ಕವಿತೆಯೆಂದರೆ…… ಕವಿತೆಯೆಂದರೆ ಏನು? ಏನಲ್ಲ? ಕವಿತೆಯೆಂದರೆ ಕತ್ತಲೆ ಬೆಳಕಿನಾಟ ದ ಜೀವನರಂಗ ಮಂಚ. ಕವಿತೆಯೆಂದರೆ ಸಮುದ್ರ ತೀರ ದ ಸತ್ತ ಮೀನು ಅರಳಿಸುವ ಮಲ್ಲಿಗೆ ಸುವಾಸನೆ, ಕವಿತೆಯೆಂದರೆ ಹೆಣ್ಣು ನಾಗರ ಇಟ್ಟ ನೂರೊಂದು ಮೊಟ್ಟೆ ಗಳೊಡೆದು ಬಂದ ನವಿಲುಗರಿಗಳು. ಕವಿತೆಯೆಂದರೆ ಪ್ರೇಯಸಿ…
Category: ಅನುದಿನ ಕವನ
ಅನುದಿನ ಕವನ- ೫೧೪, ಕವಿ: ಎ. ಎನ್. ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ನಗೆಪಾಟಲು
“ಇದು ನಮ್ಮ ನಿಮ್ಮದೇ ಬದುಕಿನ ಕವಿತೆ. ಸುತ್ತಲಿನ ಒತ್ತಡಗಳಿಗೆ ಮಣಿಯದೆ ಮುನ್ನಡೆವ ಪ್ರತಿ ಜೀವದ ಭಾವಗೀತೆ. ಸೈತಾನರ ಕಂಗಳಲ್ಲಿ ಸಂತನೆಂದೂ ನಗೆಪಾಟಲೇ.. ಭ್ರಷ್ಟರ ಬಾಯಲ್ಲಿ ನಿಷ್ಟರ ಬದುಕೆಂದು ಕುಚೋದ್ಯದ ಪರಿಪಾಟಲೇ.. ಇದು ಎಲ್ಲರ ಲೋಕಾನುಭವವೂ ಹೌದು. ಹಲವರ ಸ್ವಾನುಭವವೂ ಹೌದು. ಏನಂತೀರಾ..?” …
ಅನುದಿನ ಕವನ-೫೧೩, ಕವಯತ್ರಿ:ಲಾವಣ್ಯ ಪ್ರಭ, ಮೈಸೂರು
ಎಡಬಿಡದೇ ಸುರಿದ ಹನಿಮಳೆಗೆ ಗರ್ಭದೊಡಲಲಿ ಹಸಿರು ಚಿಗುರು ಸಣ್ಣಗೆ ತೂಗಿ ತೆನೆ… ಬಿಸಿಲ ಮಚ್ಚಿನಲಿ ಬೆತ್ತಲು ಬಯಲು ಬೆಚ್ಚಗಿನ ಬೆಳಕ ತೋಳುಗಳಲ್ಲೀಗ ಸುಖದ ಅಮಲು ಮಳೆ ನಿಂತು ಥಂಡಿಗಾಳಿಯ ಚಳಿ ಬಿಡಿಸಿ ಕೊಂಚಕೊಂಚವೇ ಬಿಸಿಯೇರಿಸುವ ಬಿಸಿಲ ಹುಚ್ಚಿನ ಸುಖಸ್ಪರ್ಶಕೆ ಮೈ ಕಾಯಿಸಿಕೊಂಡವಳ…
ಅನುದಿನ ಕವನ-೫೧೨, ಕವಯತ್ರಿ: ಶೋಭಾ ಮಲ್ಕಿ ಒಡೆಯರ್🖊️, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಐದು ಹನಿಗವನಗಳು
