ನಗೆಯ ನೋಟಕ್ಕೆ ಬೆಳದಿಂಗೊಂದು ತಾಕಬೇಕಿತ್ತು, ಅವಳ ಅಸ್ತಿತ್ವಕ್ಕೆ ಚೂರು ಸುಳಿವು ಕೊಡಬೇಕಿತ್ತು. ಅದೆಷ್ಟೋ ರಣಗಾಯಗಳಿನ್ನೂ ಹಸಿಯಾಗೇ ಇತ್ತು ಆದರೂ ಒಂದೆರಡು ನೋವಗುಳಿಗೆಗಳ ನುಂಗಬೇಕಿತ್ತು. ದಿಕ್ಕುಗಳಾಚೆ ಏನಿದೆ ಎಂದು ಒಮ್ಮೆಯಾದರೂ ಹುಡುಕಬೇಕಿತ್ತು.ಪತನಗೊಂಡ ಶಾಸನಗಳನು ಒಮ್ಮೆ ಪರಿಶೀಲಿಸಬೇಕಿತ್ತು. ಅವನ ಹಕೀಕತ್ತಿನ ಜಗತ್ತಿನೊಳಗೆ ಹೆಜ್ಜೆಗಳ ಲೆಕ್ಕವಿಡಬೇಕಿತ್ತು.…
Category: ಅನುದಿನ ಕವನ
ಅನುದಿನ ಕವನ-೧೫೩೬, ಕವಯಿತ್ರಿ: ಶಾಂತಾ ಪಾಟೀಲ್, ಸಿಂಧನೂರು
ಪುನಃ….ಪುನಃ.. ನಿನ್ನ ನೆನಪಿನಾಳದ ಭಾವ ಕಡಲಿಗೆ ಧುಮುಕುತ್ತೇನೆ. ನಿನ್ನ ನೋಡುವ ಕಾತುರದಿ….ಕೌತುಕದಿ.! ಈಜುತ್ತೇನೆ….ಈಜುತ್ತೇನೆ… ಕೈಕಾಲು ಸೋತರೆ ವಾಸ್ತವದ ದಡಕ್ಕೆ ಬಂದು ಕೊಂಚ ವಿರಮಿಸುತ್ತೇನೆ.! ಪುನಃ ಏಕಾಂತದಿ ನಿನ್ನ ಬಿಟ್ಟಿರಲಾಗದ ಭಾವ ಆವರಿಸಿ ಕಲ್ಪನೆಯ ನಿನ್ನ ನೆನಪಿನ ಕಡಲಿಗೆ ಧುಮುಕುತ್ತೇನೆ.! ಭಾವ ಕಡಲಲಿ…
ಅನುದಿನ ಕವನ-೧೫೩೫, ಕವಿ: ಶರಣಗೌಡ ಬಿ.ಪಾಟೀಲ ತಿಳಗೂಳ ಕಲಬುರಗಿ, ಕವನದ ಶೀರ್ಷಿಕೆ:ಯಾರು ಬದಲಾಗಿದ್ದಾರೆ?
ಯಾರು ಬದಲಾಗಿದ್ದಾರೆ? ಆಯಸ್ಸು ಮುಗಿಯದೆ ಆಯಾಸವಿಲ್ಲದೆ ಭೂಮಿ ಸುತ್ತುತ್ತಿದೆ ಪ್ರತಿಫಲ ಬಯಸದ ನೇಸರ ಬೇಸರಿಲ್ಲದೆ ಬಿಸಿಲು ಬೆಳಕು ನೀಡುತ್ತಿದ್ದಾನೆ ಚಂದ್ರ ನೀಲಿ ಗಗನದಲಿ ನಕ್ಷತ್ರಗಳ ಮಧ್ಯ ತೇಲುತ್ತ ಬೆಳದಿಂಗಳು ಚಲ್ಲುತ್ತಿದ್ದಾನೆ ಮಳೆ ಗಾಳಿ ಉಷ್ಣ ಶೀತ ಸಕಲ ಜೀವಗಳಿಗೂ ನೆರವಾಗಿ ಆಗಾಗ…
ಅನುದಿನ ಕವನ-೧೫೩೪, ಕವಯಿತ್ರಿ: ಅಶ್ವಿನಿ ಬಿ ವಡ್ಡಿನಗದ್ದೆ, ಬೆಂಗಳೂರು
