ಮೌನವಾಗಿ ಮಾತನಾಡಬೇಕಿತ್ತು ಗಾಢ ಚುಂಬಿಸಿದೆ ಹಚ್ಚಿಕೊಳ್ಳಬೇಕಿತ್ತು ಗಟ್ಟಿ ಬಿಗಿದಪ್ಪಿದೆ ಅಕ್ಕ ನನ್ನ ಪ್ರೇಮ ವ್ಯಕ್ತವಾಗಿದ್ದು ಹೀಗೆ ಹಾದಿ ತಪ್ಪೋಣ ಬಾ ಎಂದೆ ದಡ್ಡ ಪದಶಃ ಅರ್ಥೈಸಿ ಹೆದರಿದ ಕವಿಯಾಗಬೇಕಿತ್ತು ಆ ಸಾಲಿಗಿರುವ ಎಲ್ಲ ಸಾಧ್ಯತೆಗಳನ್ನು ಜಾರಿಗೊಳಿಸುತ್ತಿದ್ದ ಅಯೋಗ್ಯತನಕ್ಕೆ ವ್ಯಾಖ್ಯೆ ನೀನೇ ಗೀಚಿದ…
Category: ಅನುದಿನ ಕವನ
ಅನುದಿನ ಕವನ-೧೩೨೩, ಕವಿ: ಡಾ.ವಡ್ಡಗೆರೆ ನಾಗರಾಜಯ್ಯ, ಬೆಂಗಳೂರು, ಕವನದ ಶೀರ್ಷಿಕೆ: ಸ್ವಾತಂತ್ರ್ಯದ ಸೌಂದರ್ಯ
ಸ್ವಾತಂತ್ರ್ಯದ ಸೌಂದರ್ಯ ಸ್ವಾತಂತ್ರ್ಯೋತ್ಸವ ದಿನದ ಹಿಂದಿನ ಕೆಲವು ದಿನಗಳಿಂದಲೂ ನಾನು ನೋಡುತ್ತಿರುವ ಮೂರು ದೃಶ್ಯಗಳು ದೃಶ್ಯ-1 ನಮ್ಮೂರ ಪುರಾತನ ಗುಡಿಯ ಮುಂದೆ ನಾಳೆಯ ಸ್ವಾತಂತ್ರ್ಯ ದಿನದ ಆಚರಣೆಯ ತಾಲೀಮು ನಡೆಯುತ್ತಿದೆ. ಅರೆಬೆತ್ತಲೆ ಫಕೀರ ಗಾಂಧಿ ತಾತನ ಚಿತ್ರಪಟದ ಮುಂದೆ ನಾಳೆ ಮುಗಿಲೆತ್ತರ…
ಅನುದಿನ ಕವನ-೧೩೨೨, ಪ್ರಸಿದ್ಧ ಕವಿ: ಶಂ.ಗು.ಬಿರಾದಾರ, ಕವನದ ಶೀರ್ಷಿಕೆ: ನಮ್ಮ ಕನಸು
🍀🌺🍀💐 ಕರ್ನಾಟಕಕಹಳೆ ಡಾಟ್ ಕಾಮ್ ನ ಎಲ್ಲಾ ಸಹೃದಯ ಓದುಗ ಬಂಧುಗಳಿಗೆ 78ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು🍀🌺🍀💐 ನಮ್ಮ ಕನಸು ನಾವು ಎಳೆಯರು ನಾವು ಗೆಳೆಯರು ಹೃದಯ ಹೂವಿನ ಹಂದರ ನಾಳೆ ನಾವೆ ನಾಡ ಹಿರಿಯರು ನಮ್ಮ ಕನಸದು ಸುಂದರ ಹಿಂದೂ…
ಅನುದಿನ ಕವನ-೧೩೨೧, ಹಿರಿಯ ಕವಿ: ಎಸ್ ಎಸ್ ಹೊಡಮನಿ, ಹಳ್ಳಿಖೇಡ.ಬಿ. ಬೀದರ
