ಅನುದಿನ ಕವನ-೪೬೨, ಕವಯತ್ರಿ: ವಿನುತಾ ಎಸ್, ಬೆಂಗಳೂರು

ಅರ್ಧಂಬರ್ಧ ಗೀಚಿದ ಕವಿತೆಯೊಂದಿದೆ, ಯಾವ ನೋವಿಗಿಂತ ಕಡಿಮೆಯೇನಲ್ಲ ಅಪೂರ್ಣ ಕವಿತೆಯೊಂದಿಗೆ ಕಳೆಯುವುದು, ರಾತ್ರಿಯೆಲ್ಲಾ ವಿಪರೀತ ಕಾಡುತ್ತದೆ ಪದಗಳಿಗಾಗಿ ತಡಕಾಡುತ್ತದೆ… ಪದಕೆ ಪದ ಜೋಡಿಸಿ, ಪ್ರಾಸಗಳ ಹೆಣೆದು, ಕಟ್ಟಲಾಗಲಿಲ್ಲ ಕವಿತೆಯನ್ನು ಅರ್ಧ ಕವಿತೆ ಪೂರ್ತಿಯಾಗಲಿಲ್ಲ, ಸುಲಭವೇನಲ್ಲ ಕವಿತೆ ಕಟ್ಟುವುದು… ಕೊನೆಗೊಮ್ಮೆ ತಿಳಿಯಿತು ಕವಿತೆ…

ಅನುದಿನ ಕವನ-೪೬೧, ಕವಿ: ಕ್ಯಾದಿಗೆಹಾಳ್ ಉದೇದಪ್ಪ, ಹೊಸಪೇಟೆ, ಕವನದ ಶೀರ್ಷಿಕೆ: ದಾನವರಾಗದಿರಿ….. ಗಾಯನ: ಅನ್ವರಿ ಕುಮಾರಸ್ವಾಮಿ ಹಿರೇಮಠ, ವಿಶಾಖಪಟ್ಟಣ

ದಾನವರಾಗದಿರಿ…… ದಾನವರಾಗದಿರಿ ನೀವು ಮಾನವರಾಗಿರಿ ಈ ಸೃಷ್ಟಿಯ ಮುಂದೆ ಎಲ್ಲಾ ಕ್ಷಣಿಕ ಬಾಳಿರಿ ಅರಿತುಕೊಳ್ಳಿರಿ. ಜಗದ ಅದ್ಭುತ ಪವಾಡಗಳು ಸೃಷ್ಟಿಯ ಲಯದಲಿ ಸಕಲ ಜೀವಿಗಳ ವಿಸ್ಮಯವು ಪ್ರಕೃತಿ ಜಾಲದಲಿ ಸುನಾಮಿ ಅಲೆಗಳ ಅರ್ಭಟವು ಅಬ್ಧಿಯ ಗರ್ಭದಲಿ ಅಗ್ನಿಜ್ವಾಲೆ ಕುದಿಯುತ್ತಿದೆ ಭೂಮಂಡಲದ ಆಳದಲಿ…

ಅನುದಿನ ಕವನ-೪೬೦, ಕವಿ: ವೆಂಕಟೇಶ ಸಂಪ, ಸಾಗರ

ಕಡಲತಡಿಯೊಳಗಿಂದ ಭೋರ್ಗರೆವ ನಿನ್ನಂದ ಅರಿಯದಾದರು ಆದಿ ಅಂತ್ಯವನ್ನಾ!! ಮೇಲೆದ್ದು ಹಾರ್ಯಾರಿ ಕುಣಿವ ಚಿಗರೆಯ ತೆರದಿ ಕಾಲಡಿ ನುಸುಳಿ ತೆರಳಿದ ತೆರೆಯ ಪರಿಯನ್ನಾ!! ನೇಸರನ ನಗುವನ್ನ ಬೆಳದಿಂಗಳ ಚಂದಿರನ ಸೌಂದರ್ಯ ವೃದ್ಧಿಸುವ ಬಂಗಾರದಲೆಗಳ ಚೆಂದವನ್ನಾ!! ಕಾದ ಮನಸಿನ ಕಾವು ದಣಿದ ದೇಹದ ದಾಹ…