ಐದು ಹನಿಗವನಗಳು 1.ಮಗ👇 ಮದುವೆಯಾಗೋಕಿಂತ ಮುಂಚೆ ನಿಮ್ಮನ್ನು ಹೂವಿನಂತೆ ಜೋಪಾನ ಮಾಡ್ತೀನಿ ಎಂದ ಮಗ ; ಮದುವೆಯಾದಮೇಲೆ ಹೆಂಡ್ತಿ ಕಟ್ಟಿಕೊಂಡು ಖಾಲಿ ಮಾಡ್ದ ಜಾಗ. 2 ಮಕ್ಕಳು👇 ಆಗದಿದ್ದರೆ…..? ಮಕ್ಕಳಾಗಲಿಲ್ಲವಲ್ಲಾ ಎಂಬ ಒಂದೇ ಸೊಲ್ಲು ; ಮಕ್ಕಳಾದರೆ ಬರೆದಿಡಬೇಕಲ್ಲಾ ಅವರಿಗೆ ವಿಲ್ಲು.…
ಅನುದಿನ ಕವನ-೫೧೧, ಕವಿ: ಅಪ್ಪಗೆರೆ ಡಿ ಟಿ ಲಂಕೇಶ್, ಬೆಂಗಳೂರು
ಕಣ್ಣಂಚಿನಲಿ ಪಿಸಿರು ಕಟ್ಟಿದೆ.., ಎದೆಯೊಳಗೇನೋ ಅತ್ತ ಕುರುಹು.., ನಿಲ್ದಾಣಗಳ ದಾಟಿ ಹೋದ ಅವಳ ಹೆಜ್ಜೆಗಳ ಗುರುತು ಕಾಣದೆ ಕತ್ತೆತ್ತಿ ಆಕಾಶ ನೋಡಿದೆ ಅಗಲಿಕೆ ನೋವ ಒಳಹರಿವು ಹೆಚ್ಚಿ ಕಣ್ಣೀರಿನ ನಾಲ್ಕು ಬಿಂದುಗಳು ಕೆನ್ನೆಯ ದಾಟಿ ಎದೆಯ ಮೇಲೆ ತೊಟ್ಟಿಕ್ಕಿ…, ಉಸಿರನ್ನು ಸಂತೈಸಲು…
ಅನುದಿನ ಕವನ-೫೧೦, ಕವಯತ್ರಿ: ಮಧುರ ವೀಣಾ, ಬೆಂಗಳೂರು
ಇಲ್ಲಗಳು ಸೇರಿ ಇದೆಯೆಂದಾಗಬಹುದು ಇಂದುಗಳು ಸೇರಿಯೇ ಮುಂದು ನಾಳಿನಾ ಜೀವನಕೆ ಇಂದೇ ಅಡಿಗಲ್ಲು ಮಥಿಸಿ ಮಥಿಸಿ ಅಮೃತದ ಹುಟ್ಟು ಕಾಳಿಂಗದಂತ ದಿನ ರಾತ್ರಿಗಳ ಕಳೆದು ಕರ್ಮದ ಮರ್ಮವ ಅಗೆದು ಬಗೆದು ಶುಭ್ರ ತಿಳಿ ನಕಾಶೆ ಮೂಡುವುದು ಕಣ್ಮುಂದೆ ಕೊನೆಯಂತಿಹ ಪಯಣಕೆ ಸಹಚರರು…
ಅನುದಿನ ಕವನ-೫೦೯, ಕವಿ: ಸಿದ್ದಲಿಂಗಪ್ಪ ಬೀಳಗಿ.ಹುನಗುಂದ, ಕಾವ್ಯ ಪ್ರಕಾರ: ಹಾಯ್ಕುಗಳು
ಹಾಯ್ಕುಗಳು ೧ ನಂಬಿಕೆಗಿಂಬು ಇದ್ದರದು ಸಂಸಾರ ಬಲು ಸಸಾರ ೨ ನಶ್ವರದಲಿ ಸ್ವರವ ಹುಡುಕಿದ ಮಧುರಗಾನ ೩ ಬಲವಂತದ ಆಲಿಂಗನ; ಕೊರಡು ಅಪ್ಪಿಕೊಂಡಂತೆ ೪ ಕೆಂಡದಾಸಿಗೆ ಮೇಲೆ ಮಲಗಿ; ಸುಖ ನಿದ್ರೆ ಕನಸು ೫ ಅವ್ವನೆದೆಯ ತುಂಬ; ಅಸಂಖ್ಯ ನೋವು ಮುಖದಿ…