ನಾನೇನೋ ಸುಮ್ಮನಿದ್ದೆ ನನಗೆ ಗೊತ್ತೆ ಇರಲಿಲ್ಲ ಪ್ರೀತಿ ನಿನ್ನ ಮುಗ್ಳನಗೆ ಕಿಡಿಗೆ ಮೈ, ಮನ ಆಯಿತು ಬೆಚ್ಚಗೆ ಯಾಕೆ ಹಾಗೆ ತಿಳಿಯಲೇ ಇಲ್ಲ ಮದುವೆ ಆದೆ ಮೂರು ಮಕ್ಕಳು, ಆರು ಮೊಮ್ಮಕ್ಕಳು ಆದವು ಇನ್ನು ಆ ಪ್ರೀತಿಯ ಲೆಕ್ಕದಲ್ಲೆ ಇರುವೆ ಈಗ…
ಅನುದಿನ ಕವನ-೧೩೨೦, ಕವಿ: ಕೆ.ಬಿ. ವೀರಲಿಂಗನಗೌಡ್ರ, ಬಾದಾಮಿ, ಕವನದ ಶೀರ್ಷಿಕೆ: ಪ್ರೀತಿ ಎಂದರೆ ಸಾಕಿ…
ಪ್ರೀತಿ ಎಂದರೆ ಸಾಕಿ… ಸಾಕಿ.. ಪ್ರೀತಿ ಎಂದರೆ ಗುಟ್ಟಾಗಿ ಗುನುಗುವುದಲ್ಲ ಸುಟ್ಟ ರೊಟ್ಟಿಯಂತಾಗುವುದು ಸಾಕಿ.. ಪ್ರೀತಿ ಎಂದರೆ ಕಾದು ಕೆನೆಗಟ್ಟುವುದಲ್ಲ ಹೆಪ್ಪುಗಟ್ಟಿ ತುಪ್ಪದಂತಾಗುವುದು ಸಾಕಿ.. ಪ್ರೀತಿ ಎಂದರೆ ಹಾರಾಡುವುದಲ್ಲ ಫೀನಿಕ್ಸ್ ಹಕ್ಕಿಯಂತಾಗುವುದು ಸಾಕಿ.. ಪ್ರೀತಿ ಎಂದರೆ ಮಥಿಸುವುದಲ್ಲ ಮಾನವೀಯತೆಯ ಸ್ತುತಿಸುವುದು ಸಾಕಿ..…
ಅನುದಿನ ಕವನ-೧೩೧೯, ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ:ಗಜಲ್
ಗಜಲ್ ನೋವಿನಲ್ಲೇ ಸುಂದರ ಬದುಕ ಹೆರಬೇಕು ಇಲ್ಲಿ ಹೊಸದು ಕಟ್ಟಲಿಕೆ ಕಂಬನಿಯಲ್ಲೇ ಮುತ್ತುಗಳ ಪೋಣಿಸಬೇಕು ಇಲ್ಲಿ ಹೊಸದು ಕಟ್ಟಲಿಕೆ ಮಣ್ಣ ಕಣಗಳಿಂದಲೇ ರೂಪುಗೊಳ್ಳಬೇಕು ಸಾವಿರ ಕೂವೆಗಳ ಹುತ್ತ ಹಾಲಾಹಲದಲ್ಲೇ ಸಂಜೀವಿನಿ ಕಾಣಬೇಕು ಇಲ್ಲಿ ಹೊಸದು ಕಟ್ಟಲಿಕೆ ಸುರಿಸುವ ಬೆವರ ಹನಿಗಳೊಳಗೇ ಮಿಂಚಬೇಕು…
ಅನುದಿನ ಕವನ-೧೩೧೮, ಕವಯಿತ್ರಿ: ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ:ಆಗುವೆ ಮಹಾ ಬುದ್ಧ ಅಷ್ಟೇ!
