ಅನುದಿನ ಕವನ- ೪೮೬, ಕವಿ: -ಡಾ.ಶಿವಕುಮಾರ ಮಾಲಿಪಾಟೀಲ ಗಂಗಾವತಿ

ದ್ವೇಷದಿಂದ ಭೂಮಿ ಮೇಲೆ ಗೆದ್ದೋರು ಯಾರಿಲ್ಲ ಆದರೂ ಒಬ್ಬರನೊಬ್ಬರು ಪ್ರೀತಿಸೋದು ಕಲಿತಿಲ್ಲ ಯುದ್ದದಿಂದ ಗೆದ್ದ ಕೋಟೆ ಒಂದು ಉಳಿದಿಲ್ಲ ಆದರೂ ಒಗ್ಗಟ್ಟಾಗಿ ಬಾಳೋದು ಕಲಿತಿಲ್ಲ ಎಲ್ಲ ಉಟ್ಟು ಇಲ್ಲೆ ಬಿಟ್ಟು ಹೋಗುವುದು ಅರಿತಿಲ್ಲ ಎಲ್ಲ ಮಾಯೆಯ ಬೆನ್ನು ಬಿದ್ದು ಹೊರಗೆ ಬರುತಿಲ್ಲ…

ಅನುದಿನ ಕವನ-೪೮೫, ಕವಯತ್ರಿ- ರಂಹೊ, ತುಮಕೂರು

ತಲೆಮಾರುಗಳ ತಮದ ಸಂಘರ್ಷಗಳಲ್ಲಿ ಬೆಳಕೂ ಬೆಂಕಿಯಾಗಿದೆ ಗುರುವೇ… ನಿಶ್ಯಬ್ದವೆಂಬುದೂ ಸದ್ದೇ ಆಗಿ ಮಾತುಗಳೆಲ್ಲ ಮುಳ್ಳಾಗಿವೆ ಸಣ್ಣ ಸಣ್ಣ ತಾವಿನಲ್ಲೂ ಗೋಡೆ ಬೆಳೆದು ಬರವನ್ನೇ ಬೆಳೆಯುತ್ತಿವೆ! ಕಾರುಣ್ಯ ನುಡಿದವರ ಕೊಲೆಗಳಾಗುವ ನೆಲದಲ್ಲಿ ನೀನು ಹಚ್ಚಿ ಹೋದ ಹಣತೆ ಉಸಿರ ಬೇಡುತ್ತಿದೆ! ಕ್ರೌರ್ಯ ಕಾರುಣ್ಯವಾಗಿ…

ಅನುದಿನ ಕವನ-೪೮೪, ಕವಿ:ಶ್ರೀಕಾಂತ ಮಳೆಗಲ್, ಬಳ್ಳಾರಿ, ಕವನದ ಶೀರ್ಷಿಕೆ: ಸಖಿಗೀತಾ

ಸಖಿಗೀತಾ ಮೊದ ಮೊದಲು ನೀ ನನ್ನ ಸಖಿ ಯಷ್ಟೇ ಖಚಿತ;     ಬರುತ್ತಾ ಆದೆ ಬಲು ಹತ್ತಿರ                                   …

ಅನುದಿನ ಕವನ-೪೮೩, ಕವಿ: ಹೃದಯಶಿವ, ಬೆಂಗಳೂರು

ನಿನ್ನನ್ನು ಅಗಲುವ ಹೊತ್ತು ಒಂದೆಡೆ ಬಿರಿದ ಭೂಮಿಯ ಬಾಯಿಗೆ ಸೂರ್ಯನ ಕಣ್ಣೀರು ಬೀಳುತ್ತಿದ್ದರೆ ಮತ್ತೊಂದೆಡೆ ಧೋ ಎಂದು ಸುರಿವ ಬಿರುಮಳೆಯ ಎದೆಯಲ್ಲಿ ಧಗಧಗ ಬೆಂಕಿ ಕೈಗೆ ಕೈ ತಾಕಿಸಿ ನೀ ಅಂದೊಮ್ಮೆ ಕಡಲ ಕಿನಾರೆಯಲ್ಲಿ ಒಂದೇ ಒಂದು ಮಾತಾಡದೆ ಕಣ್ಣಿಗೆ ಕಣ್ಣು…

ಅನುದಿನ ಕವನ-೪೮೨, ಕವಯತ್ರಿ ಹೂವಿನ ಹಡಗಲಿಯ ಶೋಭ ಮಲ್ಕಿಒಡೆಯರ್ ಅವರ ಐದು ಹನಿಗವಿತೆಗಳು!

