ಬಿತ್ತಿದ್ದ ಬೆಳಕೋ ಹೆತ್ತಜ್ಜಿಯರ ಕಾಲದ ಗುಡಾಣ ಮುಟ್ಟಿ ತಟ್ಟಿಸವರಿ ತಬ್ಬಿ ಆಟವಾಡಿದ್ದೆ ಕೂತೇ ಇತ್ತು ನಡು ಮನೆಯ ಧಡೂತಿ ಅಜ್ಜಿಯಂತೆ ಯಾವತ್ತೂ ಕೆಡು ನುಡಿಯದೆ ತುಂಬಿಟ್ಟುಕೊಂಡಿದ್ದಳು ತಲೆಮಾರುಗಳ ತರಾವರಿ ತಳಿಗಳ ಅನಾದಿ ಕಾಲದ ಗರ್ಭವತಿಯಂತೆ ಇಳಿಸಿದ್ದಳು ತಾಯಿ ಅದರೊಳಗೆ ದೇವರ ಗುಡಿಗೂ…
Category: ಅನುದಿನ ಕವನ
ಅನುದಿನ ಕವನ-೪೮೦, ಕವಿ: ಮಧುರ ಚೆನ್ನ (ಎಸ್.ಮಂಜುನಾಥ್) ಬೆಂಗಳೂರು, ಕವನದ ಶೀರ್ಷಿಕೆ: ಒಂದು ಹನಿ ಕರುಣ
ಒಂದು ಹನಿ ಕರುಣ ಗುಬ್ಬಿ ಗೂಡಲ್ಲಿಂದು ಮತ್ತೆ ಮಬ್ಬು ಆವರಿಸಿತೋ ಇಟ್ಟೆರಡು ಮೊಟ್ಟೆಗಳು ನಟ್ಟಹಗಲಲಿ ಕಳುಯಿತೋ… ನಮ್ಮ ಮೈಯಿಗೆ ನಿಮ್ಮ ತೊಗಲ ಅಂಟಿಸಿಕೊಂಡವರಲ್ಲಯ್ಯ ನಾವು ನಮ್ಮ ಉಸಿರಿಗೆ ನಿಮ್ಮ ಹೆಸರನೇನು ಪೂಸಿಕೊಂಡವರಲ್ಲಯ್ಯ ನಾವು ಆದರೇಕೋ ನಿಮ್ಮ ತೆಮರಿಗೆಮ್ಮ ನೆತ್ತರ ಬಸಿದುಕೊಂಡಿರಯ್ಯ ನೀವು……
ಅನುದಿನ ಕವನ-೪೭೯, ಕವಯತ್ರಿ: ಚನ್ನಮ್ಮ ಎಸ್.ಎಸ್ ಬಾಗಲಕೋಟೆ, ಕವನದ ಶೀರ್ಷಿಕೆ: ನನ್ನಮ್ಮ ಅಮರ, ಗಾಯಕರು: ಆನ್ವರಿ ಕುಮಾರಸ್ವಾಮಿ ಹಿರೇಮಠ, ವಿಶಾಖಪಟ್ಟಣ
ನನ್ನಮ್ಮ ಅಮರ ಅಮ್ಮ ನೀನೆಂದು ಅಜರಾಮರ ನನ್ನ ನೆನಪಿನಲ್ಲಿಎಂದೆಂದಿಗೂ ನೀನು ಸ್ಥಿರ ನಿನ್ನ ನಾಮ ಜಪವೇ ನನಗೆ ಸುಮಧುರ ನನ್ನ ಜೀವಕ್ಕೆ ನೀನೆಂದು ಅಮರ ||1|| ನೈಜತೆಗೆ ನೀಡುತಿದ್ದೆಒತ್ತು ಆಡಂಬರವಿರಲಿಲ್ಲಯಾವೊತ್ತು ಗಾಂಭಿರ್ಯದಿಂದ ಜೀವನ ನಡೆಯುತಿತ್ತು ಜೀವನ ಆನಂದಮಯವಾಗಿತ್ತು ||2|| ನಿನ್ನ ಧ್ವನಿಯ…
ಅನುದಿನ ಕವನ-೪೭೮, ಕವಯತ್ರಿ: ಧರಣೀಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ಋಣಾನುಬಂಧ