ಆಗುವೆ ಮಹಾ ಬುದ್ಧ ಅಷ್ಟೇ! ಅತ್ತಿತ್ತ ನೋಡಿ ಸುತ್ತಿ ಹೊರಳಿ ಮರಳಿ ಊಹೂಂ ಏನಿಲ್ಲ ಅಲ್ಲಿ ವ್ಯರ್ಥ ಎಲ್ಲ ಶೇಷಗಳಿಲ್ಲದ ನಿಶ್ಯೇಷ ದೊಡ್ಡ ಶೂನ್ಯ ನೀರವ ಮೌನವನಾಳುವ ನೆನಪುಗಳಷ್ಟೇ ಮೌನದ ನೀರವತೆ ತಾಕದ ನೆನಪಿನ ಒರತೆಗೆ ತಡೆಯೊಡ್ಡಿ ಆಯ್ದ ಕೆಲವಕೆ ಒಡ್ಡು…
ಅನುದಿನ ಕವನ-೧೩೧೭, ಕವಯಿತ್ರಿ: ಲತಾ.ಎಲ್.ಜವಳಿ, ಹೊಸಪೇಟೆ, ಕವನದ ಶೀರ್ಷಿಕೆ: ಅವ್ವ ಮತ್ತು ರೊಟ್ಟಿ, [ಗುಬ್ಬಿಗಳ ಚಿತ್ರ: ಸಿದ್ಧರಾಮ ಕೂಡ್ಲಿಗಿ]
ಅವ್ವ ಮತ್ತು ರೊಟ್ಟಿ ೧ ಇಂದೇಕೋ ಹೆಂಚು ಕ್ಷುದ್ರವಾಗಿದೆ ಹದವಾಗಿ ಬೇಯಬೇಕಿದ್ದ ರೊಟ್ಟಿ ಸುಟ್ಟು ಕರಕಲಾಗುತ್ತಿದೆ ನಿಗಿ ನಿಗಿ ಕೆಂಡವೂ ಮತ್ತಷ್ಟು ಕೆಂಪೇರುವಂತೆ ಬದಲಾಗುತ್ತಿದೆ ಅವ್ವನ ಸುಪ್ತ ನಿರೀಕ್ಷೆಯಂತೆ. ೨ ಇಂದೇಕೋ ಹೆಂಚು ಗುನುಗುಡುತ್ತಿದೆ ಶೃತಿ ಲಯ ತಾಳಗಳ ಗುಂಗಿನಲಿ ರೊಟ್ಟಿ…
ಅನುದಿನ ಕವನ-೧೩೧೬, ಕವಿ: ಮಹೇಶ ಬಳ್ಳಾರಿ, ಕೊಪ್ಪಳ, ಕವನದ ಶೀರ್ಷಿಕೆ:ಪದಕ ಸ್ವಗತ…
ಪದಕ ಸ್ವಗತ: ಕೊರಗುತ್ತಿದೆ ಅಳುತ್ತಿದೆ ಪದಕ ಆಕೆಯ ಕೊರಳ ಕಳಸವಾಗಲಿಲ್ಲವೆಂದು ಬಿಕ್ಕುತಿದೆ ಓಲಂಪಿಕ್ ಆಕೆಯ ಕೊರಳಲ್ಲಿ ಜೀಕುವ ಜೋಕಾಲಿಯಾಗಿ ಪದಕ ಸಂಭ್ರಿಮಿಸಲಿಲ್ಲವೆಂದು ಆಕೆ ಸೋಲಿಸಿದ್ದು ಘಟಾನುಘಟಿಗಳನ್ನು ಕುಸ್ತಿಯಲ್ಲಿ ಮಾತ್ರವೇ ಅಲ್ಲ ಜೀವನದ ಹೋರಾಟದಲ್ಲಿಯೂ .. ದೂರಿದರು, ದೂಡಿದರು ಸಾಧ್ಯವಾದಷ್ಟೂ ಚಿವುಟಿದರು ಎಳೆದಾಡಿದರು…
ಅನುದಿನ ಕವನ-೧೩೧೫, ಕವಿ: ಟಿ.ಪಿ.ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ: ಏಕಾಂತವೆಂದರೆ
ಏಕಾಂತವೆಂದರೆ ಪ್ರಿಯ ಒಲವೆ ಏಕಾಂತವೆಂದರೆ ಒಬ್ಬನೇ ಇರುವುದಲ್ಲ; ಸದಾ ನಿನ್ನ ಜೊತೆಯಾಗಿರುವುದು! ಸವಿ ಒಲವೆ ಏಕಾಂತವೆಂದರೆ ಮಾತಾಡದೇ ನಿಲ್ಲುವುದಲ್ಲ; ಸದಾ ನಿನ್ನೊಡನೆ ಸಂಭಾಷಿಸುತ್ತಿರುವುದು! ಸಿಹಿ ಒಲವೆ ಏಕಾಂತವೆಂದರೆ ನಿನ್ನ ನೋಡುತ್ತಾ ಕೂರುವುದಲ್ಲ; ಸದಾ ನಿನ್ನೊಳಿದ್ದುಬಿಡುವುದು! ನನ್ನೊಲವೆ ಏಕಾಂತವೆಂದರೆ ನಿನ್ನ ನೆನೆಯುತ್ತಿರುವುದಲ್ಲ; ಸದಾ…