ಅನುದಿನ ಕವನ-೫೦೮, ಕವಿ: ವೇಣು ಜಾಲಿಬೆಂಚಿ,ರಾಯಚೂರು, ಕಾವ್ಯ ಪ್ರಕಾರ: ಗಜಲ್
ಗಜ಼ಲ್ ನೀ ಎಷ್ಟಾದರೂ ತಿಳಿ,ತಿಳಿಯಬೇಕಾದದ್ದು ಬೇರೆಯೇ ಇದೆ ನೀ ಎಷ್ಟಾದರೂ ತಿರಸ್ಕರಿಸು ಒಪ್ಪಬೇಕಾದದ್ದು ಬೇರೆಯೇ ಇದೆ ದಿನಾ ಹಗಲು ರಾತ್ರಿ,ಒಂದೇ ರಸ್ತೆಯಿಂದ ಚಲಿಸುವುದಿಲ್ಲ ನೀ ಎಷ್ಟಾದರೂ ಜೋಡಿಸು ಒಂದಾಗಬೇಕಾದದ್ದು ಬೇರೆಯೇ ಇದೆ ದುಃಖಭರಿತ ಎದೆಯ ಕಥೆ ಬಹಳ ಕಹಿ,ಕೇಳಿಯೂ ನೀ ಏನು…
ಅನುದಿನ ಕವನ-೫೦೭, ಕವಯತ್ರಿ: ✍️ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ, ಬೆಳಗಾವಿ, ಕವನದ ಶೀರ್ಷಿಕೆ: ಎಕ್ಕದ ಹಾಲು ಮತ್ತು ಬಳ್ಳಿ ಹೂವು
ಎಕ್ಕದ ಹಾಲು ಮತ್ತು ಬಳ್ಳಿ ಹೂವು ನಾವು ಬದುಕು ಕಟ್ಟುವ ಆತುರದಲ್ಲಿ ದ್ದೇವೆ.. ನೀವು ಜೀವ ಸೌಧ ಕೆಡಹುವ ಧಾವಂತದಲ್ಲಿದ್ದೀರಿ. ನಾವು ಸರಕಾರಿ ಶಾಲೆಯ ಪಾಟಿಗ್ಗಲ್ಲಿನ ಮೇಲೆ , ಜಗತ್ತಿನ ನಕಾಶೆ ಬಿಡಿಸುತ್ತಿದ್ದೇವೆ .. ನೀವು ಶಹರಿನ ಶಾಲೆಗಳ ಎಸಿ ರೂಮ್…
ಅನುದಿನ ಕವನ-೫೦೬, ಕವಯತ್ರಿ: ಧರಣೀಪ್ರಿಯೆ ದಾವಣಗೆರೆ, ಕಾವ್ಯ ಪ್ರಕಾರ:ಮುಕ್ತಕಗಳು
ಸಂಸಾರ (ವೃಷಭ ಪ್ರಾಸದಲ್ಲಿ) ಗಂಡಿರಲಿ ಹೆಣ್ಣಿರಲಿ ಸಹಕಾರ ಹೊಂದಿರಲಿ ಮುಂದಿರಲಿ ಗುರಿಯದುವೆ ಬಾಳಿನಲ್ಲಿ ದಂಡಿನಲಿ ಒಂದಾಗಿ ಸಾಗಿಸುತ ಸಂಸಾರ ಮುಂದಾಗಿ ಜಗದಲ್ಲಿ‐ಧರಣಿದೇವಿ ಬಂದಿರಲು ಜಗದಲ್ಲಿ ಕಾರಣವು ಅವನಿರಲು ಕುಂದುಗಳ ನೀಗಿಸುವ ಭಗವಂತನು ಮಂದಿರದಿ ನೆಲೆಸಿಲ್ಲ ಮನಗಳಲಿ ನೆಲೆಸಿಹನು ಚಂದದಲಿ ಬದುಕಿದರೆ ‐ಧರಣಿದೇವಿ…