ಋಣಾನುಬಂಧ (ಭಾಮಿನಿ ಷಟ್ಪದಿಯಲ್ಲಿ) ಆವ ಜನ್ಮದ ಮೈತ್ರಿ ಕಾಣೆನು ಯಾವ ಪುಣ್ಯದ ಫಲವು ತಿಳಿಯೆನು ನಾವು ಬಂದೆವು ಬುವಿಗೆ ಸತಿಪತಿ ಪಟ್ಟ ಪಡೆಯುತಲಿ| ಕಾವ ದೇವನ ಸೃಷ್ಟಿ ಲೀಲೆಗೆ ಸಾವತನಕವು ಜೊತೆಗೆ ಬಾಳಲು ಭಾವ ಬಂಧುರ ಬೆಸೆದುಬಿಟ್ಟನು ತನ್ನ ನಿಯಮದಲಿ|| ಆವ…
ಅನುದಿನ ಕವನ-೪೭೭, ಕವಯತ್ರಿ: ಮಳವಳ್ಳಿ ನಾಗರತ್ನ, ಕವನದ ಶೀರ್ಷಿಕೆ: ಅರಳುವ ಮೊಗ್ಗು
ಅರಳುವ ಮೊಗ್ಗು ಅರಳುವ ಮೊಗ್ಗೊಂದು ತಾನು ಯಾರ ಸೇವೆಗಾಗಿ ಸೇರುವೆ ಎಂದು ಮೊದಲೇ ಯೋಚಿಸುವುದಿಲ್ಲ ಅರಳುವ ಮೊಗ್ಗೊಂದು ತಾನು ಯಾರ ಸೇವೆಗಾಗಿ ಸೇರುವೆ ಎಂದು ಮೊದಲೇ ಯೋಚಿಸುವುದಿಲ್ಲ ತನ್ನಷ್ಟಕ್ಕೆ ತಾನು ಅರಳುವುದು ಕಂಪಾ ಸೂಸುವುದು ಬೆಳೆಯುವ ಹೆಣ್ಣೊಂದು ತಾನು ಯಾರಿಗಾಗಿ ಬಾಳುವೆ…
ಅನುದಿನ ಕವನ-೪೭೬, ಕವಿ: ಮಹಮ್ಮದ್ ರಫೀಕ್ ಕೊಟ್ಟೂರು, ವಿಜಯನಗರ ಜಿಲ್ಲೆ, ಕವನದ ಶೀರ್ಷಿಕೆ: ಆಲದಮರ
ಆಲದ ಮರ ಆಲದ ಮರ ಮಣ್ಣಿಗೆ ಬೇರಿನಿಂದಷ್ಟೇ ಅಲ್ಲ ಬಿಳಿಲುಗಳೂ ಮಣ್ಣ ಆಸರೆಯ ಬೇಡಿ ಹೆಜ್ಜೆ ಮೇಲೊಂದ್ ಹೆಜ್ಜೆನಿಟ್ಟು ಎಪ್ಪತ್ತೈದೂ ವಸಂತಗಳ ಪೂರೈಸಿದೆ ಎಳೆವೆಯಲ್ಲೇ ಉದುರಿದ ಹಸಿರು ಎಲೆಗಳು ಹೋರಾಟದ ಹಾದಿಯೊಳು ಆಯಸ್ಸನ್ನು ಪೂರ್ಣಗೊಳಿಸದೇ ಮಣ್ಣಾದ ಎಲೆಗಳು ಮಣ್ಣ ಋಣ ಕಳೆದುಕೊಂಡು…
ಅನುದಿನ ಕವನ-೪೭೫, ಕವಿ: ಎ. ಎನ್.ರಮೇಶ್ ಗುಬ್ಬಿ, ಕವನದ ಶೀರ್ಷಿಕೆ:ಬವಣೆ
ಬವಣೆ ನಮ್ಮನ್ನು ನೋಯಿಸುವುದು ಜಗವಲ್ಲ.. ಜನಗಳಲ್ಲ.. ನಮ್ಮದೇ ನಿರೀಕ್ಷೆಗಳು.! ನಮ್ಮನ್ನು ನರಳಿಸುವುದು ಕಾಲ.. ಘಟನೆಗಳಲ್ಲ.. ನಮ್ಮದೇ ಕನಸುಗಳು..! ನಮ್ಮನ್ನು ಸೋಲಿಸುವುದು ಸಮಸ್ಯೆ.. ಸವಾಲುಗಳಲ್ಲ.. ನಮ್ಮದೇ ದೌರ್ಬಲ್ಯಗಳು..! ನಮ್ಮನ್ನು ಕಣ್ಣೀರಿಡಿಸುವುದು ಕಷ್ಟ.. ಕಾರ್ಪಣ್ಯಗಳಲ್ಲ.. ನಮ್ಮದೇ ಕಾಮನೆಗಳು..! ನಿರ್ಮೋಹಿ ನಿರ್ಲಿಪ್ತರಾಗಿ ನಡೆದರಷ್ಟೆ ಇಲ್ಲಿ ನಿರಾಳ.!…
