ಗುಲ್ಜಾರರ ಕಾವ್ಯ… ಮೂಲ – ಗುಲ್ಜಾರ್ ಕನ್ನಡಕ್ಕೆ – ಎಚ್. ಎಸ್. ಮುಕ್ತಾಯಕ್ಕ 1. ಜಗತ್ತು ಆ ಕ್ಷಣ ಎಷ್ಟು ಸುಂದರವಾಗಿ ಕಾಣುವುದು! ಯಾರಾದರೂ ನಿನ್ನ ನೆನಪು ತುಂಬಾ ಆಗುತ್ತದೆ ಎಂದಾಗ! 2. ಬದುಕು ಇಂದೇಕೋ ನನ್ನ ಮೇಲೆ ಮುನಿದಿದೆ. ಇರಲಿಬಿಡಿ,…
Category: ಅನುದಿನ ಕವನ
ಅನುದಿನ ಕವಿತೆ-೧೫೪೫, ಕವಯಿತ್ರಿ: ಸಂಘಮಿತ್ರೆ ನಾಗರಕಟ್ಟೆ, ಕವನದ ಶೀರ್ಷಿಕೆ:ಹೀಗೊಂದು ದಿನ ಬರಬಹುದು
ಹೀಗೊಂದು ದಿನ ಬರಬಹುದು ಸಿಡಿಮಿಡಿಗೊಂಡ ಸೂರ್ಯನನ್ನು ಶಾಂತಗೊಳಿಸಿ ಮತ್ತೆ ಬರಲೇಳಲು ಜನರು ಕವಿಗಳಾದ ನಮ್ಮತ್ತ ಧಾವಿಸಿ ಬರಬಹುದು ಬಿರಿದು ಬಾಯ್ತೆರೆದ ಇಳೆಯ ದಾಹವನ್ನು ತಣಿಸಲು.. ನಮ್ಮ ಕವಿತೆಗಳಿಂದಲೇ ಅವುಗಳಿಗೆ ನೀರುಣಿಸಲು ಜನರು ನಮ್ಮತ್ತ ಧಾವಿಸಿ ಬರಬಹುದು.. ಹೆಣ್ಣೊಬ್ಬಳ ನಾಲಗೆಯ ಸೀಳಿದರೂ ತುಟಿಕ್ಪಿಟಿಕ್…
ಅನುದಿನ ಕವನ-೧೫೪೪, ಹಿರಿಯ ಕವಯಿತ್ರಿ: ಎಂ ಆರ್ ಕಮಲ, ಬೆಂಗಳೂರು, ಕವನದ ಶೀರ್ಷಿಕೆ: ಬಿಡದಿದ್ದರೆ…
ಬಿಡದಿದ್ದರೆ… ಅಸ್ತಿತ್ವವಿರುವುದು ಯಾರದ್ದೋ ಜೊತೆಗಿನ ಪೈಪೋಟಿಯಲ್ಲಲ್ಲ, ಹೋಲಿಕೆಯಲ್ಲೂ ಅಲ್ಲ ಗುಲಾಬಿಯೊಂದು ಅರಳಿದರೆ ತಾವರೆಯಂತಿಲ್ಲವೆಂದು ಗೊಣಗುವುದಿಲ್ಲ ಬೇವಿನ ಮರವೆಂದೂ ಮಾವಿನಮರಕ್ಕೆ ತನ್ನನ್ನು ತಾನು ಹೋಲಿಸುವುದಿಲ್ಲ ಬುವಿಗೆ ಸೂರ್ಯನಷ್ಟು ಸನಿಹವಿಲ್ಲವೆಂದು ನಕ್ಷತ್ರಗಳು ಯಾವತ್ತೂ ಕೊರಗುವುದಿಲ್ಲ ಯಾರೋ ಗುರುತು ಹಾಕಿಟ್ಟ ಮೈಲಿಗಲ್ಲ ಮುಟ್ಟಲೆಂದು ಹುಚ್ಚರಂತೆ ಓಡಬೇಕಿಲ್ಲ…
ಅನುದಿನ ಕವನ-೧೫೪೩, ಕವಯಿತ್ರಿ: ರೂಪ ಗುರುರಾಜ್, ಕವನದ ಶೀರ್ಷಿಕೆ: ನಮ್ಮೊಳಗಿರುವ ಬೆಳಕು