೫ ಹನಿಗವನಗಳು ೧.ಪ್ರಕೃತಿ….. ಮಳೆಯಾಗುವ ಮುನ್ನ ಒಂದಕ್ಕೊಂದು ಗುಡುಗಿನ ಘರ್ಷಣೆ ; ನಂತರ ನೋಡಲು ಸುಂದರ ಕಾಮನ ಬಿಲ್ಲಿನ ಆಕರ್ಷಣೆ. 2.ಜವಾಬ್ದಾರಿ….. ನೀವು ಯಾವಾಗಲೂ ಎಲ್ಲರ ಮೇಲೂ ಸಿಟ್ಟು ಮಾಡಿಕೊಳ್ಳುವಿರಿ ಹೌದು, ಅದು ನಿಜ ; ಹೇಗೆ ಹೇಳಲಿ….? ಒಬ್ಬ ಜವಾಬ್ದಾರಿ…

ಅನುದಿನ ಕವನ-೪೮೧, ಕವಿ: ಡಾ.ಮೊಗಳ್ಳಿ ಗಣೇಶ, ಹೊಸಪೇಟೆ, ಕವನದ ಶೀರ್ಷಿಕೆ:ಬಿತ್ತಿದ್ದ ಬೆಳಕೋ

ಬಿತ್ತಿದ್ದ ಬೆಳಕೋ ಹೆತ್ತಜ್ಜಿಯರ ಕಾಲದ ಗುಡಾಣ ಮುಟ್ಟಿ ತಟ್ಟಿಸವರಿ ತಬ್ಬಿ ಆಟವಾಡಿದ್ದೆ ಕೂತೇ ಇತ್ತು ನಡು ಮನೆಯ ಧಡೂತಿ ಅಜ್ಜಿಯಂತೆ ಯಾವತ್ತೂ ಕೆಡು ನುಡಿಯದೆ ತುಂಬಿಟ್ಟುಕೊಂಡಿದ್ದಳು ತಲೆಮಾರುಗಳ ತರಾವರಿ ತಳಿಗಳ ಅನಾದಿ ಕಾಲದ ಗರ್ಭವತಿಯಂತೆ ಇಳಿಸಿದ್ದಳು ತಾಯಿ ಅದರೊಳಗೆ ದೇವರ ಗುಡಿಗೂ…

ಅನುದಿನ ಕವನ-೪೮೦, ಕವಿ: ಮಧುರ ಚೆನ್ನ (ಎಸ್.ಮಂಜುನಾಥ್) ಬೆಂಗಳೂರು, ಕವನದ ಶೀರ್ಷಿಕೆ: ಒಂದು ಹನಿ ಕರುಣ

ಒಂದು ಹನಿ ಕರುಣ ಗುಬ್ಬಿ ಗೂಡಲ್ಲಿಂದು ಮತ್ತೆ ಮಬ್ಬು ಆವರಿಸಿತೋ ಇಟ್ಟೆರಡು ಮೊಟ್ಟೆಗಳು ನಟ್ಟಹಗಲಲಿ ಕಳುಯಿತೋ… ನಮ್ಮ ಮೈಯಿಗೆ ನಿಮ್ಮ ತೊಗಲ ಅಂಟಿಸಿಕೊಂಡವರಲ್ಲಯ್ಯ ನಾವು ನಮ್ಮ ಉಸಿರಿಗೆ ನಿಮ್ಮ ಹೆಸರನೇನು ಪೂಸಿಕೊಂಡವರಲ್ಲಯ್ಯ ನಾವು ಆದರೇಕೋ ನಿಮ್ಮ ತೆಮರಿಗೆಮ್ಮ ನೆತ್ತರ ಬಸಿದುಕೊಂಡಿರಯ್ಯ ನೀವು……

