ನಕ್ಕಳವಳು…. ನಕ್ಕಳವಳು ತನ್ನನೇ ತಾ ನೋಡಿ… ತನಗೇ ಗೊತ್ತಿಲ್ಲದ ತನ್ನ ಹತ್ತು ಹಲವು ಚಿತ್ರಗಳ ನೂರು ಗುಣಗಳ ಹೆಸರುಗಳ ಎಳೆ ಎಳೆಯಾಗಿ ಹೆಣೆದು ಬಂಧಿಸಿದ ಆ ನವಿರು ಬಲೆಯತ್ತ ಮತ್ತೆ ನೋಡುತ ಮಿಸುಕಲಾಗದೆ ಅತ್ತಿತ್ತ ನಿಟ್ಟಿಸುತ್ತ ನಕ್ಕಳವಳು ಮತ್ತೆ…… ತನ್ನನೇ ಅಬಲೆ…
Category: ಅನುದಿನ ಕವನ
ಅನುದಿನ ಕವನ-೧೫೨೭, ಕವಿ: ಎ.ಎನ್.ರಮೇಶ್. ಗುಬ್ಬಿ, ಕವನದ ಶೀರ್ಷಿಕೆ:ಅಕ್ಷರ ಬಂಧು!!
“ಅಕ್ಷರಬಂಧು ನಿನಗಿದೋ ಅರ್ಪಣೆ ಈ ಭಾವಪ್ರಣತೆ” ಹೆಚ್ಚೇನೂ ಹೇಳಲಾರೆ, ಇದು ನನ್ನಂತೆ ಬರೆಯುವ ಸಕಲ ಭಾವಜೀವಗಳ ಭಾವಸಂವೇದನೆಗಳ ಹೃದ್ಯಕವಿತೆ. ಬರೆವ ಜೀವಗಳನು ಹಾರೈಸುತ ನಿತ್ಯ ಓದಿ ಸತ್ಯ ಅಂತಃಕರಣ, ಅಕ್ಜರೆಗಳಿಂದ ಮೆಚ್ಚಿ, ಸದಾ ಹರಸುವ ಸಹೃದಯೀ ಅಕ್ಷರಬಂಧುವಿಗೆ ಅರ್ಪಿಸಿದ ಅಂತರಾಳದ ಅನಂತ…
ಅನುದಿನ ಕವನ-೧೫೨೬, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ: ಅಪ್ಪಾ!
ಅಪ್ಪಾ! ಮೆರೆಸುತ್ತಾನೆ ಹೆಗಲಾಗೆ ಹೊತ್ತು ಸಲಹುತ್ತಾನೆ ಕೈ ತುತ್ತ ನಿತ್ತು ಅರಸುತ್ತಾನೆ ನೆರಳಾಗೆ ನಿಂದು ನಡೆಸುತ್ತಾನೆ ಜೊತೆಯಾಗೆ ಬಂದು ಸಾಟಿನೆ ಇಲ್ಲ ನಿನಗೆ ಈ ಜಗವೆ ಸೋತು ಶರಣಾಗಿದೆ ನಿನಗೆ ಅಪ್ಪಾ…ನೀ….ನೆ ವಿಶಾಲ ಬೆಳಕಿನ ಕೊನೆ ಇರದ ಪಂಜು… ತಲೆ ಎತ್ತಿ…
ಅನುದಿನ ಕವನ-೧೫೨೫, ಕವಿ: ಟಿ ಪಿ. ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ: ನೀ…
ನೀ… ನೀ ಸೋತ ದಿನ ಪ್ರೀತಿಗೆ; ಲೋಕ ಒಲಿದಂತೆ ನನಗೆ! * ನೀ ಸೋಲಲಾರೆ ನನಗೆ! ಲೋಕ ಒಲಿಯಲಾರದು ಪ್ರೀತಿಗೆ! * ನಿನ್ನ ಗೆಲುವೆ ಸಾಕೆನಗೆ ಲೋಕದ ಗೊಡವೆ ಬೇಡೆನಗೆ * ನೀ ಸೋತ ದಿನ ಕವಿತೆಯ ಮೌನಾಚರಣೆ! ವಿರಹಕ್ಕೆ ಶೋಕಾಚರಣೆ!!…
ಅನುದಿನ ಕವನ-೧೫೨೪, ಹಿರಿಯ ಕವಯಿತ್ರಿ: ಎಂ ಆರ್ ಕಮಲ, ಬೆಂಗಳೂರು, ಕವನದ ಶೀರ್ಷಿಕೆ:ಒಬ್ಬಂಟಿಯೆನ್ನುವುದೇ ಸುಳ್ಳಿರಬೇಕು!