ಅನುದಿನ ಕವನ-೪೫೯, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಜಿಂದಾಲ್, ತೋರಣಗಲ್ಲು, ಕವನದ ಶೀರ್ಷಿಕೆ: ಕನಸ ಹನಿ

ಕನಸ ಹನಿ ನೆನಪಿನ ಕಣ್ಣ ಕನಸಿಗೆ ಕಣ್ರೆಪ್ಪೆ ಜಿಗಿದು ತುಂಟಾಟವಾಡಿ ಸಣ್ಣ ಹನಿ ಹೊರ ಬಂದು ನಲಿದಾಡಿದೆ…. ಜೀವ ಚಪ್ಪರದ ಹಾದಿಗೆ ಯಜ್ಞಕುಂಡದ ಭಾದೆ ಬಿಳಿಯ ಬಾಳೆ ದಿಂಡಿಗೆ ಮುಳ್ಳ ಗುಲಾಬಿಯ ಸೆಳೆತ ಹಸಿರ ಹಂದಿರ ಗರಿಗೆ ಅರಿಶಿಣ ಕೊಂಬು ವ್ಯಂಗ್ಯವಾಗಿ…

ಅನುದಿನ‌ ಕವನ-೪೫೮, ಕವಿ: ಮನು ಪುರ, ತುಮಕೂರು, ಕವನದ ಶೀರ್ಷಿಕೆ: ಕರ್ಣ

ಕರ್ಣ ಹೆತ್ತವಳಿಗೋ ಮರ್ಯಾದೆಯೇ ಮುಖ್ಯವಾಗಿತ್ತು ನೀರ ಮೇಲೆ ತೇಲಿ ಬಿಟ್ಟಳು ಚೊಚ್ಚಲ ಮಗುವನ್ನೇ…! ಮಗದೊಬ್ಬಳೊ ಕಾದು ಕಾದು ಸೋತಿದ್ದಳು ಕಾರ್ಗತ್ತಲ ದಾರಿಯಲ್ಲಿ ಬೆಳಕು ಸಿಕ್ಕಷ್ಟೇ ಖುಷಿಯಿಂದ ಲಾಲಿಸಿದಳು ಪಾಲಿಸಿದಳು ಜೀವಕ್ಕಿಂತಲೂ ಹೆಚ್ಚಾಗಿ ನನ್ನನ್ನೆ…! ನನ್ನ ತೊಡೆಯನ್ನೇ ಕೊರೆಯುತ್ತಿದ್ದರೂ ನೆಮ್ಮದಿಯ ನಿದಿರೆಗಾಗಿ ಸಹಿಸಿ…

ಅನುದಿನ‌ ಕವನ-೪೫೭, ಕವಯತ್ರಿ: ರಂಹೊ (ರಂಗಮ್ಮ ಹೊದೆಕಲ್) ತುಮಕೂರು

ಅಪ್ಪ ಮಾಡಿಟ್ಟ ಆಸ್ತಿ,ಮನೆ ಕಾಪಿಟ್ಟುಕೊಳ್ಳಲು ಹೆಣಗುವ ನಿಮಗೆ ಜೀವಕೋಶದ ಯಾವ ಭಾಷೆಯೂ ಅರ್ಥವಾಗಲಿಕ್ಕಿಲ್ಲ! ನಿಮ್ಮ ಕಣ್ಣಲ್ಲಿ ಸದಾ ಕೆಂಡದ ಮಳೆ! ಬೆಂದು ಬದುಕಿದ ನಮಗೆ ಕೆಂಡ ಹಾಯುವುದು ಕಷ್ಟವಾ!? ನೀವು ಚಲ್ಲಿಕೊಂಡು ಹೋದ ಅಷ್ಟೂ ಮಾತುಗಳನ್ನು ಮರೆಸುವ ಬಂಗಾರದಂತಹ ಅಕ್ಷರಗಳಿವೆ ನಮ್ಮ…