ಅನುದಿನ ಕವನ-೪೭೪, ಕವಿ: ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ:ಈಗೀಗ ತೀರಾ ಕಷ್ಟವಾಗುತ್ತಿದೆ
ಈಗೀಗ ತೀರಾ ಕಷ್ಟವಾಗುತ್ತಿದೆ ಈಗೀಗ ತೀರಾ ಕಷ್ಟವಾಗುತ್ತಿದೆ ನನ್ನ ಬಲಗಣ್ಣು ತಾನು ನೋಡ್ತಿರೋದೇ ಸರಿ ಅಂತಿದೆ ನನ್ನ ಎಡಗಣ್ಣು ತಾನು ನೋಡ್ತಿರೋದೇ ಸರಿ ಅಂತಿದೆ ಈಗ ಎರಡೂ ವಿರುದ್ಧ ದಿಕ್ಕಿಗೆ ನೋಡ್ತಿರೋದರಿಂದಲೇ ನಾನು ಯಾವುದನ್ನೂ ನೆಟ್ಟಗೆ ನೋಡಲಿಕ್ಕಾಗ್ತಿಲ್ಲ – ಈಗೀಗಾ ತೀರಾ…
ಅನುದಿನ ಕವನ-೪೭೩, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಜಿಂದಾಲ್, ಬಳ್ಳಾರಿ ಜಿಲ್ಲೆ, ಕವನದ ಶೀರ್ಷಿಕೆ: ಇಳೆಯ ಎಲೆ
ಇಳೆಯ ಎಲೆ ಬೆವರ ಗುಂಡಿನ ಮೊಳಕೆಗೆ ನೇತಾಡುತ್ತಿವೆ ಸತ್ತ ಪದಕಗಳು ಇದಕೆ ಬೇಸತ್ತ ಎಲೆಗಳು ಒಣಗಿ ಇಳೆಗೆ ಇಳಿಯುತ್ತಿವೆ…. ಜಾಗಟೆಯ ಹಲಗೆಗೆ ನೇಸರದ ಮಂಕುತನ, ಗೊತ್ತಿಲ್ಲ, ಹೆಗಲು ಮಡಚದೆ ಎದೆಯುಬ್ಬಿ ಕಾಯುತಿದೆ ಹಣೆಬರಹದ ಬಟ್ಟೆ…. ಚುಚ್ಛುತಿದೆ ಸಮರದ ರೆಕ್ಕೆ ಚಂಡೂವಿನ ಆಶ್ವಾಸನೆಗೆ…
ಅನುದಿನ ಕವನ-೪೭೨, ಕವಿ: ಎಸ್.ಕಲಾಧರ, ಶಿಡ್ಲಘಟ್ಟ
ನನಗೆ ದಕ್ಕಿದ್ದು ನೋವಷ್ಟೇ ಇದಕ್ಕೆ ದೂರಲಾರೆ ನಾನು ಯಾರನ್ನೂ ಕೊನೆಗೆ ನನ್ನನ್ನೂ ಸ್ವಮರುಕದ ಅಸಹ್ಯ ಸಾಲುಗಳಾಗಲಿ ಅಥವಾ ಯಾರನ್ನೋ ದೂಷಿಸಿ ನೋಯಿಸುವ ದ್ವೇಷವಾಗಲಿ ನನಗೆ ಇಷ್ಟವಿಲ್ಲದ್ದು ನಿಗೂಢ ಬದುಕಿನ ಈ ಪಥದಲ್ಲಿ ಅವರವರ ಕಕ್ಷೆ ಅವರದು ಅವರವರ ಕಷ್ಟ ಅವರದು ಬಹುಷಃ…