ಹೋಳಿಯ ಬಣ್ಣವಿರಲಿ ಒಂದು ಚೂರು ಪಿಂಕು ಬಲು ತಂಪು ಕಣ್ಣಿಗೆ!! ಬರಲಿ ಬಿಡು ಬಣ್ಣಗಳ ಮಳೆ ಚಿಮ್ಮುತ್ತ ಚೆಲ್ಲುತ್ತ ಬಣ್ಣಗಳ ಬಣ್ಣವನ್ನು!!. ಜೊತೆಗೂಡಿ ನಡೆದಾಡಿ ಆಡುವುದು ಹೇಗೆ ಹೋಳಿಯನ್ನು. ಜೊತೆ ಬಿಟ್ಟು ನಡೆವಾಗ ನೀನು!! ಬಂದು ಬಿಡು ಇತ್ತ ನನ್ನತ್ತ ಆಡಿಬಿಡೋಣ…
ಅನುದಿನ ಕವನ-೧೫೩೩, ಕವಯಿತ್ರಿ: ನಂದಿನಿ ಹೆದ್ದುರ್ಗ
ಒಂದು ನೋಟಕ್ಕಾಗಿ ಹಂಬಲಿಸಿದಾಗೆಲ್ಲ ಸ್ಟೀರಿಂಗ್ ಹಿಡಿದ ಅವನಿಗೆ ಮೂರೇ ನಿಮಿಷಕ್ಕೆ ಹದಿನೆಂಟು ಕಿಮಿ ದೂರದ ಮನೆ ಸಿಗುತ್ತದೆ ಅಥವಾ ಹದಿಮೂರು ಬಾರಿ ತಮ್ಮ ತಂಗಿ ನಾದಿನಿ ಚಿಕ್ಕಪ್ಪ ಕರೆ ಮಾಡುತ್ತಾರೆ ಅಥವಾ ಯಾರಿಗೋ ಹುಷಾರು ತಪ್ಪಿ ಎಮರ್ಜೆನ್ಸಿ ಬೀಳುತ್ತದೆ ಹಣೆಯ ಮೇಲಿದ್ದ…
ಅನುದಿನ ಕವನ-೧೫೩೨, ಕವಯಿತ್ರಿ: ಸಮುದ್ಯತಾ ಕಂಜರ್ಪಣೆ
ಪರಿಚಯ ಸ್ನೇಹವಾಗುವ, ಸ್ನೇಹ ಪ್ರೇಮವಾಗುವ ಘಟ್ಟದಲ್ಲಷ್ಟೇ ಒಲವಿಗೊಂದಿಷ್ಟು ತೂಕ.. ಆಮೇಲೆ ಬದುಕು ಅಂಗಾತ ಬಿದ್ದ ಜಿರಳೆಯಂತೆ. ಕದಲಲಾರದೇ ಸುಮ್ಮನೇ ಒದ್ದಾಡುವ ಅಸಹಾಯಕತೆ. ಒಲವ ಬಿಟ್ಟು ಮುನ್ನಡೆದವರಿಗೂ ಗೊತ್ತು ಎಲ್ಲ ಘನತೆಯನ್ನೂ ಕಳೆದು ಪ್ರೇಮಿಯನ್ನು ಯಾರೋ ಆಗಿಸಿಬಿಡುವ ಗೌರವವೇ ಇಲ್ಲದ ವಿದಾಯಗಳಷ್ಟೇ ಬದುಕನ್ನು…
ಅನುದಿನ ಕವನ-೧೫೩೧, ಕವಿ:ಎಲ್ವಿ (ಡಾ.ಲಕ್ಷ್ಮಣ ವಿಎ, ಬೆಂಗಳೂರು,) ಕವನದ ಶೀರ್ಷಿಕೆ:ನಂಟು
ನಂಟು ತರಕಾರಿ ಅಂಗಡಿಯಲಿ ಬೆಂಡೆ ಕಾಯಿ ತುದಿ ‘ಚಟ್’ ಅಂತ ಮುರಿದು ತೋರಿಸಿ ಎಳೆಕಾಯಿ ಅಂತ ಖಾತ್ರಿಯಾದ ಮೇಲೆಯೇ ತಕ್ಕಡಿಗೆ ಹಾಕುವ ವಿದ್ಯೆ ಕಲಿಸಿದವಳು; ಈ ಅಪರಾತ್ರಿ ವಿನಾಕಾರಣ ನೆನಪಾಗುತ್ತಾಳೆ. ಆ ಮೇಲೆ ಈ ಬೆಂಡೆ ಕಾಯಿಗೆ ‘ಲೇಡಿ ಫಿಂಗರ್’ ಅಂತ…