ಅನುದಿನ ಕವನ-೪೭೯, ಕವಯತ್ರಿ: ಚನ್ನಮ್ಮ ಎಸ್.ಎಸ್ ಬಾಗಲಕೋಟೆ, ಕವನದ ಶೀರ್ಷಿಕೆ: ನನ್ನಮ್ಮ ಅಮರ, ಗಾಯಕರು: ಆನ್ವರಿ ಕುಮಾರಸ್ವಾಮಿ ಹಿರೇಮಠ, ವಿಶಾಖಪಟ್ಟಣ

ನನ್ನಮ್ಮ ಅಮರ ಅಮ್ಮ ನೀನೆಂದು ಅಜರಾಮರ ನನ್ನ ನೆನಪಿನಲ್ಲಿಎಂದೆಂದಿಗೂ ನೀನು ಸ್ಥಿರ ನಿನ್ನ ನಾಮ ಜಪವೇ ನನಗೆ ಸುಮಧುರ ನನ್ನ ಜೀವಕ್ಕೆ ನೀನೆಂದು ಅಮರ ||1|| ನೈಜತೆಗೆ ನೀಡುತಿದ್ದೆಒತ್ತು ಆಡಂಬರವಿರಲಿಲ್ಲಯಾವೊತ್ತು ಗಾಂಭಿರ್ಯದಿಂದ ಜೀವನ ನಡೆಯುತಿತ್ತು ಜೀವನ ಆನಂದಮಯವಾಗಿತ್ತು ||2|| ನಿನ್ನ ಧ್ವನಿಯ…

ಅನುದಿನ‌ ಕವನ-೪೭೮, ಕವಯತ್ರಿ: ಧರಣೀಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ಋಣಾನುಬಂಧ

ಋಣಾನುಬಂಧ (ಭಾಮಿನಿ ಷಟ್ಪದಿಯಲ್ಲಿ) ಆವ ಜನ್ಮದ ಮೈತ್ರಿ ಕಾಣೆನು ಯಾವ ಪುಣ್ಯದ ಫಲವು ತಿಳಿಯೆನು ನಾವು ಬಂದೆವು ಬುವಿಗೆ ಸತಿಪತಿ ಪಟ್ಟ ಪಡೆಯುತಲಿ| ಕಾವ ದೇವನ ಸೃಷ್ಟಿ ಲೀಲೆಗೆ ಸಾವತನಕವು ಜೊತೆಗೆ ಬಾಳಲು ಭಾವ ಬಂಧುರ ಬೆಸೆದುಬಿಟ್ಟನು ತನ್ನ ನಿಯಮದಲಿ|| ಆವ…

ಅನುದಿನ ಕವನ-೪೭೭, ಕವಯತ್ರಿ: ಮಳವಳ್ಳಿ ನಾಗರತ್ನ, ಕವನದ ಶೀರ್ಷಿಕೆ: ಅರಳುವ ಮೊಗ್ಗು

ಅರಳುವ ಮೊಗ್ಗು ಅರಳುವ ಮೊಗ್ಗೊಂದು ತಾನು ಯಾರ ಸೇವೆಗಾಗಿ ಸೇರುವೆ ಎಂದು ಮೊದಲೇ ಯೋಚಿಸುವುದಿಲ್ಲ ಅರಳುವ ಮೊಗ್ಗೊಂದು ತಾನು ಯಾರ ಸೇವೆಗಾಗಿ ಸೇರುವೆ ಎಂದು ಮೊದಲೇ ಯೋಚಿಸುವುದಿಲ್ಲ ತನ್ನಷ್ಟಕ್ಕೆ ತಾನು ಅರಳುವುದು ಕಂಪಾ ಸೂಸುವುದು ಬೆಳೆಯುವ ಹೆಣ್ಣೊಂದು ತಾನು ಯಾರಿಗಾಗಿ ಬಾಳುವೆ…