ಒಬ್ಬಂಟಿಯೆನ್ನುವುದೇ ಸುಳ್ಳಿರಬೇಕು! ನಮ್ಮೊಂದಿಗೆ ನೆಲವೊಂದು ನಡೆಯುತ್ತಿರುತ್ತದೆ ತಂಗಾಳಿಯೊ ಬಿಸಿಗಾಳಿಯೊ ಬೀಸುತ್ತಲೇ ಇರುತ್ತದೆ ಬಾನು ಹಗಲಿರುಳಿಗೆ ತಕ್ಕ ಆಕಾರ ಪಡೆದಿರುತ್ತದೆ ಚಂದ್ರನಂತೂ ನಕ್ಷತ್ರಗಳ ಕಟ್ಟಿಕೊಂಡೇ ತಿರುಗುತ್ತಾನೆ ಬೀದಿಯಲ್ಲಿ ಜನರು ಓಡಾಡುತ್ತಲೇ ಇರುತ್ತಾರೆ ಪಾರ್ಕಿನಲ್ಲಿ ಪಕ್ಕ ಯಾರೋ ಕುಳಿತುಕೊಳ್ಳುತ್ತಾರೆ ಬೇಕೋ ಬೇಡವೋ ತರಕಾರಿಯವರ, ಹೂವಿನವರ…
ಅನುದಿನ ಕವನ-೧೫೨೩, ಕವಿ: ಬಿ.ಪೀರ್ ಬಾಷ, ಹೊಸಪೇಟೆ, ಕವನದ ಶೀರ್ಷಿಕೆ:ನಮ್ಮ ಪಾಲಿಗಿಲ್ಲ ದೊರೆಯ ಕರುಣ
ನಮ್ಮ ಪಾಲಿಗಿಲ್ಲ ದೊರೆಯ ಕರುಣ. ಕೊರಳ ಮೇಲಿಟ್ಟ ಖಡ್ಗದಂತೆ ಚರಿತ್ರೆಯ ಪುಟವನ್ನೂ ಚೂಪಾಗಿಸಿ ಕೊರಳ ಹಿರಿದು, ಕರುಳ ಬಗೆದು ವಿರಾಟ ನೃತ್ಯಗೈದರೂ ಸುಮ್ಮನಿರಬೇಕು. ಸುಮ್ಮನಿರಬೇಕು ನರ ಮೇಧಯಾಗದ ಕೊನೆಗೆ ಕಾಲನ ನಾಲಗೆಯನ್ನೇ ಹವಿಸ್ಸಾಗಿಸಿದೆ ಕಾಲ ಅಸುರನೆಂದು ಹೆಸರಿಸಿದರೂ ಸಾಕು ಹುಲ್ಲು ಕೊಯ್ದಷ್ಟು…
ಅನುದಿನ ಕವನ-೧೫೨೨, ಕವಿ: ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ:ನೀನು ಬರುವವರೆಗೂ……..
