್ಷಿಕೆ: ನನ್ನ ರಕ್ತ ಕುದಿಯುವುದಿಲ್ಲ
ನನ್ನ ರಕ್ತ ಕುದಿಯುವುದಿಲ್ಲ ನನ್ನ ರಕ್ತ ಕುದಿಯುವುದಿಲ್ಲ ನೀನು ನನ್ನ ಮನೆಯ ಮಗುವಲ್ಲ ನನ್ನ ರಕ್ತ ಕುದಿಯುವುದಿಲ್ಲ ನಿನ್ನ ನನ್ನ ಧರ್ಮ ಜಾತಿ ಊರು ಕೇರಿ ಒಂದೇ ಅಲ್ಲ ನನ್ನ ರಕ್ತ ಕುದಿಯುವುದಿಲ್ಲ ನಿನ್ನ ನೋವು ಸಾವು ನಾನಪ್ಪಿದ ಸಿದ್ಧಾಂತಕ್ಕೆ ಒಳಪಡುವುದಿಲ್ಲ…
ಅನುದಿನ ಕವನ-೧೩೩೪, ಕವಯಿತ್ರಿ: ಡಾ. ಎಚ್. ಎಸ್. ಅನುಪಮಾ, ಕವಲಕ್ಕಿ, ಉತ್ತರ ಕನ್ನಡ
ಲೋಕವೇ ತಣ್ಣಗಾಗು ಮಲಗಿಸಬೇಕು ಶಿಶುವನ್ನು. ಕಾಣಬೇಕು ಅದು ಬಣ್ಣಿಸಲಾಗದ ಕನಸುಗಳನ್ನು. ನಂಬಬೇಕು ಲೋಕ ತಾನರಿಯಲಾರದ ಶಿಶು ಕಂಡ ಕನಸುಗಳನ್ನು ಉಬ್ಬಿದೆದೆಯ ನಾಯಕನೇ ನಿಲಿಸು ನಿನ್ನ ಉದ್ದುದ್ದ ಪೊಳ್ಳು ಭಾಷಣಗಳನ್ನು. ಕೇಳಿಸಬೇಕು ಮಗುವಿಗೆ ಪ್ರೇಮ ರಾಗದ ಮಟ್ಟುಗಳನ್ನು, ‘ಲಿಂಗ ಮೆಚ್ಚಿ ಅಹುದಹುದೆನುವ’ ನಿತ್ಯ…