ನಮ್ಮೊಳಗಿರುವ ಬೆಳಕು ನಿಜ ಹೇಳಲೇ… ನಮ್ಮ ಹಿಂಜರಿಕೆಗೆ ಕಾರಣ ನಮ್ಮೊಳಗಿರುವ ಅಂಧಕಾರವಲ್ಲ ಒಳಗೇ ಇರುವ ಅಗಾಧ ಬೆಳಕಿನದ್ದು ನಮ್ಮೊಳಗಿರುವ ಆಳವಾದ ಭಯ ನಮ್ಮಲ್ಲಿರುವ ಅಸಮರ್ಥತೆಗಳದ್ದಲ್ಲ ನಮ್ಮೊಳಗಿರುವ ಆಳವಾದ ಭಯ ಹೆಪ್ಪುಗಟ್ಟಿರುವ ಅಂತರ್ಶಕ್ತಿಯದ್ದು ನಮ್ಮ ಬಗ್ಗೆ ನಮಗೇ ಅನುಮಾನ ಏನಿದೆ ಅರ್ಹತೆ ನಮಗೆ?…
ಅನುದಿನ ಕವನ-೧೫೪೨, ಕವಿ: ಮಹೇಂದ್ರ ಕುರ್ಡಿ, ಹಟ್ಟಿ, ಕವನದ ಶೀರ್ಷಿಕೆ: ವಿಶ್ವಾಸ
ವಿಶ್ವಾಸ ಕಳಕೊಂಡೆ ಏಕೋ ಮಾನವ ನೀ ಕಳಕೊಂಡೆ ಏಕೋ ನಿಯತ್ತು , ನಂಬಿಕೆ ಕಳಕೊಂಡೆ ಏಕೋ. ಜಾಣ ನೀನೆಂದು ಜಗದಿ ಬೀಗುತಿರುವೆ ಆ ನುಡಿಯನ್ನೇಕೋ ನೀ ಮರೆತಿರುವೆ ಮಾತು ಬಲ್ಲವ ನಾನೊಬ್ಬನೆಂದೇ ಅಹಂಕಾರ ಮದದಿ ಮೆರೆಯುತಲಿರುವೆ. ಕೊಟ್ಟ ಮಾತಿಗೆ ತಪ್ಪಿ ನಡೆಯುವೆ…
ಅನುದಿನ ಕವನ-೧೫೪೧, ಕವಯಿತ್ರಿ: ಲಾವಣ್ಯಪ್ರಭ, ಮೈಸೂರು, ಕವನದ ಶೀರ್ಷಿಕೆ: ನನ್ನ ನಿನ್ನ ನಡುವೆ
ವಿಶ್ವ ಕಾವ್ಯ ದಿನದ ಶುಭಾಶಯಗಳು ನನ್ನ ನಿನ್ನ ನಡುವೆ ನೀನಿದ್ದೀಯೆ ನಾನೂ ಇದ್ದೇನೆ ದಡದ ಎರಡೂ ಬದಿಯಲ್ಲಿ ನಾವಿಲ್ಲ ನಡುವೆ ಹರಿವ ನದಿಯೂ ಇಲ್ಲ ಸೇತುವೆ ಕಟ್ಟುವುದು ಕಷ್ಟಸಾಧ್ಯ. ನೀನಿದ್ದೀಯೆ ನಾನೂ ಇದ್ದೇನೆ ಭೂಮಿ ಆಕಾಶಗಳ ಅಂತರದಲ್ಲಿ ನಾವಿಲ್ಲ ನಡುವೆ ತೇಲುವ…
ಅನುದಿನ ಕವಿತೆ:೧೫೪೦, ಕವಯಿತ್ರಿ: ಸಮುದ್ಯತಾ ಕಂಜರ್ಪಣೆ
ಅವಳಿಗೆ ನಡೆಯುವುದೂ ಕಷ್ಟ. ನೀವು ಗಮನಿಸಿರಬೇಕು ನಾನೂ ಗಮನಿಸಿದ್ದೇನೆ ಆಗಾಗ. ಅವಳ ಬಳಿ ದೊಡ್ಡದೊಂದು ಮೂಟೆಯೇ ಇದೆ.. ಅವಳ ಮುತ್ತಜ್ಜಿ ಅವಳ ಅಜ್ಜಿಗೆ ಕೊಟ್ಟಿದ್ದು. ಅವಳ ಅಜ್ಜಿ ಅವಳಮ್ಮನಿಗೆ ಕೊಟ್ಟಿದ್ದು.. ಅವಳಮ್ಮ ಅವಳಿಗೆ ಕೊಟ್ಟಿದ್ದು.. ನಯ, ನಾಜೂಕು, ಭಯ, ಹಿಂಜರಿಕೆ, ಮೃದುತ್ವ,…
ಅನುದಿನ ಕವಿತೆ-೧೫೩೯, ಕವಯಿತ್ರಿ: ರೇಣುಕಾ ರಮಾನಂದ, ಹೊನ್ನಾವರ ಉತ್ತರ ಕನ್ನಡ ಜಿ.