ಅನುದಿನ ಕವನ-೧೫೩೦, ಹಿರಿಯಕವಿ: ಸುಬ್ರಾಯ ಚೊಕ್ಕಾಡಿ, ಸುಳ್ಯ, ಕವನದ ಶೀರ್ಷಿಕೆ: ಅರ್ಧಾಂಗಿಗೆ
ಅರ್ಧಾಂಗಿಗೆ ಗಮನಿಸಿಯೇ ಇರಲಿಲ್ಲ ನಾನು ಇಷ್ಟು ದಿನ ನಿನ್ನ ಅಸ್ತಿತ್ವವನು,ನೀನಿದ್ದೆ ನೀರಲ್ಲಿ ಬೆರೆತ ಸಕ್ಕರೆಯಂತೆ ಅಥವಾ ಹಾಲಿನೊಳಗಿನ ತುಪ್ಪದಂತೆ! ಕಾಣುವುದೇನೋ ನಾನೇ,ನೀನೋ ಅದೃಶ್ಯ ರೂಪಿ-ಕಾಣಿಸದಂತೆ ಸಕ್ಕರೆಯು ನೀರಿನಲಿ,ಹಾಗೆಯೇ ನೀನಿರುವೆ ನನ್ನ ರಕ್ತದಲಿ,ನರನಾಡಿಗಳಲಿ ನನ್ನ ಅಂಗೋಪಾಂಗಗಳಲಿ,ವ್ಯಾಪಿಸುತ ನನ್ನಲೊಂದಾಗಿ ಮೊದಲ ದಿನ ಹೇಗೆ ಮೌನವೋ…
ಅನುದಿನ ಕವನ-೧೫೨೯, ಕವಿ: ನಾಗೇಶ ನಾಯಕ, ಸವದತ್ತಿ, ಕವನದ ಶೀರ್ಷಿಕೆ: ದೇವರಾಗುವುದು ಸುಲಭ
ದೇವರಾಗುವುದು ಸುಲಭ ಉಳಿಪೆಟ್ಟು ತಿನ್ನುವ ಶಿಲೆಯಷ್ಟೇ ದೇವರಾಗುವುದಿಲ್ಲ, ಉಳಿಯನ್ನೂ ನಯವಾಗಿ ಸಿಹಿಮಾತುಗಳಿಂದ ಕರಗಿಸಿಬಿಡುವ ನಡೆದಾಡುವ ದೇವರುಗಳೂ ಉಂಟು ಈ ನೆಲದ ಮೇಲೆ ತಪ್ಪುಗಳನ್ನೆಲ್ಲ ಎತ್ತಿ ತೋರಿಸದಿದ್ದರೆ ದೋಷಗಳನ್ನು ಖಂಡಿಸದೆ ಅಪ್ಪಿ ಮುದ್ದಾಡಿಬಿಟ್ಟರೆ ಇದಿರಿದಿರು ಸುಖಾಸುಮ್ಮನೆ ಹಾಡಿ ಹೊಗಳಿಬಿಟ್ಟರೆ ಇಲ್ಲಿ ದೇವರಾಗುವುದು ಬಲು…
ಅನುದಿನ ಕವನ-೧೫೨೮, ಹಿರಿಯ ಕವಯಿತ್ರಿ: ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ:ನಕ್ಕಳವಳು….
ನಕ್ಕಳವಳು…. ನಕ್ಕಳವಳು ತನ್ನನೇ ತಾ ನೋಡಿ… ತನಗೇ ಗೊತ್ತಿಲ್ಲದ ತನ್ನ ಹತ್ತು ಹಲವು ಚಿತ್ರಗಳ ನೂರು ಗುಣಗಳ ಹೆಸರುಗಳ ಎಳೆ ಎಳೆಯಾಗಿ ಹೆಣೆದು ಬಂಧಿಸಿದ ಆ ನವಿರು ಬಲೆಯತ್ತ ಮತ್ತೆ ನೋಡುತ ಮಿಸುಕಲಾಗದೆ ಅತ್ತಿತ್ತ ನಿಟ್ಟಿಸುತ್ತ ನಕ್ಕಳವಳು ಮತ್ತೆ…… ತನ್ನನೇ ಅಬಲೆ…