ಅನುದಿನ‌ಕವನ-೪೫೬, ಕವಯತ್ರಿ: ಶೋಭಾ ಮಲ್ಕಿ ಒಡೆಯರ್ 🖋 ಹೂವಿನ ಹಡಗಲಿ, ಕವನದ ಶೀರ್ಷಿಕೆ: ಯುಗಾದಿ

🌿 ಯುಗಾದಿ 🌿 ಯುಗ – ಯುಗದ ಆದಿ ಈ ಯುಗಾದಿ ಪ್ರತಿ ವರುಷದ ಹೊಸ ಆರಂಭಕ್ಕೆ ಬುನಾದಿ ! ಎಲ್ಲೆಲ್ಲೂ ಹಸಿರು ಕಂಗೊಳಿಸುತಿದೆ ಕಣ್ಗಳಿಗೆ ಹಬ್ಬದ ನೋಟ ಗಿಡ, ಬಳ್ಳಿ, ಹೂವು, ಎಲೆ, ಚಿಗುರೊಡೆದು ಘಮಿಸುತ್ತಿದೆ ಇದು ಪ್ರಕೃತಿಯ ಆಟ…

ಅನುದಿನ‌ ಕವನ-೪೫೫, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕಾವ್ಯ ಪ್ರಕಾರ: ಗಜಲ್

ಗಜ಼ಲ್ ನೋವು ಕೇಳದವರ ಮುಂದೆ ಬಿಕ್ಕಬೇಡ ಸುಮ್ಮನೆ ಕರುಣೆ ಇಲ್ಲದವರ ಇದಿರು ನೋಯಬೇಡ ಸುಮ್ಮನೆ ಇಲ್ಲಿ ಯಾರ ದುಃಖಕ್ಕೂ ಯಾರಿಗೂ ಮಿಡಿಯುವ ಮನಸಿಲ್ಲ ವಿನಾಕಾರಣ ಎಲ್ಲರ ಬಳಿ ಎದೆತೆರೆದು ಕೊರಗಬೇಡ ಸುಮ್ಮನೆ ನಿಜ ಪ್ರೀತಿಯನ್ನೇ ಅಪಹಾಸ್ಯ ಮಾಡಿ ನಗಾಡುವರು ಮಂದಿ ಹಿಡಿ…

ಅನುದಿನ ಕವನ-೪೫೪, ಕವಯತ್ರಿ: ಸುಹಾಸಿನಿ, ಬೆಂಗಳೂರು

ಅಕ್ಷರವೇ ಬರದ ನಿನ್ನೆದುರು ನಾನೊಂದು ಮಹಾಕಾವ್ಯವನ್ನೇ ತೆರೆದಿಟ್ಟಿದ್ದೆ. ವಿದ್ವಾಂಸರೂ ನಾಚುವಂತೆ ನೀನು ಓದುತ್ತಲೇ ಹೋದೆ. ಮುಖಪುಟವ ಹಿಡಿದು ಮೊದಲಿಗೆ ಮುತ್ತಿಟ್ಟೆ ಮೂಗಿನ ತುದಿಗೆ ಪೀಠಿಕೆಯಲ್ಲೆ ನಿಂತಿದ್ದೆ ಒಂದು ಗಳಿಗೆ. ಕತ್ತಿನ ಇಳಿಜಾರಿನಗುಂಟ ನಿನ್ನ ಬಿಸಿಯುಸಿರಿನಿಂದುರಿದುವು ನೂರೆಂಟು ಕವಿತೆಗಳು.. ಕಟ್ಟಿದ ತುರುಬಿಗೆ ಕೈಯಿಟ್ಟು…

ಅನುದಿನ ಕವನ-೪೫೩, ಕವಯತ್ರಿ: ವಸು ವತ್ಸಲೆ, ಬೆಂಗಳೂರು

ಮನಸ್ಸು ಮರ್ಕಟಿಗರ ಸಂತೆಯಲಿ ಮಾರಾಟಕ್ಕಿದೆ…. ಬದುಕು ಯಾರದೋ ದರ್ದಿಗೆ ಬಿಕರಿಯಾಗಿದೆ… ನಾಳೆ ಅರಳ ಬೇಕಿರುವ ಮನಗಳು ಇಂದೇ ಹಾಳಾಗುತ್ತಿವೆ! ಯಾರು ಬಿತ್ತಿದರೋ ವಿಷದ ಬೀಜ ಮೊಳೆವ ಮುನ್ನ ಚಿವುಟಬೇಕಿದೆ ಈಗಿದ್ದವರು ಇಂದಿಲ್ಲ ನಾಳೆ ನಂಬಿಕೆಯಷ್ಟೇ…. ತಲೆಯ ಮೇಲಿನ ಹಿಜಾಬು ತಲೆ ಕಾಯುವುದಿಲ್ಲ….…