ನೀನು ವಾಕಿಂಗ್ ಹೊರಟು ಮರೆಯಾಗಿಬಿಡುವ ತಿರುವಿನಲ್ಲಿ ಹೆಸರಿಲ್ಲದ ಹೂವಿನ ಮರವೊಂದಿದೆ …
ಅನುದಿನ ಕವನ-೧೫೩೮, ಕವಯಿತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ:ನಶ್ವರದ ಜೀವ
ನಶ್ವರದ ಜೀವ ಸಿಡಿದೆದ್ದ ಜ್ವಾಲೆಯೊಳು ಮೌನದ ಆಹುತಿ ಅಳುತಿದೆ. ಗೊತ್ತಿಲ್ಲ ಅಳುತಿದೆ…. ಮನ ಪಳ್ಳೆoದು ಆಗಸದ ಮೋಡ ಒಡೆದು ಚೂರಾಗಿದೆ ಇದಕೆ ಮರದ ರೆಂಬೆ ಕೊಂಬೆ ಗಳೆಲ್ಲ ಮಾತಾಡದೆ ಕಣ್ಣೀರು ಸುರಿಸುತ್ತಿವೆ… ಹಿಸುಕಿದೆ ಕತ್ತು ಜೀವನದ ಜ್ವಾಲೆಯಲಿ, ತಲೆಬುಡವಿಲ್ಲದ ದಾರಿಯಲಿ ಯೋ…
ಅನುದಿನ ಕವನ-೧೫೩೭, ಕವಯಿತ್ರಿ: ಮಂಜುಳಾ ಭಾರ್ಗವಿ, ಬೆಂಗಳೂರು,
ನಗೆಯ ನೋಟಕ್ಕೆ ಬೆಳದಿಂಗೊಂದು ತಾಕಬೇಕಿತ್ತು, ಅವಳ ಅಸ್ತಿತ್ವಕ್ಕೆ ಚೂರು ಸುಳಿವು ಕೊಡಬೇಕಿತ್ತು. ಅದೆಷ್ಟೋ ರಣಗಾಯಗಳಿನ್ನೂ ಹಸಿಯಾಗೇ ಇತ್ತು ಆದರೂ ಒಂದೆರಡು ನೋವಗುಳಿಗೆಗಳ ನುಂಗಬೇಕಿತ್ತು. ದಿಕ್ಕುಗಳಾಚೆ ಏನಿದೆ ಎಂದು ಒಮ್ಮೆಯಾದರೂ ಹುಡುಕಬೇಕಿತ್ತು.ಪತನಗೊಂಡ ಶಾಸನಗಳನು ಒಮ್ಮೆ ಪರಿಶೀಲಿಸಬೇಕಿತ್ತು. ಅವನ ಹಕೀಕತ್ತಿನ ಜಗತ್ತಿನೊಳಗೆ ಹೆಜ್ಜೆಗಳ ಲೆಕ್ಕವಿಡಬೇಕಿತ್ತು.…