ನೀನು ಬರುವವರೆಗೂ………… ನೀನು ಬರುವವರೆಗೂ ನನಗಾದರೂ ಏನು ಗೊತ್ತಿತ್ತು ಪ್ರೇಮವು ಎರಡು ಆತ್ಮಗಳ ಸಮ್ಮಿಲನವೆಂದು ನೋವಿನಿಂದ ಬಿಕ್ಕುವ ಭಾವಗಳ ದೀಪಕ್ಕೆ ಕೈಯಾಸರೆಯೆಂದು – ನನಗಾದರೂ ಏನು ಗೊತ್ತಿತ್ತು ಎದೆಯ ಭಾವಶರಧಿ ಉಕ್ಕೇರಿದಾಗ ತಡೆಗೋಡೆಯಾಗಿ ಸಂತೈಸುವ ಮಳಲ ತೀರವೆಂದು ರೋದಿಸುವ ಕಪ್ಪುಬಿಳಿ ಕನಸುಗಳಿಗೆ…
ಅನುದಿನ ಕವನ-೧೫೨೧, ಕವಯಿತ್ರಿ: ಡಾ. ಭಾರತಿ ಅಶೋಕ್, ಹೊಸಪೇಟೆ, ಕವನದ ಶೀರ್ಷಿಕೆ: ಹಚ್ಚಡದವ್ವ
ಹಚ್ಚಡದವ್ವ ಓ ಹಚ್ಚಡದವ್ವ ನೀನು ಅವ್ವನಿಗೂ ಅವ್ವ! ನನ್ನ ಹಚ್ಚಡದವ್ವ ಹಾಸಿಗೆಯಲಿ ಮೈ ತಂಪು ತಬ್ಬಿ ಹಿತವಾಗಿ ಕಾವಿನಲ್ಲಿ ಸಂತೈಸುವಳು! ಹಗಲು ಬೆಂದ ಅಪಮಾನಕೆ, ಜನರ ಅನುಮಾನಕೆ ಇರುಳಿನಗೂಡ ಸುರಿವ ಕಣ್ಣೀರು ಒರೆಸುವ ಅವ್ವ ನೀನು ನನ್ನ ಪ್ರೀತಿಯ ಹಚ್ಚಡವ್ವ! ಗಂಡಿನ…
ಅನುದಿನ ಕವನ-೧೫೨೦, ಕವಿ: ಪ್ರಕಾಶ ಕೋನಾಪುರ, ಶಿವಮೊಗ್ಗ, ಕವನದ ಶೀರ್ಷಿಕೆ:ಕೆಲವೊಂದು ನೋವುಗಳೇ ಹಾಗೆ…..
ಕೆಲವೊಂದು ನೋವುಗಳೇ ಹಾಗೆ….. ಕೆಲವೊಂದು ನೋವುಗಳೇ ಹಾಗೆ ಹೆಂಡತಿ ಬಿಟ್ಟರೆ ಬೇರೆ ಯಾರೊಂದಿಗೂ ಹಂಚಿಕೊಳ್ಳಲಾಗುವುದಿಲ್ಲ ಗೆಳತಿ ಕೆಲವೊಂದು ನೋವುಗಳನ್ನು ಜೀವದ ಗೆಳೆಯನಿಗೆ ಬಿಟ್ಟರೆ ಗೆಳತಿ ಹೆಂಡತಿಯೊಡನೆಯೂ ಹಂಚಿಕೊಳ್ಳಲಾಗುವುದಿಲ್ಲ ಕೆಲವೊಂದು ನೋವುಗಳನ್ನು ಹೆಂಡತಿ ಜೀವದ ಗೆಳೆಯ ಯಾರೊಂದಿಗೂ ಹಂಚಿಕೊಳ್ಳಲಾಗುವುದಿಲ್ಲ ಅನುಭವಿಸಬೇಕು ನಾವೊಬ್ಬರೇ ಸದಾ…
ಅನುದಿನ ಕವನ-೧೫೧೯, ಕವಿ: ಲಿಂಗರಾಜ ಸೊಟ್ಟಪ್ಪನವರ್, ಹಾವೇರಿ, ಕವನದ ಶೀರ್ಷಿಕೆ:ಪ್ರತಿ ಮುಂಜಾವಿಗೂ ನಿನ್ನದೇ ಹೆಸರು
ಪ್ರತಿ ಮುಂಜಾವಿಗೂ ನಿನ್ನದೇ ಹೆಸರು ವಯಸ್ಸಾಯಿತು ಎಂದೇಕೆ ಹಲುಬುತ್ತಿ ಸರಿದು ಹೋಗುವ ಪ್ರತಿ ಕ್ಷಣವೂ ಮೈದುಂಬಿಕೊಂಡೆ ಸಾಗುತ್ತದೆ ಹರೆಯ ಎಂಬುದು ತುಂಬಿಕೊಂಡ ಎದೆ ಪೃಷ್ಠಗಳಷ್ಟೇ ಅಲ್ಲ ವಯಸ್ಸಲ್ಲದ ವಯಸ್ಸಲ್ಲಿ ಸಿಕ್ಕುಬಿಟ್ಟೆ ನೀನು ಮತ್ತೆ ಹರೆಯ ನೆನಪಾಗಲು ಏನೆಲ್ಲ ಒಪ್ಪಿಸಿಬಿಟ್ಟೆ ಕತ್ತಲಲಿ ಕೈಯಾಡಿಸದೆ…